ಶಾರೂಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ; ಈಕೆಯ ಸಂಬಳ ಕೇಳಿದ್ರೆ ಹೌಹಾರ್ತೀರಿ!

First Published | Apr 20, 2024, 5:47 PM IST

ಶಾರೂಖ್ ಖಾನ್‌ಗೆ ಸಂಬಂಧಿಸಿದ ಎಲ್ಲ ವೃತ್ತಿಪರ ಕೆಲಸಗಳನ್ನು ನಿಭಾಯಿಸುವ ಕೆಲಸ ಈಕೆಯದು. ಈಕೆ ಶಾರೂಖ್‌ಗೆ ಮೆಚ್ಚಿನ ಮ್ಯಾನೇಜರ್ ಆಗಿದ್ದು, ವಾರ್ಷಿಕ ಎಷ್ಟು ಸಂಬಳ ಪಡೀತಾಳೆ ಗೊತ್ತಾ?
 

ಈಕೆ ಪೂಜಾ ದದ್ಲಾನಿ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಶಾರೂಖ್ ಖಾನ್‌ಗೆ ಈಕೆ 2011ರಿಂದ ಇಂದಿನವರೆಗೂ ಮ್ಯಾನೇಜರ್.

ತನ್ನ ಕೆಲಸದಿಂದ ನಟನ ಮನಸ್ಸನ್ನು ಮೆಚ್ಚಿಸಿರುವ ಈಕೆ ಹುಟ್ಟಿ ಬೆಳೆದಿದ್ದೆಲ್ಲವೂ ಮುಂಬೈನಲ್ಲೇ. ಈಕೆ ಎಸ್‌ಆರ್‌ಕೆಗೆ ಸೇರಿದ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಾಳೆ. 

Tap to resize

ಶಾರೂಖ್ ಸಿನಿಮಾಗಳನ್ನು ನಿರ್ಧರಿಸುವುದರಿಂದ ಸಂಭಾವನೆ ಬಗ್ಗೆ ಮಾತುಕತೆ ನಡೆಸುವದರೊಂದಿಗೆ, ನಟನ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್‌ನ್ನು ಕೂಡಾ ನಿರ್ವಹಿಸುತ್ತಾರೆ. 

ಇದರೊಂದಿಗೆ ನಟನ ಒಡೆತನದ IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಅವರ ಇತರ ವ್ಯಾಪಾರ ವ್ಯವಹಾರಗಳನ್ನು ಸಹ ನಿರ್ವಹಿಸುತ್ತಾರೆ.

SRK ಅವರ ಪುತ್ರ ಆರ್ಯನ್ ಖಾನ್ ಅವರ 2021 ರ ಕ್ರೂಸ್ ಶಿಪ್ ಡ್ರಗ್ ಕೇಸ್ ನೆನಪಿದೆಯೇ? ಖಾನ್ ಕುಟುಂಬದ ಪರವಾಗಿ ಪ್ರತಿ ದಿನವೂ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗಳಿಗೆ ಪೂಜಾ  ಓಡುತ್ತಿದ್ದರು. 

ಆರ್ಯನ್‌ಗೆ ಆರಂಭಿಕ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ, ಪೂಜಾ ನ್ಯಾಯಾಲಯದಲ್ಲಿ ಅಳುತ್ತಿರುವುದು ಮೀಡಿಯಾ ಕಣ್ಣಿಗೆ ಬಿದ್ದಿತ್ತು. ಕುಟುಂಬಕ್ಕೆ ಅಷ್ಟು ಹತ್ತಿರವಿದ್ದಾರೆ ಪೂಜಾ.

ಪೂಜಾ ಅವರ ಆದಾಯವು ಯಾವಾಗಲೂ ಜನರಿಗೆ ಕುತೂಹಲವನ್ನುಂಟು ಮಾಡುತ್ತದೆ. ಅಂದ ಹಾಗೆ ಈ ಕೆಲಸದಿಂದ ಪೂಜಾ ಗಳಿಸುತ್ತಿರುವುದು 7-9 ಕೋಟಿ!

2021 ರ ವರದಿಯು ಆಕೆಯ ನಿವ್ವಳ ಮೌಲ್ಯವು ಸುಮಾರು 45-50 ಕೋಟಿ ಎಂದು ಹೇಳುತ್ತದೆ. ಪೂಜಾ ಮರ್ಸಿಡಿಸ್ ಓಡಿಸುತ್ತಾರೆ ಮತ್ತು ಈ ವರ್ಷದ ಆರಂಭದಲ್ಲಿ ಮುಂಬೈನ ಬಾಂದ್ರಾದಲ್ಲಿ ಹೊಸ ಮನೆಗೆ ತೆರಳಿದರು.

ಪೂಜಾ ಅವರ ಈ ಹೊಸಮನೆಯನ್ನು ಸ್ವತಃ ಗೌರಿಖಾನ್ ಒಳಾಂಗಣ ವಿನ್ಯಾಸ ಮಾಡಿದ್ದಾರೆ. ಇದಕ್ಕಿಂತ ಉತ್ತಮ ವಿಷಯ ಯಾವುದಿದೆ ಎಂದು ಪೂಜಾ ಬರೆದುಕೊಂಡಿದ್ದರು.

ಲಿಸ್ಟಾ ಜೂಲ್ಸ್ ಎಂಬ ಕಂಪನಿಯ ಮಾಲೀಕ ಹಿತೇಶ್ ಗುರ್ನಾನಿಯನ್ನು ಪೂಜಾ 2008ರಲ್ಲಿ ವಿವಾಹವಾಗಿದ್ದಾರೆ ಮತ್ತು ಇವರಿಗೆ ಮಗಳಿದ್ದಾಳೆ. 

Latest Videos

click me!