Valentine's Day: ಅರ್ಜುನ್‌ ಕಪೂರ್‌ ಜೊತೆಯ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಮಲೈಕಾ!

First Published | Feb 14, 2022, 7:03 PM IST

ಪ್ರೇಮಿಗಳ ದಿನದಂದು (Valentine's Day) ಮಲೈಕಾ ಅರೋರಾ (Malaika Arora) ಅವರ ಪೋಸ್ಟ್  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಾಸ್ತವವಾಗಿ, ಮಲೈಕಾ ಪ್ರೇಮಿಗಳ ದಿನದಂದು ಅರ್ಜುನ್ ಕಪೂರ್ (Arjun Kapoor) ಅವರನ್ನು ಹಗ್‌ ಮಾಡಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಮಲೈಕಾ ಕೂಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪೋಟೋಗೆ ಮಲೈಕಾ Mine ಎಂದು ಕ್ಯಾಪ್ಷನ್‌ ನೀಡಿದ್ದಾರೆ ಹಾಗೂ ಜೊತೆಗೆ ಹಾರ್ಟ್‌ ಎಮೋಜಿಯನ್ನು ಹಂಚಿಕೊಂಡಿದ್ದಾರೆ. 

ಈ ಫೋಟೋದಲ್ಲಿ ಮಲೈಕಾ ಅರ್ಜುನ್ ಕಪೂರ್ (Arjun Kapoor) ಅವರ ತೋಳುಗಳಲ್ಲಿ ಪ್ರೀತಿಯಿಂದ ಕಣ್ಣು ಮುಚ್ಚಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅರ್ಜುನ್ ಕಪೂರ್ ಕೂಡ ಮಲೈಕಾ  (Malaika) ಅವರ ಹಣೆಗೆ ಚುಂಬಿಸುತ್ತಿದ್ದಾರೆ (Kiss). ಮಲೈಕಾ ಬಿಳಿ ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಮತ್ತೊಂದೆಡೆ, ಅರ್ಜುನ್ ಕಪೂರ್ ಕಪ್ಪು ಟಿ-ಶರ್ಟ್ ಮತ್ತು ಬೂದು ಬಣ್ಣದ ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದಾರೆ. 

ಇಬ್ಬರ ಈ ರೊಮ್ಯಾಂಟಿಕ್ ಫೋಟೋಗೆ (Romantic Photo) ಸೋಶಿಯಲ್‌ ಮಿಡೀಯಾ ಯೂಸರ್ಸ್‌ (Social Media Users) ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಟ್ವಿಂಕಲ್ ಖನ್ನಾ (Twinkle Khanna),  ಮಹೀಪ್ ಕಪೂರ್, ರಾಹುಲ್ ಖನ್ನಾ, ಗಾಯಕಿ ಲೀಸಾ ಮಿಶ್ರಾ ಕೂಡ ಜೋಡಿಯ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

Tap to resize

ಅರ್ಜುನ್ ಮತ್ತು ಮಲೈಕಾ ಅರೋರಾ ಮೂರು ವರ್ಷಗಳ ಹಿಂದೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಆಗ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಫೋಟೋ ಕೂಡ ಶೇರ್ ಮಾಡಿದ್ದಾರೆ. ಆ ದಿನ ಅರ್ಜುನ್ ಕಪೂರ್ ಹುಟ್ಟುಹಬ್ಬವೂ ಆಗಿತ್ತು.

ಅರ್ಜುನ್ ಕಪೂರ್ ಮತ್ತು ಮಲೈಕಾ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿರಬಹುದು, ಆದರೆ ಈ ಜೋಡಿಯ ಅಭಿಮಾನಿಗಳು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ನೋಡಲು ಬಯಸುತ್ತಾರೆ. ಈ ಬಗ್ಗೆ ಮಲೈಕಾ ಹಾಗೂ ಅರ್ಜುನ್‌ ಕಪೂರ್‌ ಯಾವುದೇ ಹೇಳಿಕೆ ನೀಡಿಲ್ಲ.

Malaika

ಕರಣ್ ಜೋಹರ್ (Karan Johar) ಅವರ ಚಾಟ್ ಶೋ 'ಕಾಫಿ ವಿತ್ ಕರಣ್' (Coffee with Karan) ನಲ್ಲಿ ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರನ್ನು ಇಷ್ಟಪಡುತ್ತಾರೆ ಎಂದು ಒಪ್ಪಿಕೊಂಡರು. ಅದೇ ಸಮಯದಲ್ಲಿ, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಹೊಗಳುವುದನ್ನು ಸಹ ಕಾಣಬಹುದು. 

Malaika

ಮಲೈಕಾ ಅರ್ಜುನ್ ಕಪೂರ್ ಗಿಂತ 12 ವರ್ಷ ದೊಡ್ಡವರು. ಮಲೈಕಾಗೆ 48 ವರ್ಷವಾದರೆ, ಅರ್ಜುನ್ ಕಪೂರ್ ಗೆ ಕೇವಲ 36 ವರ್ಷ. ಕೆಲವು ದಿನಗಳ ಹಿಂದೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಆಗಿದ್ದಾರೆ ಎಂದು ಕೆಲವು ವರದಿಗಳು ಹೇಳಿದ್ದವು

ಇದರ ನಂತರ, ಅರ್ಜುನ್ ಕಪೂರ್ ಆ ವದಂತಿಗಳ ಬಗ್ಗೆ ಮೌನವನ್ನು ಮುರಿದರು ಮತ್ತು ಇನ್ಸ್ಟಾಗ್ರಾಮ್‌ನಲ್ಲಿ (Instagram)  ಮಲೈಕಾ ಅರೋರಾ  ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. 'ವದಂತಿಗಳಿಗೆ ಸ್ಥಳವಿಲ್ಲ. ಎಲ್ಲರೂ ಸುರಕ್ಷಿತವಾಗಿರಿ, ಸಂತೋಷವಾಗಿರಿ. ಜನರ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ನಾನು ನಿಮ್ಮೆಲ್ಲರನ್ನೂ ತುಂಬಾ ಪ್ರೀತಿಸುತ್ತೇನೆ' ಎಂದು ಬರೆದಿದ್ದರು.

Latest Videos

click me!