Lust Stories 2 : ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪಡೆದ ಸಂಭಾವನೆ ಎಷ್ಷು?

Published : Jun 28, 2023, 04:09 PM IST

ಬಿಟೌನ್‌ನ ಹಾಟೆಸ್ಟ್ ಜೋಡಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma) ನಟಿಸಿರುವ  ಬಹು ನಿರೀಕ್ಷಿತ ಲಸ್ಟ್ ಸ್ಟೋರೀಸ್ 2 (Lust Stories 2)  ಎಲ್ಲರ ಕುತೂಹಲ ಕೆರಳಿಸಿದೆ. ಸಿನಿಮಾ ಪ್ರೀಮಿಯರ್‌ ಶೋನಲ್ಲಿ ಈ ಜೋಡಿ ಒಟ್ಟಿಗೆ ಪೋಸ್‌ ನೀಡಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ. ನೀನಾ ಗುಪ್ತಾ,, ಕಾಜೋಲ್,  ಮೃಣಾಲ್ ಠಾಕೂರ್, ಅಮೃತಾ ಸುಭಾಷ್, ಅಂಗದ್ ಬೇಡಿ, ತಿಲೋತ್ತಮ ಮತ್ತು ಕುಮುದ್ ಮಿಶ್ರಾ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ. ಈ ಪಾತ್ರವರ್ಗ ಪಡೆದ ಸಂಭಾವನೆ ಎಷ್ಷು ಗೊತ್ತಾ?

PREV
18
Lust Stories 2 : ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪಡೆದ ಸಂಭಾವನೆ ಎಷ್ಷು?

ಲಸ್ಟ್ ಸ್ಟೋರೀಸ್ ಒಂದು ಸಂಕಲನ ಚಲನಚಿತ್ರವಾಗಿದ್ದು, ಇದು ಕೌಟುಂಬಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಅವರ ಲೈಂಗಿಕ ಬಯಕೆಗಳು ಅಗತ್ಯಗಳ ಕುರಿತು ಹಲವಾರು ಕಥೆಗಳನ್ನು ಚರ್ಚಿಸುತ್ತದೆ.

28

ಕರಣ್ ಜೋಹರ್, ಜೋಯಾ ಅಖ್ತರ್, ಬಾಲ್ಕಿ ಮತ್ತು ಅನುರಾಗ್ ಕಶ್ಯಪ್ ಅವರಂತಹ ನಿರ್ದೇಶಕರು ನಾಲ್ಕು ಪ್ರತ್ಯೇಕ ಕಥೆಗಳನ್ನು ನಿರ್ದೇಶನ ಮಾಡಲು ಒಟ್ಟಿಗೆ ಸೇರಿ ಮೊದಲ ಕಂತು ದೊಡ್ಡ ಹಿಟ್ ಆಗಿತ್ತು.

38

ಈಗ ಇದು ಮೊದಲನೆಯದರ ಉತ್ತರಭಾಗವಾಗಿದ್ದು, ನೀನಾ ಗುಪ್ತಾ, ಕಾಜೋಲ್‌, ಮೃಣಾಲ್ ಠಾಕೂರ್‌ನಿಂದ ಹಿಡಿದು ವಿಜಯ್ ವರ್ಮಾವರೆಗೆ ಅನೇಕ ಶ್ರೇಷ್ಠ ಕಲಾವಿದರು ನಟಿಸಿದ್ದಾರೆ. 
 

48

ಅಮಿತ್ ಆರ್ ಶರ್ಮಾ, ಆರ್ ಬಾಲ್ಕಿ, ಸುಜೋಯ್ ಘೋಷ್ ಮತ್ತು ಕೊಂಕಣಾ ಸೇನ್ ಶರ್ಮಾ ಹೊಸ ಕಥೆಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಮೂವೀಸ್ ಮತ್ತು ಆಶಿ ದುವಾ ಅವರ ಫ್ಲೈಯಿಂಗ್ ಯುನಿಕಾರ್ನ್ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಿಸಿದೆ.

58

ನೀನಾ ಗುಪ್ತಾ, ತಮನ್ನಾ ಭಾಟಿಯಾ, ಕಾಜೋಲ್, ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಅಮೃತಾ ಸುಭಾಷ್, ಅಂಗದ್ ಬೇಡಿ, ತಿಲೋತ್ತಮ ಮತ್ತು ಕುಮುದ್ ಮಿಶ್ರಾ ಅವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

68

ತಮನ್ನಾ ಮತ್ತು ವಿಜಯ್ ವರ್ಮಾ, ಮನರಂಜನಾ ಜಗತ್ತಿನಲ್ಲಿ  ಹೊಸ ಪ್ರೇಮ ಪಕ್ಷಿಗಳು, ಲಸ್ಟ್ ಸ್ಟೋರೀಸ್ 2 ರ ಈ ಜೋಡಿಯನ್ನು ನಿಕಟವಾಗಿ ಕಾಣಬಹುದು. ಅವರು ದೂರವಾದ ಪ್ರೇಮಿಗಳಾಗಿ ನಟಿಸುತ್ತಿದ್ದಾರೆ. 

78

ಬಹುನಿರೀಕ್ಷಿತ ಲಸ್ಟ್ ಸ್ಟೋರಿ  2 ಜೂನ್ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುತ್ತದೆ. ಸೆಡಕ್ಟಿವ್ ಥ್ರಿಲ್ಲರ್ ಲಸ್ಟ್ ಸ್ಟೋರೀಸ್ 2 ರ  ಪಾತ್ರಗಳನ್ನು ನಿರ್ವಹಿಸಿದ್ದಕ್ಕಾಗಿ  ನಟನಟಿಯರು ಪಡೆದ ಸಂಭಾವನೆಯ ವಿವರ ಕೆಳಗಿದೆ

 

88

ಲಭ್ಯವಾಗಿರುವ ಮಾಹಿತಿ ಪ್ರಕಾರ ತಮ್ಮ ಪಾತ್ರಕ್ಕಾಗಿ ನೀನಾ ಗುಪ್ತಾ  1 ಕೋಟಿ ರೂ, ಕಾಜೋಲ್ 3 ಕೋಟಿ ರೂ, ತಮನ್ನಾ: 4 ಕೋಟಿ ರೂ ಮತ್ತು ಮೃಣಾಲ್ ಠಾಕೂರ್  3 ಕೋಟಿ ರೂ.  ಪಡೆದಿದ್ದಾರೆ. ಆದರೆ ವಿಜಯ್ ವರ್ಮಾ ಹಾಗೂ ಇತರ ಚಿತ್ರತಂಡದ ಸಂಭಾವನೆ ಪ್ರಕಟವಾಗಿಲ್ಲ.

 

Read more Photos on
click me!

Recommended Stories