ಅಲ್ಲು ಶಿರೀಷ್ ಬಾಲಯ್ಯನನ್ನು ಕೇಳಿದ್ದು ಹೀಗೆ - ನೀವು ನಟಿಸಿರುವ ಸಮರಸಿಂಹಾರೆಡ್ಡಿ, ನರಸಿಂಹನಾಯುಡು, ಲಕ್ಷ್ಮೀ ನರಸಿಂಹ, ಸಿಂಹ, ಜೈ ಸಿಂಹ, ವೀರ ಸಿಂಹಾರೆಡ್ಡಿ.. ಹೀಗೆ ಸಿಂಹ ಪದ ಇರುವ ಹಲವು ಚಿತ್ರಗಳಿವೆ. ಇವುಗಳನ್ನು ಬಿಟ್ಟು ಇನ್ನೊಂದು ಸಿಂಹ ಚಿತ್ರ ಮಾಡಿದ್ದೀರಿ. ಅದು ಯಾವುದು? ಬಾಲಯ್ಯ ತಕ್ಷಣ ಬೊಬ್ಬಿಲಿ ಸಿಂಹ ಅಂದ್ರು. ಬೊಬ್ಬಿಲಿ ಸಿಂಹ ಬಿಟ್ಟು ಇನ್ನೊಂದು ಇದೆ ಅಂದ ಅಲ್ಲು ಶಿರೀಷ್. ಬಾಲಯ್ಯ ಅಲ್ಲು ಶಿರೀಷ್ ಗೆ ಒಂದು ತಿರುಗೇಟು ಕೊಟ್ಟರು.