ವಿಜಯ್ ದೇವರಕೊಂಡ ನೆಕ್ಸ್ಟ್‌ ಸಿನಿಮಾದಿಂದ ಕನ್ನಡತಿ ಶ್ರೀಲೀಲಾ ಔಟ್‌, 'ಪ್ರೇಮುಲು' ನಟಿ ಮಮಿತಾ ಆಯ್ಕೆ

Published : Apr 21, 2024, 12:32 PM ISTUpdated : Apr 21, 2024, 12:37 PM IST

ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಲಯಾಳಂನ ಖ್ಯಾತ ನಟಿ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ಬದಲು ಮಲಯಾಳಂನ ಮಮಿತಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

PREV
18
ವಿಜಯ್ ದೇವರಕೊಂಡ ನೆಕ್ಸ್ಟ್‌ ಸಿನಿಮಾದಿಂದ ಕನ್ನಡತಿ ಶ್ರೀಲೀಲಾ ಔಟ್‌, 'ಪ್ರೇಮುಲು' ನಟಿ ಮಮಿತಾ ಆಯ್ಕೆ

ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಲಯಾಳಂನ ಖ್ಯಾತ ನಟಿ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ಬದಲು ಮಲಯಾಳಂನ ಮಮಿತಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

28

ವಿಜಯ್ ದೇವರಕೊಂಡ ಗೀತ ಗೋವಿಂದಂ, ಅರ್ಜುನ್ ರೆಡ್ಡಿ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಆಕ್ಟರ್‌. ಆ ನಂತರ ಸಾಲು ಸಾಲು ಸಿನಿಮಾಗಳು ಸೋತು ಹೋದವು. ಸದ್ಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾದ ಮೂಲಕ ಮತ್ತೆ ಯಶಸ್ಸು ಸಿಕ್ಕಿದೆ. 

38

ಹೀಗಾಗಿಯೇ ವಿಜಯ್ ನಟನೆಯ ಮುಂದಿನ ಚಿತ್ರದ ಕೆಲಸ ಚಾಲ್ತಿಯಲ್ಲಿದೆ. VD 12 ಚಿತ್ರಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೀತಿವೆ. ಈ ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ನಾಯಕಿಯೆಂದೇ ಹೇಳಲಾಗ್ತಿತ್ತು. ಈಗ ಚಿತ್ರತಂಡದಿಂದ ಕಿಸ್ ನಟಿ ಔಟ್ ಆಗಿದ್ದಾರೆ. ಶ್ರೀಲೀಲಾ ಬದಲು ‘ಪ್ರೇಮಲು’ಹೀರೋಯಿನ್‌ನ್ನು ಚಿತ್ರತಂಡ ಆಯ್ಕೆ ಮಾಡಿದೆ ಎನ್ನಲಾಗಿದೆ.

48

ತೆಲುಗಿನಲ್ಲಿ 'ಪ್ರೇಮಲು' ಬಿಡುಗಡೆಯಾದಾಗಿನಿಂದ, ಇಲ್ಲಿನ ನಿರ್ಮಾಪಕರು ಮಮಿತಾ  ಅವರ ನೈಜ ಅಭಿನಯವನ್ನು ಗಮನಿಸಿದ್ದಾರೆ. ಹೀಗಾಗಿ
ವಿಜಯ್ ದೇವರಕೊಂಡ ಮುಂದಿನ ಚಿತ್ರದಲ್ಲಿ ಮಲಯಾಳಂ ಈ ಮಲಯಾಳಂ ನಟಿಯ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.

58

 'ಕುಶಿ' ಚಿತ್ರದಲ್ಲಿ ಸಮಂತಾ ಮತ್ತು 'ಫ್ಯಾಮಿಲಿ ಸ್ಟಾರ್' ನಲ್ಲಿ ಮೃಣಾಲ್ ಠಾಕೂರ್ ಅವರಂತಹ ಅನುಭವಿ ನಟಿಯರನ್ನು ರೋಮ್ಯಾನ್ಸ್ ಮಾಡಿದ ನಂತರ, ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರದಲ್ಲಿ ತುಲನಾತ್ಮಕವಾಗಿ ಹೊಸಬರೊಂದಿಗೆ ಕೆಲಸ ಮಾಡಲಿದ್ದಾರೆ.

68

ಚಿತ್ರತಂಡದೊಂದಿಗಿನ ಮಮಿತಾ ಮಾತುಕತೆ ಯಶಸ್ವಿಯಾದರೆ ಮಮಿತಾ ತೆಲುಗಿಗೆ ಪಾದಾರ್ಪಣೆ ಮಾಡಲಿದ್ದಾರೆ. ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಮಲಯಾಳಂ ನಟಿಯರಾದ ಅನುಪಮಾ ಪರಮೇಶ್ವರನ್, ಕೀರ್ತಿ ಸುರೇಶ್, ನಿವೇದಾ ಥಾಮಸ್ ಮತ್ತು ಮಾಳವಿಕಾ ಮೋಹನನ್ ಮೊದಲಾದ ನಟಿಯರ ಲಿಸ್ಟ್‌ಗೆ ಸೇರಲಿದ್ದಾರೆ.

78

'ಕುಶಿ' ಚಿತ್ರದಲ್ಲಿ ಸಮಂತಾ ಮತ್ತು 'ಫ್ಯಾಮಿಲಿ ಸ್ಟಾರ್' ನಲ್ಲಿ ಮೃಣಾಲ್ ಠಾಕೂರ್ ಅವರಂತಹ ಅನುಭವಿ ನಟಿಯರನ್ನು ರೋಮ್ಯಾನ್ಸ್ ಮಾಡಿದ ನಂತರ, ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರದಲ್ಲಿ ಹೊಸಬರೊಂದಿಗೆ ಕೆಲಸ ಮಾಡಲಿದ್ದಾರೆ. 

88

ವಿಡಿ 12 ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳ ಅಡಿಯಲ್ಲಿ ನಾಗ ವಂಶಿ ಮತ್ತು ಸಾಯಿ ಸೌಜನ್ಯರಿಂದ ನಿರ್ಮಿಸಲ್ಪಡುತ್ತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

click me!

Recommended Stories