* 1983 ರಲ್ಲಿ ಬಿಡುಗಡೆಯಾದ ಸಾಗರ ಸಂಗಮಂ ಎಂಬ ತೆಲುಗು ಚಲನಚಿತ್ರವು ಶಾಸ್ತ್ರೀಯ ಸಂಗೀತದಲ್ಲಿ ರಚನೆಯಾಗಿತ್ತು. ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಇಳಯರಾಜ ಮತ್ತು ಎಸ್ಪಿಬಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತು.
* ಅಷ್ಟೇ ಅಲ್ಲದೆ, 1988 ರಲ್ಲಿ ಬಿಡುಗಡೆಯಾದ ರುದ್ರವೀಣಾ ಚಿತ್ರಕ್ಕೂ ಇಳಯರಾಜ ಮತ್ತು ಎಸ್ಪಿಬಿ ಜೊತೆಯಾಗಿ ಸಂಗೀತ ಸಂಯೋಜಿಸಿದ್ದರು. ಈ ಚಿತ್ರಕ್ಕಾಗಿಯೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತು.
* ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ.