2000 ಕೋಟಿ ಗಳಿಸಿದ ಆಮಿರ್ ಖಾನ್‌ 'ದಂಗಲ್' ಸೆಟ್‌ನಲ್ಲಿ ಹೇಗಿತ್ತು ಮಸ್ತಿ: ಇಲ್ಲಿದೆ 9 ಅಪರೂಪದ ಫೋಟೋಗಳು!

First Published | Dec 25, 2024, 12:24 PM IST

ಆಮಿರ್ ಖಾನ್ ಅಭಿನಯದ 'ದಂಗಲ್' ಚಿತ್ರದ 8 ವರ್ಷಗಳ ಸಂಭ್ರಮದಲ್ಲಿ ಸೆಟ್‌ನ ಕೆಲವು ಅಪರೂಪದ ಫೋಟೋಗಳು ಬಹಿರಂಗಗೊಂಡಿವೆ. ಚಿತ್ರೀಕರಣದ ವೇಳೆ ನಡೆದ ಮಸ್ತಿ ಮತ್ತು ಕಲಾವಿದರ ಖುಷಿಯ ಕ್ಷಣಗಳನ್ನು ಈ ಫೋಟೋಗಳಲ್ಲಿ ಕಾಣಬಹುದು.

ಆಮಿರ್ ಖಾನ್ ನಟನೆಯ 'ದಂಗಲ್' 23 ಡಿಸೆಂಬರ್ 2016 ರಂದು ಬಿಡುಗಡೆಯಾಗಿತ್ತು ಮತ್ತು ಈ ಚಿತ್ರವು ವಿಶ್ವಾದ್ಯಂತ 2000 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಕಂಡಿತು.

ಚಿತ್ರದಲ್ಲಿ ಆಮಿರ್ ಜೊತೆಗೆ ಫಾತಿಮಾ ಸನಾ ಶೇಕ್, ಸಾನ್ಯಾ ಮಲ್ಹೋತ್ರಾ, ಸಾಕ್ಷಿ ತನ್ವರ್ ಮತ್ತು ಅಪಾರ್ಶಕ್ತಿ ಖುರಾನಾ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳನ್ನು ವಹಿಸಿದ್ದರು.

Tap to resize

ಈ ಎಲ್ಲಾ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಮಿರ್ ಖಾನ್ ಪ್ರೊಡಕ್ಷನ್ಸ್‌ನ ಅಧಿಕೃತ ಪುಟದಿಂದ ಶೇರ್‌ ಮಾಡಿಕೊಳ್ಳಲಾಗಿದೆ.

23 ಡಿಸೆಂಬರ್‌ನಂದು 'ದಂಗಲ್' ಬಿಡುಗಡೆಯಾಗಿ 8 ವರ್ಷಗಳು ಪೂರ್ಣಗೊಂಡಿದ್ದು, ಪ್ರೊಡಕ್ಷನ್ ಹೌಸ್ ಆಮಿರ್ ಅಭಿಮಾನಿಗಳೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದೆ.

ನಿತೇಶ್ ತಿವಾರಿ ನಿರ್ದೇಶನದ 'ದಂಗಲ್' ಕುಸ್ತಿಪಟು ಮಹಾವೀರ್ ಫೋಗಟ್ ಅವರ ಜೀವನಚರಿತ್ರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸನ್ನು ನನಸಾಗಿಸಲು ತಮ್ಮ ಹೆಣ್ಣುಮಕ್ಕಳಾದ ಗೀತಾ ಮತ್ತು ಬಬಿತಾಳನ್ನು ಕುಸ್ತಿಪಟುಗಳನ್ನಾಗಿ ಮಾಡುತ್ತಾರೆ.

ಈ ಚಿತ್ರದ ಚಿತ್ರೀಕರಣ ಪಂಜಾಬ್ ಮತ್ತು ಹರಿಯಾಣದ ಗುಜ್ಜರ್‌ವಾಲ್, ನಾರಂಗ್‌ವಾಲ್, ಕಿಲಾ ರಾಯ್‌ಪುರ್, ಡಂಗೋ ಮತ್ತು ಲೀಲ್ ಮುಂತಾದ ಹಳ್ಳಿಗಳ ಜೊತೆಗೆ ಪುಣೆ ಮತ್ತು ದೆಹಲಿಯಲ್ಲೂ ನಡೆದಿತ್ತು.

ದಂಗಲ್ ಚಿತ್ರವು ಮೊದಲ ದಿನ 29.78 ಕೋಟಿ ರೂಪಾಯಿ ಗಳಿಸಿತ್ತು. ಭಾರತದಲ್ಲಿ ಒಟ್ಟು 387.39 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

ದಂಗಲ್‌ನ ಒಟ್ಟು ಗಳಿಕೆ 538.04 ಕೋಟಿ ರೂಪಾಯಿ. ಚೀನಾದಲ್ಲಿ ಬಿಡುಗಡೆಯಾದಾಗ ಅದು 1521 ಕೋಟಿ ರೂಪಾಯಿ ಗಳಿಸಿ, ವಿಶ್ವಾದ್ಯಂತ ಒಟ್ಟು 2059.04 ಕೋಟಿ ರೂಪಾಯಿ ಗಳಿಕೆ ಕಂಡಿತು.

'ದಂಗಲ್' ಭಾರತೀಯ ಸಿನಿಮಾದ ಅತಿ ಹೆಚ್ಚು ಗಳಿಕೆಯ ಚಿತ್ರ. ಕಳೆದ 8 ವರ್ಷಗಳಲ್ಲಿ ಯಾವ ಚಿತ್ರವೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

Latest Videos

click me!