ಯುವ ನಟನೊಂದಿಗೆ ಮಲ್ಟಿಸ್ಟಾರರ್ ಸಿನಿಮಾ.. ಬರಹಗಾರನಿಗೆ ನಿರ್ದೇನದ ಚಾನ್ಸ್ ಕೊಟ್ಟ ನಟ ವಿಕ್ಟರಿ ವೆಂಕಟೇಶ್!

Published : Feb 04, 2025, 04:14 PM IST

ವೆಂಕಟೇಶ್ ದಶಕದ ಹಿಟ್ ಸಿನಿಮಾ ಕೊಟ್ಟಿದ್ದಾರೆ. 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದ ಮೂಲಕ ಇಡೀ ಇಂಡಸ್ಟ್ರಿಯನ್ನೇ ಅಲ್ಲಾಡಿಸಿದ್ದಾರೆ. ಈಗ ಮತ್ತೊಂದು ಮನರಂಜನಾ ಸಿನಿಮಾದೊಂದಿಗೆ ಬರ್ತಿದ್ದಾರೆ.

PREV
14
ಯುವ ನಟನೊಂದಿಗೆ ಮಲ್ಟಿಸ್ಟಾರರ್ ಸಿನಿಮಾ.. ಬರಹಗಾರನಿಗೆ ನಿರ್ದೇನದ ಚಾನ್ಸ್ ಕೊಟ್ಟ ನಟ ವಿಕ್ಟರಿ ವೆಂಕಟೇಶ್!

ವೆಂಕಟೇಶ್ ಈ ಸಂಕ್ರಾಂತಿಗೆ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ. ರಿಜನಲ್ ಲಾಂಗ್ವೇಜ್ ಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದು. ಸೀನಿಯರ್ ಹೀರೋಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹೀರೋ ವೆಂಕಟೇಶ್. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಐಶ್ವರ್ಯ ರಾಜೇಶ್ ನಾಯಕಿಯರಾಗಿ ನಟಿಸಿದ್ದಾರೆ. ದಿಲ್ ರಾಜು, ಶಿರೀಶ್ ನಿರ್ಮಾಪಕರು.

24

ವೆಂಕಟೇಶ್ ಮುಂದಿನ ಸಿನಿಮಾ ಯಾವುದೆಂದು ಇನ್ನೂ ಖಚಿತವಾಗಿಲ್ಲ. ಶೀಘ್ರದಲ್ಲೇ ಅವರು 'ರಾಣಾ ನಾಯುಡು' ವೆಬ್ ಸೀರೀಸ್ ನಲ್ಲಿ ನಟಿಸಲಿದ್ದಾರೆ. Netflix ಗಾಗಿ ಈ ಸೀರೀಸ್ ಮಾಡ್ತಿದ್ದಾರೆ. ಸಿನಿಮಾಗಳ ವಿಷಯದಲ್ಲಿ ವೆಂಕಿ ಇನ್ನೂ ಏನನ್ನೂ ಖಚಿತಪಡಿಸಿಲ್ಲ.

34

ವೆಂಕಟೇಶ್ ಮತ್ತೊಮ್ಮೆ ಯುವ ನಟನೊಂದಿಗೆ ಮಲ್ಟಿಸ್ಟಾರ್ ಸಿನಿಮಾ ಮಾಡಲಿದ್ದಾರೆ. ಹಾಸ್ಯ ಚಿತ್ರಗಳಿಂದ ಹೆಸರುವಾಸಿಯಾಗಿರುವ ಶ್ರೀವಿಷ್ಣು ಜೊತೆ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾ ಮೂಲಕ ಒಬ್ಬ ಬರಹಗಾರನನ್ನು ನಿರ್ದೇಶಕನನ್ನಾಗಿ ಪರಿಚಯಿಸಲಿದ್ದಾರೆ. 'ಸಾಮಜವರಗಮನ' ಚಿತ್ರಕ್ಕೆ ಬರೆದವರು ಇವರೇ ಎನ್ನಲಾಗಿದೆ. ವೆಂಕಟೇಶ್ ಪ್ರಮುಖ ಪಾತ್ರದಲ್ಲಿ, ಶ್ರೀವಿಷ್ಣು ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಹಾಸ್ಯಪ್ರಧಾನ ಚಿತ್ರವಿದು. ಮಾರ್ಚ್‌ನಲ್ಲಿ ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

44

ವೆಂಕಟೇಶ್‌ಗೆ ಹಾಸ್ಯಪ್ರಧಾನ ಚಿತ್ರಗಳೇ ಸೂಕ್ತ. ಆಕ್ಷನ್, ಥ್ರಿಲ್ಲರ್ ಚಿತ್ರಗಳಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಹಾಗಾಗಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾವನ್ನು ಹಾಸ್ಯಪ್ರಧಾನವಾಗಿ ಮಾಡಿದರು. ಈ ಚಿತ್ರದ ಯಶಸ್ಸಿನಿಂದ ವೆಂಕಿಗೆ ಒಂದು ಪಾಠವಾಗಿದೆ. ಹಾಗಾಗಿ ಹೊಸ ಪ್ರಾಜೆಕ್ಟ್‌ಗಳಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಮನರಂಜನೆಗೆ ಆದ್ಯತೆ ನೀಡುತ್ತಿದ್ದಾರೆ. ಶ್ರೀವಿಷ್ಣು ಜೊತೆ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.

Read more Photos on
click me!

Recommended Stories