ಹಾಟ್ ಬೆಡಗಿ ಉರ್ಫಿ ಜಾವೇದ್ ಹಿಂದೆ ಮುಂದೆ ಓಪನ್ ಆಗಿರುವ ಬಟ್ಟೆ ತೊಟ್ಟು ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉರ್ಫಿ ಜಾವೇದ್ ಅವರ ವೀಡಿಯೊವನ್ನು ನೋಡಿದ ನಂತರ, ಹೆಚ್ಚಿನ ನೆಟಿಜನ್ಸ್ ಹೋಳಿಯಲ್ಲಾದರೂ ಅವರಿಗೆ ಸರಿಯಾಗಿ ಬಟ್ಟೆ ಧರಿಸಲು ಬರುವುದಿಲ್ವಾ ಎಂದು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಅವರ ಉಡುಪನ್ನು ಇಷ್ಟಪಟ್ಟಿದ್ದಾರೆ.
Image: Katrina KaifInstagram
ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಮತ್ತು ಅತ್ತೆಯೊಂದಿಗೆ ಹೋಳಿ ಆಚರಿಸಿದರು. ಕತ್ರಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮೈದುನ ಸನ್ನಿ ಕೌಶಲ್ ಸಹ ಫೋಟೋಗೆ ಫೋಸ್ ನೀಡಿದ್ದಾ
Image: Katrina KaifInstagram
ಕತ್ರಿನಾ ಕೈಫ್ ಇನ್ಸ್ಟಾಗ್ರಾಮ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಅವರು ತನ್ನ ಅತ್ತೆಯ ಹೆಗಲ ಮೇಲೆ ಕೈಯಿಟ್ಟು ನಗುತ್ತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಪತಿ ವಿಕ್ಕಿ ಕೌಶಲ್ ಕೂಡ ಸಂತೋಷದಿಂದ ಕಾಣುತ್ತಿದ್ದಾರೆ.
ಅಮಿತಾಬ್ ಬಚ್ಚನ್ ಇನ್ಸ್ಟಾಗ್ರಾಮ್‌ನಲ್ಲಿ ಹೋಳಿ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ, ಪತ್ನಿ ಜಯಾ ಬಚ್ಚನ್‌ಗೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಹಳದಿ ಬಣ್ಣದ ಸೂಟ್ ಧರಿಸಿರುವ ಜಯಾ ಕೈಯಲ್ಲಿ ವಿವಿಧ ಬಣ್ಣಗಳ ಬಣ್ಣ ತಟ್ಟೆಯೊಂದಿಗೆ ನಿಂತಿದ್ದು, ಬಿಗ್ ಬಿ ಅವರಿಗೆ ತಿಲಕವನ್ನು ಹಚ್ಚುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.
ಮದುವೆಯ ನಂತರ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಮೊದಲ ಹೋಳಿ ಆಚರಿಸಿದರು. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ತನ್ನ ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಇನ್ನೊಂದು ಫೋಟೋದಲ್ಲಿ ಪತಿಗೆ ನಮಸ್ಕರಿಸುತ್ತಿದ್ದಾರೆ.
ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ಪತಿ ವಿವೇಕ್ ದಹಿಯಾ ಅವರೊಂದಿಗೆ ಹೋಳಿ ಆಡಿದರು. ಹೊರಬಿದ್ದ ಫೋಟೋಗಳಲ್ಲಿ, ದಿವ್ಯಾಂಕ ತನ್ನ ಪತಿಗೆ ಗುಲಾಬಿ ಬಣ್ಣ ಹಚ್ಚುತ್ತಿರುವುದು ಕಾಣಬಹುದು.
ಅಂಕಿತಾ ಲೋಖಂಡೆ, ಪತಿ ವಿಕ್ಕಿ ಜೈನ್ ಮದುವೆಯ ನಂತರ ಮೊದಲ ಹೋಳಿ ಆಡಿದರು. ಅವರು ಹೋಳಿ ಆಡುತ್ತಿರುವ ಕೆಲವು ಫೋಟೋಗಳು ಹೊರಬಿದ್ದಿವೆ. ದಂಪತಿಗಳು ಬಿಳಿ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು ಮತ್ತು ಇಬ್ಬರೂ ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.
ಕರಿಷ್ಮಾ ತನ್ನಾ ಕೂಡ ಮದುವೆಯ ನಂತರ ಪತಿಯೊಂದಿಗೆ ಮೊದಲ ಹೋಳಿ ಆಚರಿಸಿದರು. ದಂಪತಿ ತಮ್ಮ ಹೋಳಿ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಅತ್ತೆಯೊಂದಿಗೆ ಪೋಸ್ ನೀಡುತ್ತಿದ್ದಾರೆ. ಫೋಟೋಗಳಲ್ಲಿ ಅವರು ತುಂಬಾ ಸಂತೋಷವಾ ಕಾಣುತ್ತಾರೆ.