ಮದುವೆಗೆ ಒಂದು ದಿನ ಮುಂಚೆ ಈ ಕಾರಣಕ್ಕೆ ಕತ್ರಿನಾಗೆ ಪ್ರಪೋಸ್‌ ಮಾಡಿದ ವಿಕ್ಕಿ!

Published : Dec 07, 2023, 04:23 PM IST

2021 ರಲ್ಲಿ ಅತ್ಯಂತ ಸುಂದರವಾದ ವಿವಾಹ ಸಮಾರಂಭದಲ್ಲಿ ವಿಕ್ಕಿ ಕೌಶಲ್ (Vicky Kaushal)  ಮತ್ತು ಕತ್ರಿನಾ ಕೈಫ್‌ (katrina KAif) ಹಸೆಮಣೆ ಏರಿದರು. ಈ ಹಿಂದೆ ಅನೇಕ ಸಂದರ್ಶನಗಳಲ್ಲಿ ತಮ್ಮ ಪ್ರೇಮಕಥೆಯ  ಹೇಳಿಕೊಂಡಿದ್ದರೂ , ಈ ವಾರದ ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ ವಿಕ್ಕಿ ಅವರು ಕತ್ರಿನಾಗೆ ಮದುವೆಗೆ ಕೇವಲ ಒಂದು ದಿನ ಮೊದಲು  ಪ್ರಪೋಸ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. ಇದ್ಕಕೆ ಕಾರಣವೇನು ಗೊತ್ತಾ? 

PREV
19
ಮದುವೆಗೆ ಒಂದು ದಿನ ಮುಂಚೆ ಈ ಕಾರಣಕ್ಕೆ ಕತ್ರಿನಾಗೆ ಪ್ರಪೋಸ್‌ ಮಾಡಿದ ವಿಕ್ಕಿ!

ಮದುವೆಯ ಮೊದಲು ಪ್ರಪೋಸ್ ಮಾಡದಿದ್ದರೆ ಜೀವನ ಪರ್ಯಂತ  ಅದನ್ನು ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ನಟ ವಿಕ್ಕಿ  ಹೇಳಿದ್ದಾರೆ.

29

'ಇದು ಕೊನೆಯ ನಿಮಿಷವಾಗಿತ್ತು. ನೀವು ಪ್ರಪೋಸ್ ಮಾಡದಿದ್ದರೆ, ನಿಮ್ಮ ಜೀವನದುದ್ದಕ್ಕೂ ನೀವು ಅದನ್ನು ಕೇಳಲು ಸಿದ್ಧರಾಗಿರಬೇಕು ಎಂದು ಎಲ್ಲರೂ ನನಗೆ ಎಚ್ಚರಿಸಿದ್ದರು'  ಎಂದು ವಿಕ್ಕಿ ಹೇಳಿದ್ದಾರೆ

39

ವಿಕ್ಕಿ ಮತ್ತು ಕತ್ರಿನಾ ರಣಥಂಬೋರ್‌ನಲ್ಲಿರುವ ಹೆರಿಟೇಜ್ ರೆಸಾರ್ಟ್‌ನಲ್ಲಿ ವಿವಾಹವಾದರು ಮತ್ತು ವಿಕ್ಕಿ ಕತ್ರಿನಾರಗೆ ಮದುವೆಗೆ ಒಂದು ದಿನ ಮೊದಲು ಪ್ರಪೋಸ್‌ ಮಾಡಿರುವ ವಿಷಯವ್ನನು ಬಹಿರಂಹಪಡಿಸಿದ್ದಾರೆ.

49

'ನಾವು ಅಲ್ಲಿಗೆ ತಲುಪಿದ ರಾತ್ರಿ ವಿಶೇಷ ಡಿನ್ನರ್‌ ಯೋಜಿಸಿದೆವು. ಅದೊಂದು ಸುಂದರವಾದ ಸೆಟಪ್, ಯಾವುದೇ ಸ್ನೇಹಿತರು ಅಥವಾ ಕುಟುಂಬಗಳು ಬರುವ ಮೊದಲು ಈ ಡಿನ್ನರ್‌ ಇತ್ತು, ಅವರೆಲ್ಲರೂ ಮರುದಿನ ಬರುತ್ತಿದ್ದರು. ಆಗ ಅದು ಅಲ್ಲಿ ಸಂಭವಿಸಿತು' ಎಂದು ಪ್ರಪೋಸ್‌ ಮಾಡಿದ ಘಟನೆ ವಿಕ್ಕಿ ಹಂಚಿಕೊಂಡರು

59
Vicky Kaushal

ಅವರು ಪರಸ್ಪರ ಡೇಟ್‌ ಮಾಡಲು ಪ್ರಾರಂಭಿಸಿದ ನಂತರ, ಅವರು ತಮ್ಮ ವೇಳಾಪಟ್ಟಿಗಳಿಂದಾಗಿ ನಿಯಮಿತ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು ಎಂದಿದ್ದಾರೆ ವಿಕ್ಕಿ.

69
Katrina Kaif and Vicky Kaushal

'ಇದು 9-5 ಕೆಲಸವಲ್ಲ ಎಂದು ಅರ್ಥಮಾಡಿಕೊಂಡೆವು. ಇದು ಶನಿವಾರ-ಭಾನುವಾರದ ರಜೆಯಂತೆ ಅಲ್ಲ. ಆ ಸಮಯದಲ್ಲಿ ಅವಳು ಟೈಗರ್ ಶೂಟ್‌ನಲ್ಲಿದ್ದಳು, ಒಂದು ಹಾಡು ಹೊರ ಬರುತ್ತಿತ್ತು ಆದ್ದರಿಂದ, ನಾವು ವಿಷಯಗಳನ್ನು ಯೋಜಿಸಲು ಸಾಧ್ಯವಾಗಲಿಲ್ಲ ಎಂಬುದೇ ಕೊನೆಯ ಕ್ಷಣದಲ್ಲಿ ಪ್ರಪೋಸ್‌ ಮಾಡಲು ಒಂದು ಕಾರಣ' ಎಂದು ಅವರು ಹೇಳಿದರು.

79

ಕೆಲವೊಮ್ಮೆ ಪರಸ್ಪರ ಸಮಯ ಕಳೆಯಲು ವಾರಗಟ್ಟಲೆ ಮುಂಚಿತವಾಗಿಯೇ ಪ್ಲಾನ್ ಮಾಡಬೇಕು ಎಂದು ವಿಕ್ಕಿ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.

89

'ಇಬ್ಬರೂ ಕೆಲಸದ ವೇಳಾಪಟ್ಟಿಯನ್ನು ಹೊಂದಿರುವಾಗ 10-15 ದಿನಗಳ ನಂತರ ನಾವು ಒಬ್ಬರಿಗೊಬ್ಬರು ಸಮಯವನ್ನು ಹೊಂದಿರುವುದಿಲ್ಲ. ನಾವು ಭೇಟಿಯಾಗಲು ಸಾಧ್ಯವಾಗುವುದಿಲ್ಲ.  ಒಟ್ಟಿಗೆ ಕುಳಿತು ವಿಷಯಗಳನ್ನು ಯೋಜಿಸಬೇಕಾಗಿದೆ' ಎಂದು ಅವರು ಹಂಚಿಕೊಂಡರು.

99

ಬಾಲಿವುಡ್‌ನ ಮೊಸ್ಟ್ ಅಡರೋಬಲ್‌ ಜೋಡಿ ವಿಕ್ಕಿ ಮತ್ತು ಕತ್ರಿನಾ ಶೀಘ್ರದಲ್ಲೇ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories