Nayanthara Birthday; ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್ ಮಾಡಿದ ವಿಘ್ನೇಶ್ ಶಿವನ್

Published : Nov 18, 2022, 04:16 PM IST

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಲೇಡಿ ಸೂಪರ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. 

PREV
17
Nayanthara Birthday; ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್ ಮಾಡಿದ ವಿಘ್ನೇಶ್ ಶಿವನ್

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಲೇಡಿ ಸೂಪರ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಯನತಾರಾ ಫೋಟೋ ಶೇರ್ ಮಾಡಿ ಜನ್ಮದಿನದ ವಿಶ್ ಮಾಡುತ್ತಿದ್ದಾರೆ. 
 

27

ನಯನಾತಾ ಅವರಿಗೆ ಈ ವರ್ಷದ ಹುಟ್ಟುಹಬ್ಬ ತುಂಬಾ ಸ್ಪೆಷಲ್. 2022ರಲ್ಲಿ ನಯನತಾರಾ ನಿರ್ದೇಶಕ ವಿಘ್ನೇಶ್ ಜೊತೆ ಹಸೆಮಣೆ ಏರಿದರು. ಮದುವೆಯಾಗಿ ಕೆಲವೇ ತಿಂಗಳಿಗೆ ಅವಳಿ ಮಕ್ಕಳನ್ನು ಸ್ವಾಗತಿಸಿದರು. ನಯನತಾರಾ ಮತ್ತು ವಿಘ್ನೇಶ್ ದಂಪತಿ ಇಬ್ಬರು ಮುದ್ದಾದ ಮಕ್ಕಳ ತಂದೆ-ತಾಯಿ. ಸದ್ಯ ಸಿನಿಮಾ  ಕೆಲಸಗಳ ಜೊತೆಗೆ ನಯನತಾರಾ ಮಕ್ಕಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. 

37

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಡದಿಗೆ ವಿಘ್ನೇಶ್ ಶಿವನ್  ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ವಿಘ್ನೇಶ್ ಶಿವನ್ ಪತ್ನಿ ನಯನತಾರಾಗೆ ಶುಭಾಶಯ ತಿಳಿಸಿದ್ದಾರೆ. 

47

'ಇದು ನಿನ್ನ ಜೊತೆಗಿನ 9ನೇ ವರ್ಷದ ಹುಟ್ಟುಹಬ್ಬ' ಎಂದು ವಿಘ್ನೇಶ್ ಹೇಳಿದ್ದಾರೆ. 'ನಿನ್ನ ಜೊತೆಗಿದ್ದ ಪ್ರತಿ ಹುಟ್ಟುಹಬ್ಬವು ವಿಶೇಷ, ವಿಭಿನ್ನ ಮತ್ತು ಮರೆಯಲು ಸಾಧ್ಯವಿಲ್ಲ. ಆದರೆ ಇದು ಎಲ್ಲದಕ್ಕಿಂತ ವಿಶೇಷವಾಗಿದೆ, ಏಕೆಂದರೆ ನಾವು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಜೀವನವನ್ನು ಪ್ರಾರಂಭಿಸಿದ್ದೇವೆ. ಇಬ್ಬರು ಮುದ್ದಾದ ಮಕ್ಕಳ ತಂದೆ-ತಾಯಿ ಆಗಿದ್ದೀವಿ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ. 

57

ಇತ್ತೀಚಿಗಷ್ಟೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಇಬ್ಬರು ಮುದ್ದಾದ ಮಕ್ಕಳನ್ನು ಎತ್ತಿಕೊಂಡು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದರು. ಆದರೆ ಮಕ್ಕಳ ಫೋಟೋವನ್ನು ರಿವೀಲ್ ಮಾಡಿರಲ್ಲ. 

67

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

77

ನಯನತಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಆಟ್ಲಿ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಆದರೆ ನಯನತಾರಾ ಲುಕ್ ಇನ್ನು ರಿವೀಲ್ ಆಗಿಲ್ಲ. ಈ ಸಿನಿಮಾ ಜೊತೆಗೆ ಮಲಯಾಳಂನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಕೆಲವು ಸಿನಿಮಾಗಳು ನಯನತಾರಾ ಕೈಯಲ್ಲಿದೆ.  

Read more Photos on
click me!

Recommended Stories