ನನ್ನ ಜೀವನವೇ ಅರ್ಥಹೀನವೆನಿಸುತ್ತಿದೆ, ಭಾವುಕ ಪೋಸ್ಟ್ ಹಂಚಿಕೊಂಡ ನಟಿ ತ್ರಿಷಾ!

First Published | Dec 25, 2024, 2:54 PM IST

ನನ್ನ ಜೀವನವೇ ಅರ್ಥಹೀನವೆನಿಸುತ್ತಿದೆ, ನೋವು, ದುಃಖ ಉಮ್ಮಳಿಸಿ ಬರುತ್ತಿದೆ ಎಂದು ನಟಿ ತ್ರಿಷಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಟಿ ತೃಷಾ ಭಾವುಕರಾಗಿದ್ದೇಕೆ?

 ಕಳೆದ 20  ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮುಂಚೂಣಿಯ ನಟಿಯಾಗಿ ಮೆರೆದಿರುವ ತ್ರಿಷಾಗೆ ಈಗ 41 ವರ್ಷ. ಆದರೆ 20 ವರ್ಷದ ಹುಡುಗಿಯಂತೆ ಯಂಗ್ ಆಗಿ ಕಾಣುವುದರಿಂದ ತ್ರಿಷಾಗೆ ಇಂದಿಗೂ ಬೇಡಿಕೆ ಕಡಿಮೆಯಾಗಿಲ್ಲ. ಈಗ ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಅವರ ಬಳಿ ಅರ್ಧ ಡಜನ್ ಚಿತ್ರಗಳಿವೆ.

ತ್ರಿಷಾ ನಟನೆಯ ಸೂರ್ಯ 45 ಚಿತ್ರ ನಿರ್ಮಾಣ ಹಂತದಲ್ಲಿದೆ.  ನಟಿ ತ್ರಿಷಾ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ತೃಷಾ ಇನ್‌ಸ್ಟಾಗ್ರಾಂ ಮೂಲಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಮುದ್ದಿನ ಸಾಕು ನಾಯಿ ದಿಢೀರ್ ಮೃತಪಟ್ಟಿದೆ. ಈ ನೋವು ತೃಷಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತಿಲ್ಲ. 

Tap to resize

ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ತ್ರಿಷಾಗೆ ನಾಯಿಗಳೆಂದರೆ ಅಪಾರ ಪ್ರೀತಿ. ಹೀಗಾಗಿ ತಮ್ಮ ಮನೆಯಲ್ಲಿ ಹಲವಾರು ನಾಯಿಗಳನ್ನು ಸಾಕಿದ್ದಾರೆ. ಅದರಲ್ಲಿ ಅವರ ಅಚ್ಚುಮೆಚ್ಚಿನ ನಾಯಿ ಜಾರೋ. ಈ ನಾಯಿಯನ್ನು 2012 ರಿಂದ ಸಾಕುತ್ತಿದ್ದಾರೆ. ಜಾರೋವನ್ನು ತಮ್ಮ ಮಗನಂತೆ ತ್ರಿಷಾ ಬೆಳೆಸಿದ್ದಾರೆ. ಇಂದು(ಡಿ.25) ಬೆಳಿಗ್ಗೆ ತ್ರಿಷಾ ಅವರ ಜಾರೋ ನಾಯಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ.

ತ್ರಿಷಾ ಇನ್‌ಸ್ಟಾ ಪೋಸ್ಟ್

ಈ ಬಗ್ಗೆ ಭಾವುಕರಾಗಿ ಬರೆದಿರುವ ತ್ರಿಷಾ, ನನ್ನ ಮಗ ಜಾರೋ ಕ್ರಿಸ್‌ಮಸ್‌ ದಿನದಂದು ಬೆಳಿಗ್ಗೆ ಸಾವನ್ನಪ್ಪಿದೆ. ಈ ಅಗಲಿಕೆ ನನ್ನ ಜೀವನ ಅರ್ಥಹೀನವನ್ನಾಗಿ ಮಾಡಿದೆ ಎಂಬುದು ನನ್ನನ್ನು ಚೆನ್ನಾಗಿ ತಿಳಿದವರಿಗೆ ಗೊತ್ತು. ಈ ಆಘಾತದಿಂದ ಚೇತರಿಸಿಕೊಳ್ಳಲಾಗದೆ ನಾನು ಮತ್ತು ನನ್ನ ಕುಟುಂಬಸ್ಥರು ಕುಸಿದು ಹೋಗಿದ್ದೇವೆ. ಮತ್ತೆ ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಜಾರೋವನ್ನು ಸಮಾಧಿ ಮಾಡಿದಾಗ ತೆಗೆದ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ತ್ರಿಷಾ ಭಾವುಕ ಪೋಸ್ಟ್

ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಅಭಿಮಾನಿಗಳು ಚಿತ್ರರಂಗದ ಹಲವರು ತೃಷಾಗೆ ಸಾಂತ್ವನ ಹೇಳುತ್ತಿದ್ದಾರೆ.  ತಮಿಳು ಜೊತೆಗೆ ಮಲಯಾಳಂ, ತೆಲುಗು ಭಾಷೆಗಳಲ್ಲೂ ತ್ರಿಷಾ ಬ್ಯೂಸಿಯಾಗಿದ್ದಾರೆ.  ತೆಲುಗಿನಲ್ಲಿ ಚಿರಂಜೀವಿ ಜೊತೆ ವಿಶ್ವಂಭರ ಚಿತ್ರದಲ್ಲಿ ಹಾಗೂ ಮಲಯಾಳಂನಲ್ಲಿ ಟೊವಿನೊ ಥಾಮಸ್ ಜೊತೆ ಐಡೆಂಟಿಟಿ ಚಿತ್ರದಲ್ಲಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ದಕ್ ಲೈಫ್ ಚಿತ್ರದಲ್ಲಿ ಸಿಂಬುಗೆ ಜೋಡಿಯಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗಲಿದೆ.

Latest Videos

click me!