ಯಾರಾದರೂ ಸಂಬಂಧಿಗಳು ಅಥವಾ ಸ್ನೇಹಿತರು ಮನೆಗೆ ಬಂದು ನಿಮ್ಮ ಪತ್ನಿ ಎಲ್ಲಿ ಎಂದು ತಂದೆಯನ್ನು ಕೇಳಿದರೆ, ಅವರು 'ಪಾಪ ನೀರು ಮಲ್ಕೊಂಡಿದ್ದಾರೆ' ಅಂತ ಹೇಳ್ತಾರೆ. ಅಮ್ಮನನ್ನು ತಂದೆ ಮುದ್ದಾಗಿ 'ನೀರು' ಅಂತ ಕರೀತಾರೆ. ಕುಟುಂಬದಲ್ಲಿ ಎಲ್ಲರೂ ಊಟಕ್ಕೆ ಸಿದ್ಧರಾಗುತ್ತಿರುವಾಗ, 'ನಿಮ್ಮ ಪತ್ನಿ ಎಲ್ಲಿ' ಅಂತ ಕೇಳಿದರೆ, 'ಪಾಪ ನೀರು ಇನ್ನೂ ರೆಡಿ ಆಗ್ತಿದ್ದಾರೆ' ಅಂತ ಹೇಳ್ತಾರೆ. ಅಮ್ಮ ಶಾಪಿಂಗ್‌ಗೆ ಹೋದರೆ, 'ಪಾಪ ನೀರು ಶಾಪಿಂಗ್‌ಗೆ ಹೋಗಿದ್ದಾರೆ' ಅಂತ ಹೇಳ್ತಾರೆ. ಶಾಪಿಂಗ್ ಮಾಡೋದ್ರಲ್ಲಿ ಪಾಪ ಏನಿದೆ ಅಂತ ಎಲ್ಲರೂ ಶಾಕ್ ಆಗ್ತಾರೆ. ವೆಂಕಟೇಶ್ ತಮ್ಮ ಪತ್ನಿ ಮೇಲೆ ಎಷ್ಟು ಪ್ರೀತಿ ತೋರಿಸುತ್ತಾರೆ ಎಂದು ಆಶ್ರಿತ ದಗ್ಗುಬಾಟಿ ಹೇಳಿದ್ದಾರೆ.