ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ, ಮದುವೆ ಡೇಟ್ ಫಿಕ್ಸ್?

Published : Jan 07, 2024, 09:42 AM ISTUpdated : Jan 07, 2024, 09:43 AM IST

2024ರಲ್ಲಿ ಹಲವು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗ್ಲೇ ಬಾಲಿವುಡ್ ನಟ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಇದೆಲ್ಲದರ ಮಧ್ಯೆ ಸೌತ್‌ನ ಈ ಸೆಲೆಬ್ರಿಟಿ ಈ ವರ್ಷವೇ ಮದುವೆಯಾಗಲಿದ್ದಾರೆ ಅನ್ನೋ ಕೇಳಿ ಬರ್ತಿದೆ.

PREV
19
ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ, ಮದುವೆ ಡೇಟ್ ಫಿಕ್ಸ್?

2024ರಲ್ಲಿ ಹಲವು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗ್ಲೇ ಬಾಲಿವುಡ್ ನಟ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಇದೆಲ್ಲದರ ಮಧ್ಯೆ ಸೌತ್‌ನ ಈ ಸೆಲೆಬ್ರಿಟಿ ಈ ವರ್ಷವೇ ಮದುವೆಯಾಗಲಿದ್ದಾರೆ ಅನ್ನೋ ಕೇಳಿ ಬರ್ತಿದೆ. ಆ ಜೋಡಿ ಮತ್ಯಾರೂ ಅಲ್ಲ..ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ.
 

29

ಹೌದು, 'ಗೀತ ಗೋವಿಂದಂ' ಚಿತ್ರದ ಮೂಲಕ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪರಿಚಯವಾಗಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಸಹ ಉತ್ತಮ ಪ್ರದರ್ಶನ ಕಂಡಿತ್ತು. ಚಿತ್ರದಲ್ಲಿ ಜೋಡಿಯ ಲಿಪ್‌ಲಾಕ್‌ ಹೆಚ್ಚು ಸುದ್ದಿಯಾಗಿತ್ತು. ಆ ನಂತರ ಈ ಜೋಡಿ 'ಡಿಯರ್‌ ಕಾಮ್ರೇಡ್‌' ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. 

39

ಆದರೆ, ಈ ಚಿತ್ರ ಥಿಯೇಟರ್‌ನಲ್ಲಿ ಸೋತು ಹೋಯಿತು. ಆದರೂ ಪ್ರೇಕ್ಷಕರ ಮನಸ್ಸಿಗೆ ವಿಜಯ್‌ ಹಾಗೂ ರಶ್ಮಿಕಾ ಜೋಡಿ ಇಷ್ಟವಾಯಿತು. ಇಬ್ಬರ ನಡುವೆ ಪ್ರೀತಿಯಿದೆ ಎಂದೇ ಎಲ್ಲರೂ ಮಾತನಾಡಿಕೊಂಡರು. ಇಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಗಾಸಿಪ್‌ ಸಹ ಎಲ್ಲೆಡೆ ಹಬ್ಬಿತ್ತು. 

49

ಪ್ರತಿ ಹಬ್ಬದಂದು ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ ಎಂಬ ಚರ್ಚೆಗಳು ಬಹಳ ದಿನಗಳಿಂದ ನಡೆಯುತ್ತಿವೆ. ಇದಲ್ಲದೆ, ಇಬ್ಬರೂ ರಜೆಗಾಗಿ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂಬ ವದಂತಿಯೂ ಇದೆ. ಇದೀಗ ವಿಜಯ್-ರಶ್ಮಿಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. 

59

ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ, ಇದಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದೆ. ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.  

69

ವಿಜಯ್ ದೇವರಕೊಂಡ ಕೆಲವು ಸಮಯದ ಹಿಂದೆ 'ಖುಷಿ' ಎಂಬ ಚಿತ್ರದಲ್ಲಿ ನಟಿಸಿದ್ದರು, ಇದರಲ್ಲಿ ಸಮಂತಾ ರುತು ಪ್ರಭು ನಾಯಕಿ. ಚಿತ್ರವು 1 ಸೆಪ್ಟೆಂಬರ್ 2023ರಂದು ಬಿಡುಗಡೆಯಾಯಿತು. 

79

ವಿಜಯ್ ದೇವರಕೊಂಡ ಪ್ರಸ್ತುತ 'ಗೀತಾ ಗೋವಿಂದಂ' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ನಿರ್ದೇಶಕ ಪರಶುರಾಮ್ ಪೆಟ್ಲ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

89

ವಿಜಯ್ ಅವರ ಮುಂಬರುವ ಚಿತ್ರ 'ಫ್ಯಾಮಿಲಿ ಸ್ಟಾರ್' ಬಿಡುಗಡೆ ದಿನಾಂಕವನ್ನು ಕೆಲವು ಕಾರಣಗಳಿಂದ ಮುಂದೂಡಲಾಗಿದೆ, ಇದರಲ್ಲಿ ಅವರ ಎದುರು ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 18ಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

99

ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು ಚಿತ್ರ 'ಪುಷ್ಪ 2' ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಅಲ್ಲು ಅರ್ಜುನ್ ನಾಯಕರಾಗಿದ್ದು, ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಇದಲ್ಲದೆ, ಅವರು 'ರಾಂಬೋ' ಹೆಸರಿನ ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ.

Read more Photos on
click me!

Recommended Stories