ಸೂಪರ್ಸ್ಟಾರ್ ಮಹೇಶ್ ಬಾಬು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಡಿಸಾಸ್ಟರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ ಒಂದು ಡಿಸಾಸ್ಟರ್ ಸಿನಿಮಾದಲ್ಲಿ ನಟಿಸಿದ್ದು ಮಾತ್ರ ತಮ್ಮ ವೃತ್ತಿಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಅಂತ ತಿಳಿಸಿದ್ದಾರೆ. ಅಂಥ ಸಿನಿಮಾ ಇನ್ನು ಮುಂದೆ ಮಾಡಲ್ಲ ಅಂತಾನೂ ಅವರು ತೀರ್ಮಾನ ಮಾಡಿದ್ದಾರೆ. ಹಾಗಿದ್ರೆ ತಮ್ಮ ಜೀವನದ ಡಿಸಾಸ್ಟರ್ ಎಂದು ಮಹೇಶ್ ಹೇಳಿದ್ದು ಯಾವ ಸಿನಿಮಾ ಬಗ್ಗೆ ಅಂತ ಈಗ ತಿಳಿದುಕೊಳ್ಳೋಣ.
ಒಂದು ಸಂದರ್ಶನದಲ್ಲಿ ಮಹೇಶ್ ಬಾಬು ಮಾತನಾಡುತ್ತಾ, ಸಿನಿಮಾ ಚೆನ್ನಾಗಿದ್ರೆ ಪ್ರೇಕ್ಷಕರಿಂದ ಬೆಂಬಲ ಸಿಗುತ್ತದೆ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರೇ ಆ ಸಿನಿಮಾನ ಬೇಗ ಮುಗಿಸಿಬಿಡ್ತಾರೆ. ಈ ಎರಡಕ್ಕೂ ಸಿದ್ಧರಾಗಿರಬೇಕು. ಬ್ರಹ್ಮೋತ್ಸವಂ ತರಹದ ಸಿನಿಮಾಗಳನ್ನು ಮಾಡಿದರೆ ನನ್ನ ಅಭಿಮಾನಿಗಳಿಗೆ ನಾನು ಉತ್ತರ ಕೊಡೋಕೆ ಆಗಲ್ಲ. ಯಾಕಂದ್ರೆ ಅದು ಸಂಪೂರ್ಣವಾಗಿ ಕೌಟುಂಬಿಕ ಚಿತ್ರ. ಅದರಲ್ಲಿ ಏನೂ ಸರಿಯಾಗಿ ವರ್ಕೌಟ್ ಆಗಲಿಲ್ಲ ಎಂದು ಮಹೇಶ್ ಬಾಬು ಹೇಳಿದ್ದಾರೆ.
ಆ ಸ್ಕ್ರಿಪ್ಟ್ನ ಆಯ್ಕೆ ಮಾಡಿದ್ದೇ ನಾನು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಅಂತ ಮಹೇಶ್ ಬಾಬು ಹೇಳಿದ್ದಾರೆ. ಆ ಕಥೆಯನ್ನ ಯಾಕೆ ಆಯ್ಕೆ ಮಾಡಿಕೊಂಡೆ ಅಂತ ಫೀಲ್ ಆಯ್ತು. ಇನ್ಮುಂದೆ ಅಂಥ ತಪ್ಪುಗಳನ್ನ ಪುನರಾವರ್ತನೆ ಮಾಡಲ್ಲ ಅಂತ ಮಹೇಶ್ ಬಾಬು ತಿಳಿಸಿದ್ದಾರೆ. ಬ್ರಹ್ಮೋತ್ಸವಂ ನನ್ನ ಅಭಿಮಾನಿಗಳಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಇಷ್ಟವಾಗಲಿಲ್ಲ.
ವಿಚಿತ್ರವೆಂದರೆ ನನಗೆ ಫ್ಲಾಪ್ ಸಿನಿಮಾ ಬಂದ ಪ್ರತಿ ಬಾರಿ ನನ್ನ ಮಾರ್ಕೆಟ್ ಹೆಚ್ಚಾಗ್ತಾನೆ ಇತ್ತು. ಬ್ರಹ್ಮೋತ್ಸವಂ ನಂತರ ಸ್ಪೈಡರ್ ಪ್ರೀ ರಿಲೀಸ್ ಬಿಸಿನೆಸ್ ತಮ್ಮ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಅಂತ ಮಹೇಶ್ ತಿಳಿಸಿದ್ದಾರೆ. ಕೆಲವು ಕಥೆಗಳು ನನಗೆ ಇಷ್ಟವಾದರೂ ಅಭಿಮಾನಿಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಮಾಡೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ.
ಇದೆಲ್ಲದರ ನಡುವೆ ಶೀಘ್ರದಲ್ಲೇ ಮಹೇಶ್ ಬಾಬು ರಾಜಮೌಳಿ ನಿರ್ದೇಶನದಲ್ಲಿ ತಮ್ಮ ವೃತ್ತಿಜೀವನದಲ್ಲೇ ಬೃಹತ್ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಜನವರಿಯಲ್ಲಿ ಈ ಚಿತ್ರ ಆರಂಭವಾಗುತ್ತೆ ಅಂತ ವರದಿಗಳಿವೆ.