ಈಗ ಈ ಟೈಟಲ್ ಯಾಕೆ ಇಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಜನ ಹುಡುಕಾಡುತ್ತಿದ್ದಾರೆ. ವಿಜಯ್ ಅವರನ್ನು ಅಭಿಮಾನಿಗಳು ಮುದ್ದಾಗಿ ರೌಡಿ ಎಂದು ಕರೆಯುತ್ತಾರೆ, ಹಾಗಾಗಿ ಈ ಟೈಟಲ್ ಇಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೇನಿಲ್ಲ, ವಿಜಯ್ ಸಿನಿಮಾದಲ್ಲಿ ರೌಡಿಯಾಗಿ ಬಿಹೇವ್ ಮಾಡ್ತಾನೆ, ಅದಕ್ಕೆ ಈ ಟೈಟಲ್ನೊಂದಿಗೆ ಮುಂದೆ ಹೋಗ್ತಿದ್ದಾರೆ ಎಂದು ಕೆಲವರು ಹೇಳ್ತಿದ್ದಾರೆ. ಯಾವುದು ಸರಿ ಅಂತ ಡೈರೆಕ್ಟರೇ ಹೇಳಬೇಕು. 'ಕತ್ತಿ ನಾನೇ... ರಕ್ತ ನನ್ನದೇ... ಯುದ್ಧ ನನ್ನ ಜೊತೆನೇ' ಎಂದು ವಿಜಯ್ ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ 'ರೌಡಿ ಜನಾರ್ದನ್' ಪ್ರೀ ಲುಕ್ ಬಿಡುಗಡೆ ಮಾಡಿದ್ದಾರೆ.