ಕಣ್ಣು ಮಿಟುಕಿಸದಂತೆ ನೋಡಿಸಿಕೊಂಡು ಹೋಗೋ ಟಾಪ್‌ 10 ಬೆಸ್ಟ್‌ ವೆಬ್‌ ಸಿರೀಸ್‌ಗಳಿವು!

ಭಾರತದಲ್ಲಿ ಈಗ ವೆಬ್‌ಸಿರೀಸ್‌ಗಳದ್ದೇ ಕಾಲ. ಈ ಟಾಪ್‌ 10 ವೆಬ್‌ ಸಿರೀಸ್‌ಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಹಾಗಾದರೆ ಅವು ಯಾವುವು? 

top 10 best indian mystery thriller web series ott platform

ಡಾರ್ಕ್‌ ಮಿಸ್ಟರಿ, ಒಳ್ಳೆಯ ಟ್ವಿಸ್ಟ್‌, ತನಿಖಾ ಪ್ರಕರಣ ಇರುವ ಸಿನಿಮಾಗಳನ್ನು ನೋಡಲು ಇಷ್ಟಪಡ್ತೀರಿ ಎಂದಾದರೆ ನೀವು ಈ ಸಿನಿಮಾಗಳನ್ನು ನೋಡಲೇಬೇಕು. ಈ ವೆಬ್‌ ಸಿರೀಸ್‌ಗಳು ನಿಜಕ್ಕೂ ಸಿಕ್ಕಾಪಟ್ಟೆ ನಿಮ್ಮ ನಿದ್ದೆಗೆಡಿಸೋದಂತೂ ಹೌದು. ಸೈಕಲಾಜಿಕಲ್‌ ಥ್ರಿಲ್ಲರ್‌ಗಳಿಂದ ಕ್ರೈಂ ಡ್ರಾಮಾವರೆಗೆ ಈ ಥ್ರಿಲ್ಲರ್‌ ವೆಬ್‌ಸಿರೀಸ್‌ಗಳು ಸಾಕಷ್ಟು ಜನರಿಗೆ ಇಷ್ಟ ಆಗಲಿವೆ. 

top 10 best indian mystery thriller web series ott platform
ಪಾತಾಳ್‌ ಲೋಕ್‌ ( ಪ್ರೈಂ ವಿಡಿಯೋ )

ಓರ್ವ ಪೊಲೀಸ್‌ ಅಧಿಕಾರಿಗೆ ಸಾಮಾನ್ಯ ಪ್ರಕರಣದ ಬದಲು ಹೈ ಪ್ರೊಫೈಲ್‌ ಕೇಸ್‌ ನೀಡಲಾಗುವುದು. ಮಾಧ್ಯಮ, ಪವರ್‌, ಭ್ರಷ್ಟಾಚಾರಗಳ ಒತ್ತಡದ ಮಧ್ಯೆ ಆ ಅಧಿಕಾರಿ ಏನು ಮಾಡ್ತಾನೆ ಎನ್ನೋದು ಈ ಸಿರೀಸ್‌ನಲ್ಲಿದೆ. ಈ ಸಿರೀಸ್‌ ಮುಕ್ತಾಯ ಆದ್ಮೇಲೂ ನಮ್ಮನ್ನು ಕಾಡುತ್ತದೆ.


ಅಫಾರಾನ್‌ ( ಜೀ5 )

ಪೊಲೀಸ್ ಅಧಿಕಾರಿಯಿಂದಲೇ ಓರ್ವ ವ್ಯಕಿ ಅಪರಾಧಿಯಾಗಿ ಬದಲಾಗ್ತಾನೆ. ಕಿಡ್ನ್ಯಾಪ್‌ ಕೇಸ್ ನಿಯಂತ್ರಣ ತಪ್ಪಿ ಸುಳ್ಳು, ನಿಗೂಢತೆ, ದ್ರೋಹದ ಜಾಲದಲ್ಲಿ ಸಿಲುಕಿಕೊಳ್ಳುತ್ತಾನೆ. ಈ ನಿಗೂಢ ಥ್ರಿಲ್ಲರ್ ಅನಿರೀಕ್ಷಿತ ತಿರುವುಗಳಿಂದ ತುಂಬಿದೆ.

ಅಸುರ್‌ ( ಜಿಯೋ ಹಾಟ್‌ಸ್ಟಾರ್‌ )

‌ಪುರಾಣ ಹಾಗೂ ಕ್ರೈಂ ಮಿಶ್ರಿತ ಸೈಕಲಾಜಿಕಲ್‌ ಮಿಸ್ಟರಿ ಥ್ರಿಲ್ಲರ್. ನ್ಯಾಯ ವಿಜ್ಞಾನ ಅಧಿಕಾರಿತು ಸಿಬಿಐಗೆ ಮರಳುತ್ತಾನೆ. ತಾನು ಹಿಂದು ಪುರಾಣದ ಅಸುರ ಎಂದು ನಂಬಿರೋ ವ್ಯಕ್ತಿ ಸೀರಿಯಲ್‌ ಕಿಲ್ಲರ್‌ ಆಗಿರುತ್ತಾನೆ. ಸೈಕಲಾಜಿಕಲ್‌ ಮೈಂಡ್‌ ಗೇಮ್ಸ್‌, ಶಾಕಿಂಗ್‌ ಟ್ವಿಸ್ಟ್‌ಗಳ ಜೊತೆಯಲ್ಲಿ ಈ ಥ್ರಿಲ್ಲರ್‌ ನಿಜಕ್ಕೂ ಕುತೂಹಲದಿಂದ ಕೂಡಿದೆ.

ಕ್ಯಾಂಡಿ ( ಜಿಯೋ ಹಾಟ್‌ಸ್ಟಾರ್‌ )

ಶಾಲಾ ವಿದ್ಯಾರ್ಥಿಯೊಬ್ಬನ ಕ್ರೂರ ಹತ್ಯೆಯು ಶಿಕ್ಷಕ ಜಯಂತ್ ಪರೇಖ್, ಪೊಲೀಸ್ ಅಧಿಕಾರಿ ರತ್ನಾ ಸಂಖಾವರ್ ಅವರನ್ನು ಸಮಸ್ಯೆಗೆ ಈಡು ಮಾಡುವುದು. ರೇವ್ ಪಾರ್ಟಿ, ಕೋಲ್ಡ್ ಕೇಸ್‌ಗಳು, ಕಾಡಿನಲ್ಲಿ ರಾಕ್ಷಸ, ಭ್ರಮೆ ಹುಟ್ಟಿಸುವ ಕ್ಯಾಂಡಿ ಸೇರಿದಂತೆ ದುಷ್ಟ ರಹಸ್ಯಗಳ ಜಾಲ ಈ ಸಿನಿಮಾದಲ್ಲಿದೆ. 

ಸ್ಯಾಕ್ರೆಡ್‌ ಗೇಮ್ಸ್‌ (ನೆಟ್‌ಫ್ಲಿಕ್ಸ್‌ )

ದರೋಡೆಕೋರನೊಬ್ಬ ಮಾಡಿದ ಒಂದು ನಿಗೂಢ ಫೋನ್ ಕಾಲ್ ವಿಪತ್ತನ್ನು ತಡೆಗಟ್ಟಲು ಸಮಯದ ವಿರುದ್ಧದ ಓಟ ಶುರು ಮಾಡುವುದು. ಸಂಪೂರ್ಣ ನಿಗೂಢತೆ ತುಂಬಿದ ಥ್ರಿಲ್ಲರ್ ನಿಮ್ಮನ್ನು ಮುಂಬೈ ನಗರಿಯ ಒಳಭಾಗಕ್ಕೆ ಕರೆದೊಯ್ಯುತ್ತದೆ. ರಹಸ್ಯಗಳು, ಗುಪ್ತ ವಿಷಯಗಳಿಂದ ತುಂಬಿರುತ್ತದೆ.
 

ಕೊಹ್ರಾ ( ನೆಟ್‌ಫ್ಲಿಕ್ಸ್‌ )

ಮದುವೆಗೆ ಸ್ವಲ್ಪ ದಿನಗಳ ಮೊದಲು ಅನಿವಾಸಿ ಭಾರತೀಯ ಹುಡುಗ ಕೊಲೆಯಾಗಿ ಪತ್ತೆಯಾಗ್ತಾನೆ. ನಿಗೂಢತೆ, ವಂಚನೆ, ಆಳವಾಗಿ ಬೇರೂರಿರುವ ದ್ವೇಷಗಳ ಜಾಲವನ್ನು ಪಂಜಾಬ್‌ನ ಇಬ್ಬರು ಪೊಲೀಸರು ಬಿಡಿಸಬೇಕು. ನಿಧಾನವಾಗಿ ಸಾಗುವ ಥ್ರಿಲ್ಲರ್ ಕಾಡುತ್ತದೆ, ಆಶ್ಚರ್ಯಳೇ ತುಂಬುವ ಹಾಗೆ ಮಾಡುತ್ತದೆ.

ದೆಹಲಿ ಕ್ರೈಂ ( ನೆಟ್‌ಫ್ಲಿಕ್ಸ್‌ )

ನಿಜ ಜೀವನದ ಪ್ರಕರಣಗಳನ್ನು ಆಧರಿಸಿದ ಸಿರೀಸ್‌ ಇದು. ದೆಹಲಿ ಪೊಲೀಸರು ಹೈ ಪ್ರೊಫೈಲ್ ಪ್ರಕರಣಗಳನ್ನು ಭೇದಿಸಲು ಟೈಮ್ ವಿರುದ್ಧ ಓಡುತ್ತಾರೆ. ವಾಸ್ತವಿಕ, ತಲ್ಲೀನ ಮಾಡುವಂತಹ, ಆಳವಾದ ಭಾವನಾತ್ಮಕ ವಿಷಯಗಳನ್ನು ಈ ತನಿಖಾ ನಿಗೂಢ ಥ್ರಿಲ್ಲರ್ ಹೊಂದಿದೆ.

Murder in Mahim ( ಜಿಯೋ ಸಿನಿಮಾ )

ಮಾಹಿಮ್ ರೈಲ್ವೆ ನಿಲ್ದಾಣದಲ್ಲಿ ನಡೆದ ಒಂದು ಭೀಕರ ಕೊಲೆಯ ತನಿಖೆಯು, ಒಬ್ಬ ಹಳೆಯ ಪತ್ರಕರ್ತನಿಗೆ ತನ್ನ ಮಗನೇ ಶಂಕಿತನಾಗಿರಬಹುದು ಎಂದು ಗೊತ್ತಾಗುತ್ತದೆ. ಅದು ಹೆಚ್ಚಿನ ಜವಾಬ್ದಾರಿಯ ತನಿಖೆಯಾಗಿ ಬದಲಾಗುತ್ತದೆ. ಈ ಥ್ರಿಲ್ಲರ್ ಅಪರಾಧ, ಕೌಟುಂಬಿಕ ನಾಟಕವನ್ನು ಸಂಪೂರ್ಣವಾಗಿ ಮಿಶ್ರಣ ಮಾಡುತ್ತದೆ, ಕೊನೆಯ ದೃಶ್ಯದವರೆಗೂ ನೋಡುವಂತೆ ವೀಕ್ಷಕರನ್ನು ಸೆರೆಹಿಡಿಯುತ್ತದೆ.

ದಹಾಡ್‌ ( ಪ್ರೈಂ ವಿಡಿಯೋ )

ಒಬ್ಬ ಪೊಲೀಸ್ ಪೇದೆಯು ರಾಜಸ್ಥಾನದಲ್ಲಿ ಹಲವಾರು ಮಹಿಳೆಯರ ಕಣ್ಮರೆಗೆ ಕಾರಣವಾದ ಭಯಾನಕ ರಹಸ್ಯವನ್ನು ಬಯಲು ಮಾಡುತ್ತಾನೆ. ಆಗ ಆಘಾತಕಾರಿ ಸತ್ಯವು ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

Criminal Justice (JioHotstar)

ಒಂದು ರಾತ್ರಿಯ ರೋಮಾಂಚಕಾರಿ ಘಟನೆಯು ಆಘಾತಕಾರಿ ಕೊಲೆಯ ರಹಸ್ಯವಾಗುತ್ತದೆ. ಆದಿತ್ಯ ಎದ್ದಾಗ ರಕ್ತ ಕಾಣುವುದು, ಆದರೆ ಅವನಿಗೆ ಆ ಭೀಕರ ಅಪರಾಧದ ನೆನಪು ಇರೋದಿಲ್ಲ. ಅವನ ವಿರುದ್ಧ ಸಾಕ್ಷ್ಯಗಳು ಸಂಗ್ರಹವಾಗುತ್ತದೆ, ಸತ್ಯವು ಹೂತುಹೋಗುತ್ತದೆ. ಅವನು ತಪ್ಪಿತಸ್ಥನೇ? ಅಥವಾ ಅವನನ್ನು ಸುಳ್ಳು ಆರೋಪಿಸಲಾಗಿದೆಯೇ? ಈ ಪ್ರಶ್ನೆ ಕೊನೆತನಕ ಸಿರೀಸ್‌ ನೋಡುವಂತೆ ಮಾಡುವುದು. 
 

Latest Videos

vuukle one pixel image
click me!