ಒಂದು ಟಾಕ್ ಶೋನಲ್ಲಿ ಅನುಷ್ಕಾ ಭಾಗವಹಿಸಿದ್ದರು. ನಿಮ್ಮ ಬಗ್ಗೆ ಬಂದ ಅತಿ ದೊಡ್ಡ ಗಾಸಿಪ್ ಏನು ಅಂತ ನಿರೂಪಕಿ ಜಯಪ್ರದ ಕೇಳಿದರು. ಅದಕ್ಕೆ ಅನುಷ್ಕಾ ಉತ್ತರಿಸಿದರು. ನನಗೆ ಐದು ಸಲ ಮದುವೆಯಾಯ್ತು ಅಂದ್ರು. ಯಾರ ಜೊತೆ ಅಂತ ಜಯಪ್ರದ ಕೇಳಿದ್ರು. ನಾನು ಜೊತೆ ನಟಿಸಿದ ನಟರ ಜೊತೆ ಅಂದ್ರು ಅನುಷ್ಕಾ. ಸುಮಂತ್, ಗೋಪಿಚಂದ್, ಪ್ರಭಾಸ್, ಸೆಂಥಿಲ್ ಜೊತೆ ನನ್ನ ಮದುವೆ ಅಂತ ಸುದ್ದಿ ಬಂತು ಅಂತ ಹೇಳಿದ್ರು.