ಟಾಲಿವುಡ್‌ನ ಯಶಸ್ವಿ ನಟಿ ಎನಿಸಿರುವ ಸಮಂತಾ ರುತ್ ಪ್ರಭು ಅವರು ಒಮ್ಮೆಗೆ ಸಿನಿಮಾಗೆ ಬಂದವರಲ್ಲ, ಜಾಹೀರಾತುಗಳಲ್ಲಿ ನಟಿಸುತ್ತಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಸಮಂತಾ ಯಶಸ್ವಿ ನಟಿಯಾದರು. ಆದರೆ ಅವರ ಜೀವ ಹೂವಿನ ಹಾಸಿಗೆಯಂತಿಲ್ಲ, ವೈಯಕ್ತಿಕ ಬದುಕಿನಲ್ಲಿನ ಏಳು ಬೀಳು ಹಾಗೂ ಅನಾರೋಗ್ಯದಿಂದ ಕಳೆಗುಂದಿರುವ ಸಮಂತಾ ಅವರ ಹಳೆಯ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಶಾಕ್ ನೀಡುತ್ತಿದೆ. ಸಮಂತಾ ರುತ್ ಪ್ರಭು ಅವರ ವೃತ್ತಿಜೀವನದ ಆರಂಭಿಕ ದಿನಗಳ ಫ್ಲ್ಯಾಶ್‌ಬ್ಯಾಕ್ ವೀಡಿಯೊ ಇದಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈಗ ವೈರಲ್ ಆಗಿರುವುದು ಸಮಂತಾ ನಟಿಸಿದ ಹಳೆಯ ಜಾಹೀರಾತೊಂದರ ವೀಡಿಯೋ ಆಗಿದ್ದು, ಆ ವಿಡಿಯೋದಲ್ಲಿ ಕಾಣಿಸುವ ಸಮಂತಾಗೂ ಈಗಿನ ಸಮಂತಾಗೂ ಗುರುತು ಸಿಗಲಾರದಷ್ಟು ಅಜಗಜಂತರ ವ್ಯತ್ಯಾಸವಿದೆ. ವೀಡಿಯೋ ನೋಡಿದ ಅವರ ಅಭಿಮಾನಿಗಳು ಅವರು ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದು. ಆ ವೀಡಿಯೋಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ನೋಡಿ
ಒಬ್ಬ ಅಭಿಮಾನಿ, ನನಗೆ ಆ ವೀಡಿಯೋದಲ್ಲಿರುವ ಆ ಸಮಂತಾಗೂ ಈ ಸಮಂತಾಗೂ ಯಾವುದೇ ಹೋಲಿಕೆ ಕಾಣಿಸುತ್ತಿಲ್ಲ, ಎಂಥಹಾ ಕ್ರೇಜಿನೆಸ್ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬರು ಅದು ಆಕೆ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಈ ರೀತಿಯ ಕಾಮೆಂಟ್‌ಗಳ ಹೊರತಾಗಿಯೂ ಅನೇಕರು ಸಮಂತಾಳ ಸೌಂದರ್ಯವನ್ನು ಶ್ಲಾಘಿಸಿದರು, ಒಬ್ಬ ಅಭಿಮಾನಿ 'ಆಗ ಅವಳು ಅತ್ಯಂತ ಸುಂದರಿಯಾಗಿದ್ದಳು ಮತ್ತು ಈಗಲೂ ಸಹ' ಎಂದು ಕಾಮೆಂಟ್ ಮಾಡಿದ್ದಾರೆ.
ಸಮಂತಾ 2010 ರ ತೆಲುಗು ಚಿತ್ರ 'ಎಂಮಾಯಂ ಚೆಸ್ಯಾವೆ' ದಲ್ಲಿ ನಟನೆ ಶುರು ಮಾಡಿದರು. ಇದು ತಮಿಳಿನ
ವಿನೈತಾಂಡಿ ವರುವಾಯ ಸಿನಿಮಾದ ರಿಮೇಕ್ ಆಗಿತ್ತು. ಈ ಸಿನಿಮಾದ ನಂತರ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡು ಯಶಸ್ವಿಯಾದರು. ದಕ್ಷಿಣ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ಒಬ್ಬರಾದರು.
ಸಿನಿಮಾ ಮಾತ್ರವಲ್ಲದೇ ನಟಿ ಆನ್‌ಲೈನ್ ಸಿರೀಸ್ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ, ದಿ ಫ್ಯಾಮಿಲಿ ಮ್ಯಾನ್: ಸೀಸನ್ 2 ರಲ್ಲಿ ಗಮನಾರ್ಹ ಪ್ರದರ್ಶನ ಮತ್ತು ಇತ್ತೀಚೆಗೆ ಆಕ್ಷನ್ ಸರಣಿ ಸಿಟಾಡೆಲ್: ಹನಿ ಬನ್ನಿಯಲ್ಲಿ ಅತಿಥಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.
ಸಮಂತಾ ಯಾವಾಗಲೂ ತನ್ನ ನಟನಾ ಸಾಮರ್ಥ್ಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ನೋಟದಿಂದ ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಣ್ಣ ಜಾಹೀರಾತುಗಳಿಂದ ಪ್ರಸಿದ್ಧ ನಟಿಯಾಗುವವರೆಗಿನ ಸಮಂತಾಳ ಪಯಣವು ಸ್ಪೂರ್ತಿದಾಯಕವಾಗಿದೆ. ಅವರು ಈಗ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ತಾರೆಯರಲ್ಲಿ ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಸಿಟಾಡೆಲ್: ಹನಿ ಬನ್ನಿ, ಪ್ರೈಮ್ ವೀಡಿಯೊದಲ್ಲಿ ಇದ್ದು, ಅವರು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್ ಚಿತ್ರ ರಕ್ತ್ ಬ್ರಹ್ಮಾಂಡದಲ್ಲಿ ನಟಿಸಲಿದ್ದಾರೆ.