ನಿರ್ದೇಶಕ ಎ ವೆಂಕಟೇಶ್ ನಿರ್ದೇಶನದಲ್ಲಿ 2002ರಲ್ಲಿ ವಿಜಯ್ ನಟನೆಯ ಭಗವತಿ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಮುಖ್ಯಮಂತ್ರಿಗಳ ಕಾರು ಬರುವಾಗ, ಪ್ರಸವಕ್ಕಾಗಿ ಕಾಯುತ್ತಿದ್ದ ಮಹಿಳೆ ಬರುತ್ತಿದ್ದ ಆಟೋವನ್ನು ಪೊಲೀಸರನ್ನೂ ಮೀರಿ ವಿಜಯ್ ಎದುರಿನ ಆಸ್ಪತ್ರೆಗೆ ಕಳುಹಿಸುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಹತ್ತಿರದಲ್ಲೇ ರಜನಿಯ ಬಾಬಾ ಚಿತ್ರದ ಚಿತ್ರೀಕರಣವೂ ನಡೆಯುತ್ತಿತ್ತು. ಇದನ್ನು ತಿಳಿದ ವಿಜಯ್, ನಾನು ಹೋಗಿ ರಜನಿಯವರನ್ನು ಭೇಟಿ ಮಾಡಿ ಬರುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದಾರೆ. ಆದರೆ, ನಿರ್ದೇಶಕರು ಈ ದೃಶ್ಯ ಮುಗಿದ ನಂತರ ಬೇರೆ ಸ್ಥಳಕ್ಕೆ ಚಿತ್ರೀಕರಣ ಬದಲಾಗುತ್ತದೆ. ಆ ಸಮಯದಲ್ಲಿ ನೀವು ಹೋಗಿ ರಜನಿಯವರನ್ನು ಭೇಟಿ ಮಾಡಿ ಬನ್ನಿ ಎಂದು ನಿರ್ದೇಶಕರು ಹೇಳಿದ್ದಾರೆ.