ಅಂಬಾನಿ ಮದ್ವೆಲಿ ಕಾಣಿಸಿಕೊಂಡ ಕತ್ರಿನಾ ಗರ್ಭಿಣೀನಾ… ಫ್ಯಾನ್ಸ್ ಗಳಿಗೆ ಆಕೆಯ ಹೊಟ್ಟೆ ಮೇಲೆ ಕಣ್ಣು…

Published : Jul 13, 2024, 06:06 PM IST

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಹಲವು ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು. ಜೋಡಿಯ ಸ್ಟೈಲಿಶ್ ಲುಕ್, ವಿಶೇಷವಾಗಿ ಕತ್ರಿನಾ ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿದ್ದು, ಇವರ ಬೇಬಿ ಬಂಪ್ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ.   

PREV
17
ಅಂಬಾನಿ ಮದ್ವೆಲಿ ಕಾಣಿಸಿಕೊಂಡ ಕತ್ರಿನಾ ಗರ್ಭಿಣೀನಾ… ಫ್ಯಾನ್ಸ್ ಗಳಿಗೆ ಆಕೆಯ ಹೊಟ್ಟೆ ಮೇಲೆ ಕಣ್ಣು…

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant and Radhika wedding) ಅವರ ವಿವಾಹದ ವಿಶೇಷ ಸಂದರ್ಭದಲ್ಲಿ, ದೇಶ ಮತ್ತು ವಿದೇಶಗಳಿಂದ ಅತಿಥಿಗಳು ಬರುತ್ತಿದ್ದು ಅನೇಕ ಸಿನಿಮಾರಂಗದ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸಹ ಈ ಮದುವೆಯಲ್ಲಿ ಭಾಗವಹಿಸಿದ್ದರು.  ವಿಶೇಷಾ ಅತಿಥಿಗಳ ಫೋಟೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ. ಅದರಲ್ಲೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋಟೋಗಳು ಸಹ ಭಾರಿ ಸದ್ದು ಮಾಡುತ್ತಿದೆ. 

27

ಕತ್ರಿನಾ (Katrina Kaif) ಮತ್ತು ವಿಕ್ಕಿ ಮದುವೆ ಸ್ಥಳಕ್ಕೆ ಪ್ರವೇಶಿಸುವ ಮೊದಲು ಫೋಟೋಗಳಿಗೆ ಪೋಸ್ ನೀಡಿದರು, ವಿಕ್ಕಿ ಕೌಶಲ್ ಕ್ರೀಮ್ ಮತ್ತು ಗೋಲ್ಡ್ ಬಣ್ಣದ ಶೆರ್ವಾನಿಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಇನ್ನು ಕತ್ರೀನಾ ಕೈಫ್ ಕೆಂಪು ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಮಿಂಚುತ್ತಿದ್ದರು. ಇವರಿಬ್ಬರ ಜೋಡಿ ನೋಡಿ ಜನ ವಾವ್ ಅನ್ನುತ್ತಿದ್ದಾರೆ. ಜೊತೆಗೆ ಮತ್ತೊಂದು ವಿಷ್ಯದ ಬಗ್ಗೆ ಬಹರಿ ಚರ್ಚೆ ನಡೆಯುತ್ತಿದೆ. 
 

37

ವಿಕ್ಕಿ (Vicky Kaushal) ತನ್ನ ಹೆಂಡತಿ ಕತ್ರಿನ ಪ್ರೆಗ್ನೆಂಟ್ ಹೌದೋ? ಅಲ್ವೋ ಎನ್ನುವ ಬಗ್ಗೆ ಎಲ್ಲಿಯೂ ಕಾಮೆಂಟ್ ಮಾಡದೇ ಮೌನವಾಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಕತ್ರೀನಾ ಲುಕ್ ನೋಡಿಯೇ ಆಕೆ ಪ್ರೆಗ್ನೆಂಟ್ ಅನ್ನೋದನ್ನು ಹೇಳುತ್ತಿದ್ದು, ಬೇಬಿ ಬಂಪ್ ಕಾಣಿಸುತ್ತಿರೋದಾಗಿ ಹೇಳುತ್ತಿದ್ದಾರೆ.  
 

47

ಕತ್ರಿನಾ ಕೈಫ್ ಬ್ಲಡ್ ರೆಡ್ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ನಿಜಾ, ಆದರೆ ಅವರ ಲುಕ್ ಗಿಂತ ಹೆಚ್ಚಾಗಿ, ಅವರ ಬೇಬಿ ಬಂಪ್ (baby bump)ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹೌದು, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವೀಡಿಯೊ ಬಂದ ಕೂಡಲೇ, ಅಭಿಮಾನಿಗಳು ಸಾಲು ಸಾಲು ಕಾಮೆಂಟ್ ಗಳನ್ನು ಹಾಕಿದ್ದಾರೆ. ಕೆಲವು ತಿಂಗಳುಗಳಿಂದ ಬರುತ್ತಿದ್ದ ರೂಮರ್ಸ್ ಈಗ ನಿಜವಾಗಿದೆ ಕತ್ರೀನಾ ಗರ್ಬಿಣಿ ಅನ್ನುತ್ತಿದ್ದಾರೆ. 
 

57

ನೆಟ್ಟಿಗರು ಕಾಮೆಂಟ್ ಮಾಡಿ "ನಿಜವಾಗಿಯೂ ಕ್ಯಾಟ್ ಗರ್ಭಿಣಿಯಾಗಿದ್ದಾಳೆ (pregnant)" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮುಖದಲ್ಲಿನ ಗ್ಲೋ ಎಲ್ಲವನ್ನೂ ಹೇಳುತ್ತದೆ ಎಂದರೆ, ಇನ್ನೊಬ್ಬರು ಕಾಮೆಂಟ್ ಮಾಡಿ ಈಗ  ಬೇಬಿ ಬಂಪ್ ಲೈಟ್ ಆಗಿ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ. 
 

67

ಕತ್ರಿನಾ ಅವರನ್ನು ಈ ರೀತಿಯಾಗಿ ನೋಡಿ  ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ ನಿಜ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಲೂಸ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುವ ಕತ್ರೀನಾ ಗರ್ಭಿಣಿ ಹೌದೋ ಅಲ್ವೋ ಅನ್ನೊದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೇ ಸುದ್ದಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಿಕ್ಕಿ-ಕತ್ರೀನಾ ಅವರೇ ಅಧಿಕೃತ ಮಾಹಿತಿ ಆದಷ್ಟು ಬೇಗನೆ ನೀಡಲಿ ಅಂತ ಕಾಯ್ತಿದ್ದಾರೆ ಅಭಿಮಾನಿಗಳು. 
 

77

ಇತ್ತೀಚೆಗೆ ತಮ್ಮ ಬ್ಯಾಡ್ ನ್ಯೂಜ್ ಚಿತ್ರದ ಪ್ರಚಾರಕ್ಕಾಗಿ ವಿಕ್ಕಿ ಕೌಶಲ್ ನೀಡಿದ ಸಂದರ್ಶನದಲ್ಲಿ, ನಿರೂಪಕರು ನಿಮ್ ಕಡೆಯಿಂದ ಏನಾದ್ರೂ ಗುಡ್ ನ್ಯೂಸ್ ಇದೆಯಾ ಎಂದು ಕೇಳಿದ್ದಾರೆ, ಅದಕ್ಕೆ ವಿಕ್ಕಿ ಪ್ರೆಗ್ನೆನ್ಸಿ ರೂಮರ್ಸ್ ಬಗ್ಗೆ ಮಾತನಾಡದೇ, ಅದನ್ನೂ ನಿರಾಕರಿಸದೇ, ಸಮಯ ಬಂದಾಗ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಹೇಳಿದರು. ಸದ್ಯಕ್ಕೆ, ಅಧಿಕೃತ ಪ್ರಕಟಣೆ ಮಾಡುವವರೆಗೂ ಅಭಿಮಾನಿಗಳು ರೂಮರ್ಸ್ ಮಾಡುತ್ತಲೇ ಇರಬೇಕಾಗುತ್ತದೆ.
 

Read more Photos on
click me!

Recommended Stories