ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿ ಹಳೆಯ ಫೋಟೋಸ್ ನೋಡಿ

First Published | Dec 8, 2023, 7:20 PM IST

ಕನ್ನಡದ ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಲೀಲಾವತಿ ಆ ಕಾಲದ ಅತ್ಯಂತ ಸುಂದರಿ ನಟಿಯಾಗಿದ್ದರು. ಸುಮಾರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಅದ್ಭುತ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿಯರ ಹಳೆಯ ಫೋಟೋಸ್ ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ 85 ವರ್ಷದ ನಟಿ  ಕೊನೆಯುಸಿರೆಳೆದಿದ್ದು, ಪುತ್ರ ವಿನೋದ್​ ರಾಜ್ ಅವರನ್ನು ಅಗಲಿದ್ದಾರೆ. ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದೆ.

1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ಭಾಷೆಯ ದಿಗ್ಗಜ ನಟರ ಜೊತೆ ನಟಿಸಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಆ ಕಾಲದಲ್ಲಿ ಎಲ್ಲರ ಮೆಚ್ಚಿನ ನಟಿ ಲೀಲಾವತಿ. ಸುರಸುಂದರಿಯಾಗಿದ್ದ ನಟಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರು.

Tap to resize

1953ರಲ್ಲಿ ಬಿಡುಗಡೆಯಾಗಿದ್ದ 'ಚಂಚಲ ಕುಮಾರಿ' ಚಿತ್ರದ ಮೂಲಕ ಲೀಲಾವತಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.ಕನ್ನಡದಲ್ಲಿ ದಿವಂಗತ ನಟ ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದವರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ನಟಿಗಿದೆ.

ನಂತರ ಕನ್ನಡ, ತೆಲುಗು, ಮಲಯಾಳಂ, ತುಳು ಮುಂತಾದ ಭಾಷೆಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದು ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್ ಫೇರ್​ ಪ್ರಶಸ್ತಿ ಕೂಡ ಸಿಕ್ಕಿತ್ತು.

1958ರ ಬಳಿಕ ಲೀಲಾವತಿ ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಜ ಮಲಯ ಸಿಂಹ, ಅಬ್ಬಾ ಆ ಹುಡುಗಿ, ಧರ್ಮ ವಿಜಯ, ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಕರುಣೆಯೇ ಕುಟುಂಬದ ಕಣ್ಣು, ಭೂದಾನ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

ಶ್ರಾವಣ ಬಂತು, ಮೂರುವರೆ ವಜ್ರಗಳು, ಜಗಜ್ಯೋತಿ ಬಸವೇಶ್ವರ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಮನ ಮೆಚ್ಚಿದ ಮಡದಿ, ಚಂದ್ರಹಾಸ, ಮದುವೆ ಮಾಡಿ ನೋಡು, ಮೋಹಿನಿ ಭಸ್ಮಾಸುರ, ದಶಾವತಾರ ಮುಂತಾದ ಸಿನಿಮಾಗಳಲ್ಲಿ ಲೀಲಾವತಿ ಅವರು ಡಾ. ರಾಜ್‌ಕುಮಾರ್‌ ಮತ್ತು ಲೀಲಾವತಿಯವರು ಜತೆಯಾಗಿ ನಟಿಸಿದ್ದಾರೆ.

ಭೋದನಾ, ಧರ್ಮ ವಿಜಯ, ಕಣ್ತೇರೆದು ನೋಡು, ವಿಧಿ ವಿಲಾಸ, ಜೀವನ ತರಂಗ, ಕನ್ಯಾ ರತ್ನ, ಕುಲವಧು, ಮಲ್ಲಿ ಮದುವೆ, ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಇದೇ ಮಹಾಸುದೀನ, ನಾಗಾಪೂಜಾ, ವಾತ್ಸಲ್ಯ, ಪ್ರೇಮಮಯಿ, ತೂಗುದೀಪ, ಗಂಗೇ ಗೌರಿ, ಭಾಗ್ಯ ದೇವತೆ, ಉಯ್ಯಾಲೆ, ದೂರದ ಬೆಟ್ಟ, ವಸಂತ ಗೀತಾ, ಎರಡು ನಕ್ಷತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ಜತೆಯಾಗಿ ನಟಿಸಿದ್ದಾರೆ.

'ಮದುವೆ ಮಾಡಿನೋಡು' ಮತ್ತು 'ಸಂತ ತುಕಾರಾಮ್​' ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಜೀವಮಾನ ಸಾಧನೆಗಾಗಿ 1999ರಲ್ಲಿ ಲೀಲಾವತಿ ಅವರು ಡಾ. ರಾಜ್​ಕುಮಾರ್​ ಪ್ರಶಸ್ತಿ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್​ ನೀಡಲಾಗಿತ್ತು.

ಹಿರಿಯ ನಟಿ ಲೀಲಾವತಿ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Latest Videos

click me!