ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ತಲೈವಾ ರಜಿನಿಕಾಂತ್ ಆಸ್ತಿ ಮೌಲ್ಯ ಎಷ್ಟು?

Published : Apr 18, 2024, 11:02 AM IST

ರಜನಿಕಾಂತ್ ನೋಡಲು ಬಹಳ ಸರಳ. ತಮ್ಮ ಸರಳತೆ, ಅಪಾರ ಅಭಿಮಾನಿ ವರ್ಗಕ್ಕಾಗೇ ಹೆಸರು ಮಾಡಿರೋ ಅವರ ಬಳಿ ಎಷ್ಟು ಐಶಾರಾಮಿ ಬಂಗಲೆ, ಕಾರುಗಳಿವೆ ನೋಡೋಣ..

PREV
110
ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ತಲೈವಾ ರಜಿನಿಕಾಂತ್ ಆಸ್ತಿ ಮೌಲ್ಯ ಎಷ್ಟು?

74 ವರ್ಷವಾದರೂ ರಜಿನಿಕಾಂತ್ ಇನ್ನೂ ಚಿತ್ರದ ನಾಯಕನ ಪಾತ್ರಕ್ಕೆ ಬಹುಬೇಡಿಕೆಯ ನಟ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡವೆ ನಟ ಕೂಡಾ. ಕಡೆಯದಾಗಿ ಬಿಡುಗಡೆಯಾದ ಜೈಲರ್ ಚಿತ್ರಕ್ಕೆ ಬರೋಬ್ಬರಿ 210 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

210

ಪರದೆಯ ಮೇಲೆ ಅವರ ಬಹುಮುಖ ಪಾತ್ರಗಳು ಮತ್ತು ಪರದೆಯ ಹೊರಗಿನ ಲೋಕೋಪಕಾರಿ ಚಟುವಟಿಕೆಗಳೊಂದಿಗೆ, ರಜನಿಕಾಂತ್ ಅವರು ಭಾರತದಲ್ಲಿ ಸಾಂಸ್ಕೃತಿಕ ಐಕಾನ್ ಆಗಿ ಹೊರಹೊಮ್ಮಿದ್ದಾರೆ.

310

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗಿರುವ ಅಭಿಮಾನಿಗಳ ಸಮುದ್ರೋಪಾದಿ ಮಟ್ಟದಿಂದಲೇ ಮತ್ತಷ್ಟು ಪ್ರಖ್ಯಾತರಾಗಿದ್ದಾರೆ. ಸರಳತೆಗೆ ಹೆಸರಾಗಿರುವ ನಟ ಒಂದು ಸಿನಿಮಾಗೆ ಸರಿಸುಮಾರು 150 ರಿಂದ 210 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. 

410

ಸೂಪರ್ ಸ್ಟಾರ್ ನಿವ್ವಳ ಮೌಲ್ಯ 430 ಕೋಟಿ ಎಂದು ಅಂದಾಜಿಸಲಾಗಿದೆ. ಅವರ ಆದಾಯದ ಪ್ರಾಥಮಿಕ ಮೂಲವು ಅವರ ನಟನೆಯೇ ಆಗಿದ್ದರೂ, ಅವರು ನಿರ್ಮಾಪಕರೂ ಆಗಿದ್ದಾರೆ.

510

ರಜನಿಕಾಂತ್ ಅವರು ಹಲವಾರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಅವರು 2002ರಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಐಷಾರಾಮಿ ಮನೆಯನ್ನು ಕಟ್ಟಿಸಿದ್ದಾರೆ. ಲೈಫ್‌ಸ್ಟೈಲ್ ಏಷ್ಯಾದ ವರದಿಯ ಪ್ರಕಾರ, 2023ರಲ್ಲಿ ಆಸ್ತಿಯ ಮಾರುಕಟ್ಟೆ ಬೆಲೆ 35 ಕೋಟಿ ರೂ. 

610

ಸೂಪರ್‌ಸ್ಟಾರ್ ಚೆನ್ನೈನಲ್ಲಿ ರಾಘವೇಂದ್ರ ಮಂಡಪಮ್ ಎಂಬ ಐಶಾರಾಮಿ ಮದುವೆ ಮಂಟಪವನ್ನು ಸಹ ಹೊಂದಿದ್ದು, ಅದರ ಅಂದಾಜು ಮೌಲ್ಯ 20 ಕೋಟಿ ರೂ.

710

ತಲೈವಾಗೆ ಕಾರುಗಳ ಮೇಲೆ ಒಲವು ಇದೆ. ಅವರು ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಹೊಂದಿದ್ದಾರೆ. 

810

ಅವರ ಗ್ಯಾರೇಜ್‌ನಲ್ಲಿರುವ ಇತರ ಐಷಾರಾಮಿ ಕಾರುಗಳೆಂದರೆ BMW X5, Mercedes-Benz G Wagon, Lamborghini Urus ಮತ್ತು, Bentley Limousine. 

910

ಟೊಯೊಟಾ ಇನ್ನೋವಾ, ಹೋಂಡಾ ಸಿವಿಕ್, ಪ್ರೀಮಿಯರ್ ಪದ್ಮಿನಿ ಮತ್ತು ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್ ಅವರ ಸಂಗ್ರಹದಲ್ಲಿರುವ ಇತರ ಕೆಲವು ನೆಚ್ಚಿನ ಕಾರುಗಳಾಗಿದ್ದು, ನಟನಿಗೆ ಕ್ಲಾಸಿಕ್ ಕಾರುಗಳ ಮೇಲಿನ ಮೋಹ ತೋರಿಸುತ್ತದೆ. 

1010

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಜನಿಕಾಂತ್ ಅವರಿಗೆ 2000 ರಲ್ಲಿ ಪದ್ಮಭೂಷಣ, 2016 ರಲ್ಲಿ ಪದ್ಮ ವಿಭೂಷಣ ಮತ್ತು 2019 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. (ಫೋಟೋದಲ್ಲಿ ರಜಿನಿಕಾಂತ್ ಮನೆ ಒಳಾಂಗಣ ನೋಟ)

Read more Photos on
click me!

Recommended Stories