ಗೆಳತಿಯ ಮದುವೆ ಸಂಭ್ರಮದಲ್ಲಿ ರಶ್ಮಿಕಾ; ಕೂರ್ಗ್ ಸ್ಟೈಲ್‌ನಲ್ಲಿ ಮಿಂಚಿದ ನಟಿ

First Published | May 16, 2022, 10:45 AM IST

ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಗೆಳತಿಯ ಮದುವೆಯಲ್ಲಿ ಗೆಳತಿಯರ ಗ್ಯಾಂಗ್ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

rashmika

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಬಹು ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳ ಚಿತ್ರೀಕರಣದ ನಡುವೆಯೂ ರಶ್ಮಿಕಾ ಇತ್ತೀಚಿಗೆ ಗೆಳತಿಯ ಮದುವೆ ಸಮಾರಂಭದಲ್ಲಿ ಮಿಂಚಿದ್ದಾರೆ.

rashmika

ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಗೆಳತಿಯ ಮದುವೆಯಲ್ಲಿ ಗೆಳತಿಯರ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Tap to resize

rashmika

ರಶ್ಮಿಕಾ ಮಂದಣ್ಣ ಕೂರ್ಗ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಕೂರ್ಗ್ ಶೈಲಿಯಲ್ಲಿ ಸೀರೆ ಧರಿಸಿರುವ ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ. ಅಭಿಮಾನಿಗಳು ರಶ್ಮಿಕಾ ಫೋಟೋಗೆ ಲೈಕ್ಸ್ ಮತ್ತು ಮೆಚ್ಚುಗೆ ಕಾಮೆಂಟ್ ಮಾಡುತ್ತಿದ್ದಾರೆ.

rashmika

ಈ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ರಶ್ಮಿಕಾ, 'ನನ್ನ ಸ್ನೇಹಿತೆ ರಾಗಿಣಿ ಇಂದು ಮದುವೆಯಾದರು. ನನ್ನ ಫ್ಲೈಟ್ ತಡವಾದರೂ ಸಹ ನಾನು ಮದುವೆಗೆ ಹಾಜರಾದೆ. ದೇವರಿಗೆ ನಾನು ಧನ್ಯವಾದ ತಿಳಿಸುತ್ತೇನೆ' ಎಂದಿದ್ದಾರೆ.

rashmika

'ಕೊನೆಗೂ ಅವಳ ಮದುವೆಗೆ ಬಂದೆ. ನಾನು ಈ ಗೆಳತಿಯ ಜೊತೆಯೇ ಬೆಳೆದಿದ್ದೀನಿ. 17 ವರ್ಷಗಳಿಂದ ಜೊತೆಯಲ್ಲಿದ್ದೇವೆ. ಏನು ಬದಲಾಗಿಲ್ಲ' ಎಂದು ಹೇಳಿದ್ದಾರೆ.

rashmika

ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದಾರೆ. ಬಿಡುಗಡೆಗೆ ಕಾಯುತ್ತಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ರಶ್ಮಿಕಾ ಇನ್ನೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಣಬೀರ್ ಕಪೂರ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ.

rashmika

ಇನ್ನು ತಮಿಳಿನಲ್ಲಿ ನಟ ವಿಜಯ್ ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ದಳಪತಿ ವಿಜಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಬೇಕಿದೆ.

Latest Videos

click me!