ಜನಪ್ರಿಯತೆ ಇದೆ ಆದರೆ ಕೆಲಸವಿಲ್ಲ, ನನಗೆ ಯಾರು ಗೌರವ ಕೊಡಲ್ಲ: ಉರ್ಫಿ ಜಾವೇದ್ ಮನದಾಳ

First Published | Jul 1, 2023, 3:34 PM IST

ವಿಚಿತ್ರ ಉಡುಗೆ ಮೂಲಕವೇ ಹೆಚ್ಚು ಖ್ಯಾತಿಗಳಿಸಿರುವ ನಟಿ ಉರ್ಫಿ ಜಾವೇದ್ ತನಗೆ ಖ್ಯಾತಿ ಇದೆ, ಆದರೆ ಯಾರು ಗೌರಲ ಕೊಡಲ್ಲ, ತನ್ನ ಜೊತೆ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ. 

ವಿಚಿತ್ರ ಬಟ್ಟೆ ಮೂಲಕವೇ ಖ್ಯಾತಿಗಳಿಸಿರುವ ನಟಿ ಉರ್ಫಿ ಜಾವೇದ್ ಇದೀಗ ಕೆಲಸಕ್ಕಾಗಿ ಪರದಾಡುತ್ತಿದ್ದೀನಿ ಎಂದು ಬಹಿರಂಗ ಪಡಿಸಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಉರ್ಫಿ ಈ ಬಗ್ಗೆ ಮಾತನಾಡಿದ್ದಾರೆ. ಜನರು ತನ್ನ ಜೊತೆ ಕೆಲಸ ಮಾಡಲು ಇಷ್ಟ ಪಡಲ್ಲ ಎಂದು ಉರ್ಫಿ ಹೇಳಿದ್ದಾರೆ. 

'ನನಗೆ ಜನಪ್ರಿಯತೆ ಇದೆ. ಖ್ಯಾತಿ ಇದೆ ಹೌದು ಆದರೆ ಕೆಲಸ ಇಲ್ಲ' ಎಂದು ಹೇಳಿದ್ದಾರೆ. 'ಜನರು ನನಗೆ ಗೌರವ ಕೊಡಲ್ಲ. ನನ್ನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ' ಎಂದು ಉರ್ಫಿ ಬೇಸರ ಹೊರಹಾಕಿದ್ದಾರೆ. 

Tap to resize

ತನ್ನ ಫ್ಯಾಷನ್ ಸೆನ್ಸ್ ಬಗ್ಗೆ ಮಾತನಾಡಿದ ನಟಿ, 'ನಾನು ನನ್ನ ಫ್ಯಾಷನ್ ಸೆನ್ಸ್ ಅನ್ನು ಬೋಲ್ಡ್ ಎಂದು ವಿವರಿಸುತ್ತೇನೆ ಮತ್ತು ನಾನು ಹೆಚ್ಚು ಗಮನ ಕೊಡುತ್ತೇನೆ. ನನ್ನ ಕಡೆ ಎಲ್ಲರೂ ಗಮನ ಹರಿಸಬೇಕು ಆದ್ದರಿಂದ ನಾನು ಹಾಗೆ ಧರಿಸುತ್ತೇನೆ. ಸಿನಿಮಾ, ದೂರದರ್ಶನದಲ್ಲಿ ನೋಡುತ್ತಿರುವುದನ್ನು ನೋಡಿ ನಾನು ಆಕರ್ಷಿತನಾಗಿದ್ದೆ ಮತ್ತು ನಾನು ಯಾವಾಗಲೂ ನಟಿಯಾಗಲು ಬಯಸುತ್ತೇನೆ. ನಾನು ಪ್ರಸಿದ್ಧನಾಗಬೇಕೆಂದು ಬಯಸಿದ್ದೆ' ಎಂದು ಹೇಳಿದ್ದಾರೆ. 

ನಟಿ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದರು. ಹೆಚ್ಚು ದಿನ ಬಿಗ್ ಮನೆಯಲ್ಲಿ ಇರದಿದ್ದರೂ ಹೊರಗಡೆ ಬಂದ ಮೇಲೆ ಸಿಕ್ಕಪಾಟ್ಟೆ ಖ್ಯಾತಿಗಳಿಸಿದರು. ವಿಚಿತ್ರ ಬಟ್ಟೆಗಳ ಮೂಲಕವೇ ಫೇಮಸ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ಉರ್ಫಿ, 'ಎಲಿಮಿನೇಟ್ ಆದ ಮೊದಲ ಸ್ಪರ್ಧಿ ನಾನು. ನನ್ನ ಫ್ಯಾಷನ್ ಆಯ್ಕೆಗಳಿಂದಾಗಿ ಆ ಕಾರ್ಯಕ್ರಮದ ನಂತರ ನಾನು ಜನಪ್ರಿಯನಾಗಿದ್ದೇನೆ' ಎಂದು ಹೇಳಿದ್ದಾರೆ. 

ದ್ವೇಷ, ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಉರ್ಫಿ, ಖ್ಯಾತಿಯ ಜೊತೆಗೆ ದ್ವೇಷವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. 'ನಾನು ಕೂಡ ಮನುಷ್ಯ ಆದ್ದರಿಂದ ನಾನು ಅಸಮಾಧಾನಗೊಳ್ಳುತ್ತೇನೆ ಆದರೆ ನಂತರ ನಾನು ಅಸಮಾಧಾನಗೊಳ್ಳುವುದು 5-10 ನಿಮಿಷಗಳವರೆಗೆ ಇರುತ್ತದೆ' ಎಂದರು. 

'ಯಾವುದೇ ವಿನ್ಯಾಸಕರು ನನಗೆ ಬಟ್ಟೆಗಳನ್ನು ನೀಡುವುದಿಲ್ಲ. ಅದಕ್ಕಾಗಿಯೇ ನಾನು ನನ್ನದೇ ಆದ ಸ್ಟೈಲ್ ಮಾಡಲು ಪ್ರಾರಂಭಿಸಿದೆ. ಅಬು ಸಂದೀಪ್ ನನಗಾಗಿ ಅದನ್ನು ಬದಲಾಯಿಸಿದ್ದಾರೆ' ಎಂದು ಹೇಳಿದ್ದಾರೆ. 

ಉರ್ಫಿ ಜಾವೇದ್ ಬಿಗ್ ಬಾಸ್ OTT ಮತ್ತು MTVSplitsvillaX4 ಅಂತಹ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.  ಆದರೆ ರಿಯಾಲಿಟಿ ಶೋಗಳಿಂದ ಹೆಚ್ಚಾಗಿ ವಿಚಿತ್ರ ಶೈಲಿಯ ಬಟ್ಟೆಯ ಮೂಲಕವೇ ಹೆಚ್ಚು ಖ್ಯಾತಿಗಳಿಸಿದ್ದಾರೆ. ಉರ್ಫಿ ಯಾರೆಂದು ಚಿರಪರಿಚಿತರಾಗಿದ್ದೇ ವಿಚಿತ್ರ ಬಟ್ಟೆಗಳ ಮೂಲಕ. ಈ ವರ್ಷದ ಆರಂಭದಲ್ಲಿ ಉರ್ಫಿ, ಡಿಸೈನರ್ ಜೋಡಿಯಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರಿಗೆ ಮಾಡೆಲಿಂಗ್ ಮಾಡಿದ ನಂತರ ಹೆಚ್ಚು ಟ್ರೆಂಡ್ ಆಗಿದ್ದರು.

Latest Videos

click me!