ಭಾರತದ ಅತಿಹೆಚ್ಚು ಅಂಕುಡೊಂಕಾದ ಮೈಮಾಟವುಳ್ಳ ಟಾಪ್-10 ನಟಿಯರು; ಸ್ಯಾಂಡಲ್‌ವುಡ್‌ ಸ್ಟಾರ್ಸ್ ಯಾರಿದ್ದಾರೆ?

First Published | Apr 18, 2024, 8:16 PM IST

ಭಾರತದಲ್ಲಿ ನಟಿಯರಿಗೆ ಹಾಗೂ ಅವರನ್ನು ಆರಾಧಿಸುವ ಅಭಿಮಾನಿಗಳಿಗೆ ಕೊರತೆಯೇನಿಲ್ಲ. ದೇಶದ ಅತಿ ಹೆಚ್ಚು ಅಂಕುಡೊಂಕಾದ (ತೆಳ್ಳನೆಯ ಸೊಂಟ ಮತ್ತು ದಪ್ಪನೆಯ ಹಿಂಭಾಗ) ಮೈಮಾಟ ಹೊಂದಿದ ಟಾಪ್‌ 10 ನಟಿಯರು (Indian most curviest actresses) ಇಲ್ಲಿದ್ದಾರೆ ನೋಡಿ.. ಇವರು ತಮ್ಮ ಮೈಮಾಟದಿಂದಲೇ ಪಡ್ಡೆಗಳ ನಿದ್ದೆ ಸುಂದರ ನಟಿಯರಾಗಿದ್ದಾರೆ..
 

ಬಾಲಿವುಡ್ ಚೆಲುವೆ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೋರ್ ದಂಪತಿಯ ಪುತ್ರಿ ಜಾಹ್ನವಿ ಕಪೂರ್ ಕೂಡ ತುಂಬು ಸೌಂದರ್ಯವತಿಯಾಗಿದ್ದಾಳೆ. ಈಕೆ ಒತ್ತಮ ಮೈಮಾಟವನ್ನು ಹೊಂದಿದ್ದು, ತಾಯಿಯಂತೆಯೇ ಅಂಕು ಡೊಂಕಾದ ದೇಹ ರಚನೆಯನ್ನು ಹೊಂದಿದ್ದಾರೆ.
 

ತೆಲುಗು, ತಮಿಳು ಮತ್ತು ಹಿಂದಿ ಸಿನಿ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ಇಲಿಯಾನಾ ಡಿ ಕ್ರೂಸ್‌ ತೆಳ್ಳನೆಯ ಸೊಂಟ ಹಾಗೂ ಹಿಂಭಾಗವನ್ನು ದಪ್ಪದಾಗಿ ಹೊಂದಿದ್ದರಿಂದ ಅತಿಹೆಚ್ಚು ವಕ್ರತೆಯನ್ನು ಹೊಂದಿದ್ದಾರೆ, ಇದು ಸೌಂದರ್ಯದ ಒಂದು ಭಾಗವಾಗಿದ್ದರೂ ಇವರು ತಮ್ಮ ದೇಹದ ರಚನೆಯಿಂದಾಗಿ ಪಾಸಿಟಿವ್ ಕಾಮೆಂಟ್‌ಗಿಂದ ನೆಗೆಟಿವ್ ಕಾಮೆಂಟ್‌ಗಳನ್ನೇ ಹೆಚ್ಚಾಗಿ ಸ್ವೀಕರಿಸಿ ನೋವು ಅನುಭವಿಸಿದ್ದಾರೆ. ಇತ್ತೀಚೆಗೆ ಮಗುವಿಗೆ ಜನ್ಮನೀಡಿರುವ ಇಲಿಯಾನಾ ಸುಂದರ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ.
 

Tap to resize

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್‌ನೆಸ್‌ ಜೊತೆಗೆ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಬಾಲಿವುಡ್‌ನ ಹಲವು ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ದಿಶಾ ಬೇಡಿಕೆ ನಟಿಯಾಗಿದ್ದಾರೆ.
 

ದಕ್ಷಿಣ ಭಾರತ ಚಿತ್ರರಂಗದ ರಾಯ್ ಲಕ್ಷ್ಮಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ನಟಿ ಸೌತ್ ಪ್ರೇಕ್ಷಕರಿಗೆ ಚಿರಪರಿಚಿತ. ಈ ಚೆಲುವೆ ಉತ್ತಮ ದೇಹ ಸೌಂದರ್ಯವನ್ನು ಹೊಂದಿದ್ದರೂ 35ರ ಹರೆಯದಲ್ಲೂ ಹಾಟ್ ಮೈಮಾಟ ಉಳಿಸಿಕೊಂಡಿದ್ದಾರೆ. ಇವರು ಕರ್ವಿಯಸ್ಟ್ ದೇಹ ಹೊಂದಿದ್ದು, ಪಡ್ಡೆಗಳ ಹಾಟ್ ಹೀರೋಯಿನ್ ಆಗಿದ್ದಾರೆ.
 

ಬಾಹುಲಿ ಸಿನಿಮಾದಿಂದಲೂ ತಮ್ಮದೇ ದೊಡ್ಡ ಅಭಿಮಾನಿಗಳನ್ನು ಕಾಪಿಟ್ಟುಕೊಂಡಿರುವ ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ನಟಿ ಆಗಿದ್ದಾರೆ. ಇತ್ತೀಚೆಗೆ ಜೈಲರ್‌ ಚಿತ್ರದಲ್ಲಿನ ಕಾವಾಲಯ್ಯ ಡ್ಯಾನ್ಸ್‌ ಮೂಲಕ ಹಲ್‌ಚಲ್‌ ಸೃಷ್ಟಿಸಿದ್ದಾರೆ. ಅವರ ಸೌಂದರ್ಯಕ್ಕೆ ಮೋಹಗೊಳ್ಳದ ಅಭಿಮಾನಿಯೇ ಇಲ್ಲವೆಂದು ಹೇಳಬಹುದು.
 

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಅವರು ಅತಿ ಹೆಚ್ಚು ಕರ್ವಿಯಸ್ಟ್ ದೇಹ ಹೊಂದಿದವರಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಮಹಾರಾಷ್ಟ್ರದ ಮೂಲದವರಾದ ಇವರು ಮಹಿಳಾ ಪ್ರಧಾನ ಚಿತ್ರಗಳಲ್ಲಿಯೂ ಕಾಣಿಸಿಕೊಂಡು ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆ ಹಾಟ್ ಬೆಡಗಿ ನಿಧಿ ಅಗರ್ವಾಲ್ ಬ್ಯೂಟಿ ಸೀಕ್ರೆಟ್‌ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ವಿವ್ ಆಗಿರುವ ನಿಧಿ ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
 

ದೆಹಲಿ ಮೂಲದ ಸುಂದರಿ ಮತ್ತು ದಕ್ಷಿಣ ಸಿನಿಮಾ ರಂಗದ ಉದಯೋನ್ಮುಖ ತಾರೆ ಆಗಿದ್ದಾರೆ. ಡಬ್‌ ಸ್ಮ್ಯಾಶ್‌ ಮೂಲಕ ಸೆನ್ಸೇಷನ್ ಆಗಿದ್ದ ಕೇತಿಕಾ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ. ಕೇಟಿಕಾ ಕೇತಿಕಾ ತನ್ನ ವಕ್ರಾಕೃತಿಗಳನ್ನು ಹೊಂದಿದ ದೇಹ ಸೌಂದರ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. 
 

ತೆಲುಗು ಬ್ರಾಹ್ಮಿನ್ ಫ್ಯಾಮಿಲಿ ಮೂಲದವರಾದ ಶೋಭಿತಾ ಧೂಲಿಪಾಲ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾಣಿಜ್ಯ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಓದುತ್ತಿರುವಾಗಲೇ ಭರತನಾಟ್ಯ ಮತ್ತು ಕುಚುಪುಡಿ ಕಲಿತಿದ್ದಾರೆ. ಇದೇ ಹಿನ್ನೆಲೆಯಿಂದ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟು ಯಶಸ್ಸು ಗಳಿಸಿದ್ದಾರೆ.
 

ಡಿಂಪಲ್ ಹಯಾತಿ ಆಂಧ್ರಪ್ರದೇಶದ ವಿಜಯವಾಡದ ಮೂಲದವರಾಗಿದ್ದಾರೆ. ಹಿಂದಿ ಹಾಗೂ ದಕ್ಷಿಣ ಭಾರತದ ತೆಲುಗು, ತಮಿಳು ಸಿನಿರಂಗದಲ್ಲಿ ಮಿಂಚಿದ ಅವರು ವಿಶಾಲ್, ಧನುಶ್, ಅಕ್ಷಯ್ ಕುಮಾರ್, ರವಿತೇಜ ಸೇರಿದಂತೆ ಅನೇಕ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. 

ಸೋರ್ಸ್‌:  https://www.instagram.com/highfivepicks/ ಇನ್‌ಸ್ಟಾಗ್ರಾಂ ಪೋಸ್ಟ್‌ ಆಗಿದೆ. 

Latest Videos

click me!