ಅಜಿತ್ ಕುಮಾರ್ ನಟನೆಯ, ಮಗಿಜ್ ತಿರುಮೇನಿ ನಿರ್ದೇಶನದ ವಿಡಾಮುಯಾರ್ಚಿ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ತ್ರಿಷ ನಾಯಕಿ, ಅರವ್, ಅರ್ಜುನ್, ರೆಜಿನಾ ಖಳನಟರು. ಅನಿರುದ್ ಸಂಗೀತ, ಲೈಕಾ ನಿರ್ಮಾಣ. ಓಂ ಪ್ರಕಾಶ್ ಸಂಕಲನ.
25
ವಿಡಾಮುಯಾರ್ಚಿ ಚಿತ್ರೀಕರಣ
ವಿಡಾಮುಯಾರ್ಚಿ ಚಿತ್ರೀಕರಣ ಅಜರ್‌ಬೈಜಾನ್‌ನಲ್ಲಿ ನಡೆದಿದೆ. ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳನ್ನ ರೋಮಾಂಚನಗೊಳಿಸಿದೆ. ಹಾಲಿವುಡ್ ಮಟ್ಟದ ದೃಶ್ಯಗಳಿವೆ.
35
ವಿಡಾಮುಯಾರ್ಚಿ: ಅಜಿತ್ ಕುಮಾರ್
ಅನಿರುದ್ ಹಿನ್ನೆಲೆ ಸಂಗೀತ ಕೂಡ ಮೆಚ್ಚುಗೆ ಪಡೆದಿದೆ. ಚಿತ್ರ ೨೦೨೫ರ ಸಂಕ್ರಾಂತಿಗೆ ಬಿಡುಗಡೆಯಾಗಲಿದ್ದು, ಅಜಿತ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
45
ವಿಡಾಮುಯಾರ್ಚಿ ಸಿನಿಮಾ ಕಥೆ
1997ರ ಹಾಲಿವುಡ್ ಚಿತ್ರ ಬ್ರೇಕ್‌ಡೌನ್‌ನ ರಿಮೇಕ್ ವಿಡಾಮುಯಾರ್ಚಿ. ನಾಯಕ ತನ್ನ ಹೆಂಡತಿಯ ಜೊತೆ ಅಜರ್‌ಬೈಜಾನ್‌ಗೆ ಹೋಗ್ತಾನೆ. ಅಲ್ಲಿ ಅವರ ಕಾರು ನಿರ್ಜನ ಪ್ರದೇಶದಲ್ಲಿ ಕೆಟ್ಟುಹೋಗುತ್ತದೆ. ಹೆಂಡತಿಯನ್ನ ಟ್ರಕ್ ನಲ್ಲಿ ಕಳಿಸಿ ಕೆಫೆಯಲ್ಲಿ ಕಾಯಲು ಹೇಳ್ತಾನೆ, ಆದರೆ ಅವಳು ನಾಪತ್ತೆಯಾಗ್ತಾಳೆ.
55
ವಿಡಾಮುಯಾರ್ಚಿ: ಸಂಕ್ರಾಂತಿ ಬಿಡುಗಡೆ
ನಾಯಕ ತನ್ನ ಕಾಣೆಯಾದ ಹೆಂಡತಿಗಾಗಿ ಹುಡುಕಾಟ ನಡೆಸ್ತಾನೆ. ೨೭ ವರ್ಷ ಹಳೆಯ ಸಿನಿಮಾ ರಿಮೇಕ್ ಆದರೂ, ಮಗಿಜ್ ತಿರುಮೇನಿ ತಮಿಳು ಪ್ರೇಕ್ಷಕರಿಗೆ ತಕ್ಕಂತೆ ಬದಲಿಸಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.