ಕಂಗನಾ ರಣಾವತ್ ಲೈಫ್ ಸೀಕ್ರೆಟ್ ಹೇಳಿದ ನಟ ಪ್ರಭಾಸ್, ರಹಸ್ಯ ಮಾತು ಬಹಿರಂಗ

Published : Jan 16, 2025, 07:50 PM ISTUpdated : Jan 16, 2025, 07:52 PM IST

ನಟಿಯರು ತಮ್ಮ ಲೈಫ್ ಸೀಕ್ರೆಟ್ಸ್‌ ಅನ್ನು ತುಂಬಾ ಆಪ್ತರಿಗೆ ಮಾತ್ರ ಹೇಳ್ಕೊಳ್ತಾರೆ. ಹೀಗೆ ಕಂಗನಾ ರಣಾವತ್ ಪ್ರಭಾಸ್ ಬಳಿ ಮಾತ್ರ ಹೇಳಿದ ಸೀಕ್ರೆಟ್ ಒಂದನ್ನು ನಟ ರಿವೀಲ್ ಮಾಡಿದ್ದರೆ.

PREV
15
ಕಂಗನಾ ರಣಾವತ್ ಲೈಫ್ ಸೀಕ್ರೆಟ್ ಹೇಳಿದ ನಟ ಪ್ರಭಾಸ್, ರಹಸ್ಯ ಮಾತು ಬಹಿರಂಗ

ನಟಿಯರ ಕೆರಿಯರ್ ಯಾವಾಗ ಹೇಗೆ ತಿರುವು ಪಡೆಯುತ್ತೆ ಅಂತ ಯಾರಿಗೂ ಗೊತ್ತಿರಲ್ಲ. ಸ್ಟಾರ್ ನಟಿಯರೇ ದುರಂತ ಅಂತ್ಯ ಕಂಡಿದ್ದುಂಟು. ಇನ್ನು ಕೆಲವರು ಆಕಸ್ಮಿಕವಾಗಿ ನಟಿಯರಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದೂ ಇದೆ. ಈ ಪೈಕಿ ಕಂಗನಾ ರಣಾವತ್ ಯಾವುದೇ ಹಿನ್ನಲೆ ಇಲ್ಲದೆ ಬಾಲಿವುಡ್‌ಗೆ ಎಂಟ್ರಿಕೊಟ್ಟ ನಟಿಯಾಗಿ ಮಿಂಚಿದ್ದಾರೆ. ಜನಮನ ಗೆದ್ದಿದ್ದಾರೆ. ಇದೀಗ ಕಂಗನಾ ಬಿಜೆಪಿ ಸಂಸದೆಯಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಆದರೆ ಕಂಗನಾ ಲೈಫ್ ಹಲವು ರೋಚಕತೆಗಳನ್ನು ಹೊಂದಿದೆ. ಈ ಪೈಕಿ ಕೆಲ ಸೀಕ್ರೆಟ್ ಇದೀಗ ಬಹಿರಂಗವಾಗಿದೆ. 

25

ರಂಗನಾ ರಣಾವತ್ ತಮ್ಮ ಕರಿಯರ್, ಜೀವನದಲ್ಲಿ ನಡೆದ ಘಟನೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಕೆಲ ವಿಚಾರಗಳನ್ನು ಆಪ್ತರಲ್ಲಿ ಮಾತ್ರ ಹಂಚಿಕೊಂಡಿದ್ದಾರೆ. ಏಕ್ ನಿರಂಜನ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ಕಂಗನಾ ರಣಾವತ್ ತಮ್ಮ ಲೈಫ್ ಸೀಕ್ರೆಟ್ ಪ್ರಭಾಸ್‌ಗೆ ಹೇಳಿಕೊಂಡಿದ್ದರು. ಆದರೆ ಈ ಸೀಕ್ರೆಟ್ ಇದೀಗ ಬಹಿರಂಗವಾಗಿದೆ. 

35

ಕಂಗನಾ ತೆಲುಗಿಗೆ ಪಾದಾರ್ಪಣೆ ಮಾಡಿದ್ದು ಏಕ್ ನಿರಂಜನ್ ಚಿತ್ರದ ಮೂಲಕ. ಶೂಟಿಂಗ್ ವೇಳೆ ತಮ್ಮ ಲೈಫ್ ಬಗ್ಗೆ ಪ್ರಭಾಸ್ ಜೊತೆ ಕಂಗನಾ ಹಲವು ವಿಷಯ ಹಂಚಿಕೊಂಡಿದ್ದಾರಂತೆ. ತಾನು ಒಂದು ಸಣ್ಣ ಹಳ್ಳಿಯಿಂದ ಬಂದವಳು, ಸಿನಿಮಾ ಜೊತೆ ಯಾವುದೇ ಸಂಬಂಧ ಇರಲಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನೂ ವಿವರಿಸಿದ್ದಾರೆ. 

45

ಒಮ್ಮೆ ಫ್ರೆಂಡ್ಸ್ ಜೊತೆ ಕೇರಳಕ್ಕೆ ಹೋದಾಗ ಒಬ್ಬ ಜ್ಯೋತಿಷಿ ಕಂಗನಾ ಕೈ ನೋಡಿ ನೀವು ನಟಿ ಆಗ್ತೀರ ಅಂದಿದ್ದರಂತೆ. ಆಗ ಕಂಗನಾಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ಆದ್ರೆ ಜ್ಯೋತಿಷಿ ಹೇಳಿದ ಹಾಗೆ ಕಂಗನಾ ನಟಿ ಆದ್ರು. ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಜ್ಯೋತಿಷಿ ಮಾತು ನನ್ನ ಬಾಳಲ್ಲಿ ನಿಜವಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಈ ಮಾಹಿತಿಗಳನ್ನು ಪ್ರಭಾಸ್ ಬಹಿರಂಗಪಡಿಸಿದ್ದಾರೆ. 

55

ಕಂಗನಾ ರಣಾವತ್ ಕುರಿತು ಹಲವು ಮಾಹಿತಿಗಳನ್ನು ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಪ್ರಮೋಷನ್ ವೇಳೆ ಹೇಳಿದ್ದಾರೆ. ಕಂಗನಾ ಕರಿಯರ್ ಕುರಿತು ಹಲವು ಏರಿಳಿತ, ಎದುರಿಸಿದ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.  ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದು ತಮ್ಮ ಜೀವನದ ಮಿರಾಕಲ್ ಅಂತ ಪ್ರಭಾಸ್ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories