Vicky Kaushal Birthday; ಮದುವೆ ಬಳಿಕ ಮೊದಲ ಹುಟ್ಟುಹಬ್ಬದ ಸಂಭ್ರಮ, ಪತ್ನಿ ಕತ್ರಿನಾ ಬಗ್ಗೆ ಹೇಳಿದ್ದೇನು?

First Published | May 16, 2022, 11:19 AM IST

ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏರಿದ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ವಿಕ್ಕಿ ಕೌಶಲ್‌ಗೆ ಈ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ.

ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏರಿದ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ವಿಕ್ಕಿ ಕೌಶಲ್‌ಗೆ ಈ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರೂ ಪ್ರೀತಿಸಿ ಮದುವೆಯಾದವರು. ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ ಕತ್ರಿನಾ ಮತ್ತು ವಿಕ್ಕಿ ಇಬ್ಬರೂ 2021 ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Tap to resize

ಕತ್ರಿನಾ ಮತ್ತು ವಿಕ್ಕಿ ಮದುವೆ ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನೆರವೇರಿತು. ಇಬ್ಬರೂ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಮದುವೆ ಬಳಿಕ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದರು.

ಪತ್ನಿ ಕತ್ರಿನಾ ಬಗ್ಗೆ ಮಾತನಾಡಿದ್ದ ವಿಕ್ಕಿ ಕೌಶಲ್, ಕತ್ರಿನಾ ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ಉತ್ತಮ ಪ್ರಭಾವ ಬೀರಿದ್ದಾರೆ. ಅವಳನ್ನು ಜೀವನಸಂಗಾತಿಯನ್ನಾಗಿ ಮಾಡಿಕೊಂಡಿರುವುದು ನನ್ನ ಅದೃಷ್ಟ. ಅವಳು ತುಂಬಾ ಬುದ್ಧಿವಂತೆ ಮತ್ತು ಸಹಾನುಭೂತಿಯ ವ್ಯಕ್ತಿ. ನಾನು ಅವಳಿಂದ ಪ್ರತಿದಿನ ತುಂಬಾ ಕಲಿಯುತಿದ್ದೀನಿ ಎಂದು ಹೇಳಿದ್ದರು.

ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಗಿಂತ 5 ವರ್ಷ ದೊಡ್ಡವರು. ಬಣ್ಣದ ಲೋಕದಲ್ಲೂ ಕತ್ರಿನಾ ಸೀನಿಯರ್. ಕತ್ರಿನಾ ಕೈಫ್ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರೆ ವಿಕ್ಕಿ ಕೌಶಲ್ 2012ರಲ್ಲಿ ಸಿನಿ ಪಯಣ ಪ್ರಾರಂಭ ಮಾಡಿದರು.

ಮಸಾಣ್ ಸಿನಿಮಾದಿಂದ ವಿಕ್ಕಿ ಕೌಶಲ್ ಬಣ್ಣದ ಲೋಕದ ಪಯಣ ಪ್ರಾರಂಭವಾಯಿತು. ಉರಿ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಚಿತ್ರವಾಗಿದೆ. ಈ ಸಿನಿಮಾ ಬಳಿಕ ಸ್ಟಾರ್ ಆಗಿ ಹೊರಹೊಮ್ಮಿದರು. ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಟನಾಗಿ ಬೆಳೆದುನಿಂತಿದ್ದಾರೆ.

ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇಬ್ಬರೂ ಮದುವೆ ಬಳಿಕ ಅನೇಕ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Latest Videos

click me!