ವಿಜಯ್ ಸಿಎಂ ಪ್ರಮಾಣವಚನಕ್ಕೆ ಪತ್ನಿ-ಮಕ್ಕಳು ಗೈರು, ನಟಿ ತ್ರಿಷಾ ಹಾಜರಿ! ಇದೀಗ ಶುರುವಾಯ್ತು ಹೊಸ ಸಂಕಷ್ಟ!

Published : May 10, 2026, 04:28 PM IST

ನಟ 'ದಳಪತಿ' ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈ ಸಮಾರಂಭಕ್ಕೆ ಅವರ ಕುಟುಂಬದ ಬದಲು ನಟಿ ತ್ರಿಷಾ ಕೃಷ್ಣನ್ ಹಾಜರಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.

PREV
17

ತಮಿಳು ಸಿನಿಮಾರಂಗದ 'ದಳಪತಿ' ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿ. ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅವರು ರಾಜ್ಯದ 13ನೇ ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದ್ರು. ಆದರೆ, ಎಲ್ಲರ ಕಣ್ಣು ಬಿದ್ದಿದ್ದು ಮಾತ್ರ ನಟಿ ತ್ರಿಷಾ ಕೃಷ್ಣನ್ ಮೇಲೆ.

27

ಸಿನಿಮಾರಂಗದಿಂದ ಬಂದಿದ್ದ ಕೆಲವೇ ಕೆಲವು ಗಣ್ಯರಲ್ಲಿ ತ್ರಿಷಾ ಕೂಡ ಒಬ್ಬರಾಗಿದ್ದರು. ಅವರಿಗೆ ವೇದಿಕೆ ಮುಂಭಾಗದಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿಜಯ್ ಅವರ ತಾಯಿ, ತ್ರಿಷಾರನ್ನು ಅಪ್ಪಿಕೊಂಡು ಸ್ವಾಗತಿಸಿದ ವಿಡಿಯೋ ಕೂಡ ಹೊರಬಿದ್ದಿದೆ.

37

ವಿಜಯ್ ಅಭಿಮಾನಿಗಳು ತ್ರಿಷಾರನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದರು. ತ್ರಿಷಾ ತಮ್ಮ ತಾಯಿ ಉಮಾ ಕೃಷ್ಣನ್ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ವಿಜಯ್ ಅವರ ತಾಯಿಯ ಸಹೋದರರ ಮಕ್ಕಳು ತ್ರಿಷಾರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ಈ ಬೆಳವಣಿಗೆಯು, ವಿಜಯ್ ಮತ್ತು ತ್ರಿಷಾ ನಡುವೆ ಸಂಬಂಧವಿದೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

47

ಇದೇ ಹೊತ್ತಲ್ಲಿ, ಪ್ರಮಾಣವಚನ ಸಮಾರಂಭಕ್ಕೆ ತ್ರಿಷಾ ಬಂದಿದ್ದನ್ನು ಪ್ರಶ್ನಿಸಿ ಮತ್ತು ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಪೋಸ್ಟ್‌ಗಳು ಮತ್ತು ಕಮೆಂಟ್‌ಗಳು ಹರಿದಾಡುತ್ತಿವೆ. 'ನಿಮ್ಮ ಮಕ್ಕಳು ಎಲ್ಲಿ?' ಎಂದು ಹಲವರು ವಿಜಯ್ ಅವರನ್ನು ಪ್ರಶ್ನಿಸುತ್ತಿದ್ದಾರೆ.

57

‘ಪತ್ನಿ ಜೊತೆ ಏನೋ ಸಮಸ್ಯೆ ಇರಬಹುದು. ಆದರೆ, ಮಕ್ಕಳು ಬರದೇ ಇರೋ ಕಾರ್ಯಕ್ರಮಕ್ಕೆ ಇವರನ್ನು (ತ್ರಿಷಾ) ಕರ್ಕೊಂಡು ಬಂದಿದ್ದು ತುಂಬಾನೇ ತಪ್ಪು,’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬಹಳ ಕಟುವಾದ ಭಾಷೆಯಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

67

‘ಆತನ ಇಬ್ಬರು ಮಕ್ಕಳನ್ನು ಹೆತ್ತು, ಬೆಳೆಸಿ, ಓದಿಸಿ, ಮನೆ-ಮಂದಿಯನ್ನ ನೋಡಿಕೊಂಡು, ಆತನ ಬೆಳವಣಿಗೆಗೆ ಮನೆಯಲ್ಲೇ ಇದ್ದು ಬೆಂಬಲಿಸಿದ ಹೆಂಡತಿಗೆ ಬೆಲೆಯೇ ಇಲ್ವಾ? ಕೊನೆಗೆ ಕರಿಬೇವು ತರ ಬಿಸಾಕಿದ್ರು. ಚಿತ್ರರಂಗದಲ್ಲಿ ಅವಮಾನವಾದಾಗ ಹೆಂಡತಿ-ಮಕ್ಕಳೇ ಜೊತೆಗಿದ್ದರು. ಈಗ ಯಶಸ್ಸು ಬಂದಾಗ ಅವರನ್ನೇ ಮರೆತಿದ್ದು ಸರಿಯಲ್ಲ. ತ್ರಿಷಾ ಈ ಕಾರ್ಯಕ್ರಮಕ್ಕೆ ಬರದೇ ಇರಬಹುದಿತ್ತು ಅಲ್ವಾ?’ ಎಂದೂ ಸಹ ಕಮೆಂಟ್‌ಗಳು ಬಂದಿವೆ.

77

ಇದೆಲ್ಲದರ ನಡುವೆ, ಕೆಲವರು ವಿಜಯ್‌ರನ್ನು ಬೆಂಬಲಿಸಿದ್ದಾರೆ. 'ಇದು ಅವರ ವೈಯಕ್ತಿಕ ವಿಚಾರ, ಅದರಲ್ಲಿ ಬೇರೆಯವರು ಯಾಕೆ ತಲೆಹಾಕಬೇಕು?' ಅಂತ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಕಾರ್ಯಕ್ರಮಕ್ಕೆ ಬಾರದ ವಿಜಯ್ ಮಗ ಜೈಸನ್ ಸಂಜಯ್ ನಿರ್ಧಾರವನ್ನು ಹೊಗಳಿದ್ದಾರೆ. ‘ತಾಯಿಯ ಪರ ನಿಲ್ಲುವ ಮಗನಿದ್ದಾಗ, ಆ ತಾಯಿ ಅಲ್ಲಿ ಸುರಕ್ಷಿತವಾಗಿರುತ್ತಾಳೆ’ ಎಂಬಂತಹ ಕಮೆಂಟ್‌ಗಳೂ ಸಹ ಕಾಣಸಿಗುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories