ರಜನಿನ ಭೇಟಿಯಾದಾಗ, ಏನು ಅಶ್ವತ್ ಈ ರೀತಿ ಬರೆದಿದ್ದೀಯಾ, ಫೆಂಟಾಸ್ಟಿಕ್.. ಫೆಂಟಾಸ್ಟಿಕ್ ಅಂತ ಹೊಗಳಿ ಅಭಿನಂದಿಸಿದ್ರಂತೆ. ಒಳ್ಳೆ ಸಿನಿಮಾ ತೆಗೀಬೇಕು, ಸಿನಿಮಾ ನೋಡಿ ರಜನಿ ಸರ್ ಮನೆಗೆ ಕರೆಸಿ ಅಭಿನಂದಿಸಬೇಕು. ಅವರು ನಮ್ಮ ಸಿನಿಮಾ ಬಗ್ಗೆ ಮಾತಾಡಬೇಕು ಅನ್ನೋದು ಡೈರೆಕ್ಟರ್ ಆಗಬೇಕು ಅಂತ ಕಷ್ಟಪಟ್ಟು ಕೆಲಸ ಮಾಡೋ ಪ್ರತಿಯೊಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಕನಸು. ನನ್ನ ಕನಸು ನನಸಾದ ದಿನ ಇದು ಅಂತ ತುಂಬಾ ಖುಷಿಯಿಂದ ಹೇಳಿದ್ದಾರೆ ಅಶ್ವತ್.