ಇನ್ನೂ ಮುಂದೆ ವಿಮಲ್‌ ಗುಟ್ಕಾ ಜಾಹೀರಾತಿನಲ್ಲಿ ಈ ಸೂಪರ್‌ಸ್ಟಾರ್‌ ಇರೋಲ್ಲ!

First Published | Dec 7, 2023, 3:43 PM IST

ಇನ್ನೂ ಮುಂದೆ ವಿಮಲ್ ಜಾಹೀರಾತುಗಳಲ್ಲಿ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಜೊತೆ ಅಕ್ಷಯ್ ಕುಮಾರ್ ಕಾಣಿಸುವುದಿಲ್ಲ. ಮಸಾಲಾ ಬ್ರಾಂಡ್‌ನೊಂದಿಗೆ ಸೂಪರ್‌ಸ್ಟಾರ್ ಒಪ್ಪಂದ ಕೊನೆಗೊಂಡಿದೆ. ಇದನ್ನು ಮುಂದುವರಿಸದಿರಲು ಅಕ್ಷಯ್ ನಿರ್ಧರಿಸಿದ್ದಾರೆ.

ಪಾನ್ ಮಸಾಲಾ ಬ್ರ್ಯಾಂಡ್ ವಿಮಲ್ ಅನ್ನು ಬೆಂಬಲಿಸಿದ ನಂತರ, ಅಕ್ಷಯ್ ಕುಮಾರ್ ಕಳೆದ ವರ್ಷ (2022) ಜನರಲ್ಲಿ ಕ್ಷಮೆಯಾಚಿಸಿದರು. ಆದರೂ ಅವರು ನಿರಂತರವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕಂಪನಿಯೊಂದಿಗಿನ ಅಕ್ಷಯ್ ಒಪ್ಪಂದ ಕೊನೆಗೊಂಡಿದೆ.

ಅಕ್ಷಯ್ ಕುಮಾರ್ ಕಳೆದ ವರ್ಷ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರೊಂದಿಗೆ ವಿಮಲ್ ಎಲೈಚಿಯನ್ನು ಪ್ರಚಾರ ಮಾಡುತ್ತಿದ್ದರು. ಪಾನ್ ಮಸಾಲಾ ಬ್ರಾಂಡ್ ವಿಮಲ್ ಅನ್ನು ಜಾಹೀರಾತು ಮಾಡಿದ್ದಕ್ಕಾಗಿ ಅವರು ಸಾಕಷ್ಟು ವಿರೋಧ ಎದುರಿಸಬೇಕಾಯಿತು. 

Tap to resize

ಏಪ್ರಿಲ್ 2022 ರಲ್ಲಿ, ಅಕ್ಷಯ್ ಅವರ ವಿಮಲ್ ಎಲೈಚಿ ಜಾಹೀರಾತು ಪ್ರಸಾರವಾದ ನಂತರ ಅಭೀಮಾನಿಗಳಿಂದ ಟೀಕೆಗೆ ಗುರಿಯಾಗಿದ್ದರು ಮತ್ತು ನಂತರ ಅವರ ಅಭಿಮಾನಿಗಳಿಗೆ ಕ್ಷಮೆಯಾಚಿಸಿದರು. 

ಇದರ ನಂತರ ಅಕ್ಷಯ್ ಬ್ರ್ಯಾಂಡ್‌ನೊಂದಿಗಿನ ಒಪ್ಪಂದ ಕೊನೆಗೊಳಿಸಲು ನಿರ್ಧರಿಸಿದ್ದರು. ಈಗ ಅಂತಿಮವಾಗಿ, ನಟ ಮಸಾಲಾ ಬ್ರಾಂಡ್‌ನ ಜಾಹೀರಾತುಗಳಲ್ಲಿ ಕಾಣಿಸುವುದಿಲ್ಲ, ವಿಮಲ್ ಅವರೊಂದಿಗಿನ ಒಪ್ಪಂದ ಕೊನೆಗೊಂಡಿದೆ.

'ನನ್ನನ್ನು ಕ್ಷಮಿಸಿ. ನನ್ನ ಎಲ್ಲಾ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಿಮ್ಮ ಪ್ರತಿಕ್ರಿಯೆ ನನ್ನ ಮೇಲೆ ಆಳವಾಗಿ ಪರಿಣಾಮ ಬೀರಿದೆ. ನಾನು ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಬೆಂಬಲಿಸುವುದಿಲ್ಲ. ವಿಮಲ್ ಎಲೈಚಿ ಅವರೊಂದಿಗಿನ ನನ್ನ ಒಪ್ಪಂದದ ದೃಷ್ಟಿಯಿಂದ ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ' ಎಂದು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
 

'ಎಲ್ಲ ನಮ್ರತೆಯಿಂದ ಈ ಜಾಹೀರಾತನ್ನು ಬಿಟ್ಟಿದ್ದೇನೆ.ಇದರಿಂದ ದುಡಿದ ಹಣವನ್ನು ಸಮಾಜದ ಕೆಲಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಬ್ರ್ಯಾಂಡ್ ಒಪ್ಪಂದದ ಅವಧಿಯವರೆಗೆ ಜಾಹೀರಾತು ತೋರಿಸಬಹುದು. ಅದು ನನ್ನ ನಿಯಂತ್ರಣದಲ್ಲಿಲ್ಲ, ಆದರೆ ನಾನು ಮುಂದೆ ಹೋಗುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಎಚ್ಚರವಾಗಿರಲು ಭರವಸೆ ನೀಡುತ್ತೇನೆ. ಪ್ರತಿಯಾಗಿ, ನಾನು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇನೆ' ಎಂದು ಇನ್ನಷ್ಟೂ ಬರೆದಿದ್ದರು. 

Latest Videos

click me!