ಚಡ್ಡಿನೂ ಅದೃಷ್ಟ ತರುತ್ತಾ?! ಸಿನಿಮಾ ಸಕ್ಸಸ್ ಆಗ್ಲಿ ಎಂದು 42 ದಿನ ಒಂದೇ ಶಾರ್ಟ್ಸ್ ಧರಿಸಿದ್ದ ವಿದ್ಯಾ ಬಾಲನ್ ಚಿತ್ರದ ನಿರ್ದೇಶಕ!

Published : Apr 19, 2024, 10:39 AM IST

ಸಿನಿಮಾ ಸಕ್ಸಸ್ ಆಗ್ಲಿ ಎಂದು ನಿರ್ದೇಶಕರೊಬ್ಬರು 42 ದಿನ ಒಂದೇ ಶಾರ್ಟ್ಸ್ ಧರಿಸಿದ್ರು ಎಂದು ನಟಿ ವಿದ್ಯಾ ಬಾಲನ್ ಹೇಳಿದ್ದಾರೆ. ಕಡೆಗೆ ಸಿನಿಮಾ ಸಕ್ಸಸ್ ಆಯ್ತಾ, ಯಾರು ಈ ನಿರ್ದೇಶಕ?

PREV
19
ಚಡ್ಡಿನೂ ಅದೃಷ್ಟ ತರುತ್ತಾ?! ಸಿನಿಮಾ ಸಕ್ಸಸ್ ಆಗ್ಲಿ ಎಂದು 42 ದಿನ ಒಂದೇ ಶಾರ್ಟ್ಸ್ ಧರಿಸಿದ್ದ ವಿದ್ಯಾ ಬಾಲನ್ ಚಿತ್ರದ ನಿರ್ದೇಶಕ!

ಬಾಲಿವುಡ್‌ನಲ್ಲಿ ಬಹುಮುಖ ಪಾತ್ರಗಳಿಗಾಗಿ ಮೆಚ್ಚುಗೆ ಪಡೆದ ವಿದ್ಯಾ ಬಾಲನ್, ಇತ್ತೀಚೆಗೆ ವಿವಿಧ ಸಂದರ್ಶನಗಳಲ್ಲಿ ತಮ್ಮ ಜೀವನದ ಕುತೂಹಲಕಾರಿ ಒಳನೋಟಗಳನ್ನು ಮತ್ತು ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

29

ರೌನಕ್ ರಜನಿ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರು ಮೂಢನಂಬಿಕೆಯಿಂದ ಸತತ 42 ದಿನಗಳ ಕಾಲ ಅದೇ ಒಂದು ಶಾರ್ಟ್ಸ್ ಧರಿಸಿದ ಚಲನಚಿತ್ರದ ಸೆಟ್‌ನ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ.
 

39

ಚಾಟ್ ಸಮಯದಲ್ಲಿ, ವಿದ್ಯಾ ಹಾಸ್ಯಮಯವಾಗಿ, 'ಚಿತ್ರದ ಸೆಟ್‌ನಲ್ಲಿ ನಿರ್ದೇಶಕರು ಗೆಲುವು ಸಿಗುತ್ತದೆಂಬ ಮೂಢನಂಬಿಕೆಯಿಂದಾಗಿ 42 ದಿನಗಳ ಕಾಲ ಅದೇ ಜೋಡಿ ಶಾರ್ಟ್ಸ್ ಧರಿಸಿದ್ದನ್ನು ಕೇಳಿದ್ದೇನೆ. ವಾಸ್ತವವಾಗಿ, ನಾನು ಗಮನಿಸಲಿಲ್ಲ. ಆದರೆ ಅಲ್ಲರೂ ಹೇಳುತ್ತಿದ್ದರು.'

49

 'ಕುತೂಹಲಕಾರಿಯಾಗಿ, ಚಲನಚಿತ್ರವು ಸಖತ್ ಹಿಟ್ ಆಯಿತು' ಎಂದು ನಟಿ ಹೇಳಿದ್ದಾರೆ. ಆದರೆ, ಸಿನಿಮಾ ಅಥವಾ ನಿರ್ದೇಶಕರ ಹೆಸರು ಕೇಳಿದಾಗ ಮಾತ್ರ 'ಮರೆತು ಹೋಗಿದೆ' ಎಂದು ಜಾಣತನ ತೋರಿದ್ದಾರೆ.  

59

ವೃತ್ತಿಪರವಾಗಿ, ವಿದ್ಯಾ ಅವರ ಮುಂಬರುವ ಚಿತ್ರ 'ದೋ ಔರ್ ದೋ ಪ್ಯಾರ್' ಮಾರ್ಕೆಟಿಂಗ್‌ನಲ್ಲಿ ತೊಡಗಿರುವ ವಿದ್ಯಾ, ಹಲವೆಡೆ ಹಲವು ಸಂದರ್ಶನಗಳನ್ನು ನೀಡುತ್ತಾ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಮಾತಾಡುತ್ತಿದ್ದಾರೆ.

69

ಇತ್ತೀಚೆಗೆ ಮಾಧ್ಯಮಗಳ ಬಾಲಿವುಡ್‌ನ ನೆಪೋಟಿಸಂ ಬಗ್ಗೆ ಕೇಳಿದಾಗ ನಟಿ, 'ಇದು ಯಾರಪ್ಪನ ಇಂಡಸ್ಟ್ರಿಯೂ ಅಲ್ಲ. ಹಾಗಿದ್ದಿದ್ದರೆ ಎಲ್ಲ ಖ್ಯಾತರ ಮಕ್ಕಳೂ ಇಲ್ಲಿ ಗೆಲ್ಲಬೇಕಿತ್ತು. ಇಲ್ಲಿ ನೆಪೋಟಿಸಂ ಇದ್ದರೂ ಇಲ್ಲದಿದ್ದರೂ ನಾನಂತೂ ಇಲ್ಲಿದ್ದೇನೆ. ಆದ್ದರಿಂದ ನೆಪೋಟಿಸಂ ಎಂಬುದು ವಿಷಯವಲ್ಲ' ಎಂದಿದ್ದರು.

79

'ನಾನು ನನ್ನ ಸ್ವಂತ ಕೆಲಸವನ್ನು ಮಾಡುವುದರಲ್ಲಿ ಸಂತೋಷವಾಗಿದ್ದೇನೆ. ಕೆಲವೊಮ್ಮೆ ಕೆಲ ಜನರ ಬೆಂಬಲವಿದ್ದಿದ್ದರೆ ಎನಿಸಿತ್ತು, ಅಥವಾ ಆ ಹಂತದಲ್ಲಿ ಜನರು ಸ್ವಲ್ಪ ದಯೆಯಿಂದ ನಡೆದುಕೊಂಡಿದ್ದರೆ ಎಂದು ಅನೇಕ ಬಾರಿ ಅನಿಸಿದೆ. ಆದರೆ, ಕಡೆಯಲ್ಲಿ ಅದ್ಯಾವುದೂ ಮುಖ್ಯವೇ ಅಲ್ಲ' ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. 

89

ಇನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಎಲ್ಲರೂ ಖುಲ್ಲಂಖುಲ್ಲಾ ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದರ ಬಗ್ಗೆ ಆಕ್ಷೇಪ ಎತ್ತಿರುವ ಕಹಾನಿ ನಟಿ, 'ವೈಯಕ್ತಿಕ ಎಂಬುದು ವೈಯಕ್ತಿಕವಾಗಿಯೇ ಇರಬೇಕು. ಸೋಷ್ಯಲ್ ಮೀಡಿಯಾದಲ್ಲಿ ಯಾವುದನ್ನು ಹಂಚಿಕೊಳ್ಳಬೇಕೆಂಬುದು ತಿಳಿದಿರಬೇಕು' ಎಂದಿದ್ದಾರೆ.

99
vidya balan

'ಬೇರೊಬ್ಬರ ಸಂಬಂಧ ಎಷ್ಟು ಪರಿಪೂರ್ಣ ಎಂದು ಯಾರಿಗೂ ತಿಳಿದಿಲ್ಲ. ನಾನು ಪರಿಪೂರ್ಣ ದಾಂಪತ್ಯದಲ್ಲಿ ಇದ್ದೇನೆಯೇ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಖಾಸಗಿ ಜೀವನವು ಖಾಸಗಿಯಾಗಿದೆ ಎಂದು ನಾನು ಹೇಳುತ್ತೇನೆ' ಎಂದು ನಟಿ ಹೇಳಿದ್ದಾರೆ. 

Read more Photos on
click me!

Recommended Stories