1080 ಎಕರೆ ಭೂಮಿಯನ್ನುಉದ್ಯಾನವನ ಮಾಡಲು ದತ್ತು ತೆಗೆದುಕೊಂಡು Nagarjuna!

First Published | Feb 17, 2022, 5:26 PM IST

ತೆಲಂಗಾಣದ ಮೆದಾಚಲ್ ಮೆಡ್‌ಚಲ್‌ನಲ್ಲಿ 1080 ಎಕರೆ ಅರಣ್ಯ ಭೂಮಿಯನ್ನು ದತ್ತು ಪಡೆದುಕೊಂಡು, ಉದ್ಯಾನವನವನ್ನಾಗಿ ಮಾಡಲು ಭೂಮಿ ಪೂಜೆ ನೆರವೇರಿಸಿದ ತೆಲಗು ನಟ ನಾಗಾರ್ಜುನ ಅಕ್ಕಿನೇನಿ.
 

ತೆಲುಗು ಚಿತ್ರರಂಗದ ಸ್ಮಾರ್ಟ್ ಮ್ಯಾನ್ ಅಕ್ಕಿನೇನಿ ನಾಗಾರ್ಜುನ್‌ ತೆಲಂಗಾಣದ ಮೆದಾಚಲ್ ಮೆಡ್‌ಚಲ್- ಮಲ್ಕಾಜಗಿರಿ ಜಿಲ್ಲೆಯಲ್ಲಿ ಭೂಮಿ ಖರೀದಿಸಿದ್ದಾರೆ. 

ಈ ಪ್ರದೇಶದಲ್ಲಿ 1080 ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದುಕೊಂಡು, ನಗರ ಉದ್ಯಾನವನ ನಿರ್ಮಿಸಲು ಯೋಜನೆ ಮಾಡಿದ್ದಾರೆ. ಇಂದು ಈ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮವವನ್ನು ಹಮ್ಮಿಕೊಂಡಿದ್ದರು. 

Tap to resize

ಬಿಗ್ ಬಾಸ್‌ (Bigg Boss) ರಿಯಾಲಿಟಿ ಶೋ (Reality Show) ನಿರೂಪಣೆ ಮಾಡುವಾಗ ಅರಣ್ಯ ಭೂಮಿಯನ್ನು ಖರೀದಿಸುವುದಾಗಿ ನಾಗಾರ್ಜುನ ಹೇಳಿದ್ದರು. ಹೀಗಾಗಿ ಪ್ರತಿಯೊಬ್ಬರೂ ಆ ಪ್ರದೇಶದಲ್ಲಿ ಮೂರು ಸಸಿಯನ್ನು ನೆಟ್ಟು ಸೂಕ್ತವಾದ ವಿದಾಯ ಹೇಳುವಂತೆ ಮನವಿ ಮಾಡಿಕೊಂಡಿದ್ದರು.

ಮುಖ್ಯಮಂತ್ರಿಗಳಿಗೆ ಶುಭ ಹಾರೈಸುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರ ಪತ್ನಿ ಅಮಲಾ ಮತ್ತು ಪುತ್ರ ಸಾಥ್ ನೀಡಿದ್ದರು.

ಹುಟ್ಟುಹಬ್ಬದ ಶುಭಾಶಯಗಳು ಮುಖ್ಯಮಂತ್ರಿ ಕೆಸಿಆರ್‌ ಗಾರು. ಈ ಸಮಯಲ್ಲಿ ನಾನು ಎಎನ್‌ಆರ್‌ ನಗರ ಅರಣ್ಯ ಉದ್ಯಾನವನ ನಿರ್ಮಿಸುತ್ತಿದ್ದು, ಜಿಂಗಿಚೆರ್ಲಾ ಅರಣ್ಯ ಪ್ರದೇಶ ದತ್ತು ಪಡೆದುಕೊಂಡಿರುವೆ. ಇಂದು ನಡೆದ ಅಡಿಗಲ್ಲು ಕಾರ್ಯಕ್ರಮದಲ್ಲಿ ಅಮಲಾ (Amala) ಮತ್ತು ಪುತ್ರ ನಾಗ ಚೈತನ್ಯ (Naga Chaitanya) ಭಾಗಿಯಾಗಿದ್ದು ಎಂದು ನಾಗಾರ್ಜುನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಗ್ರೀನ್ ಇಂಡಿಯಾ ಜಾಲೆಂಜ್‌ (Green India Challenge) ಭಾಗವಾಗಿ ನಟ ನಾಗಾರ್ಜುನ್ ಮತ್ತು ಚೈತನ್ಯಾ ಮತ್ತಿತರರು ಸಸಿಗಳನ್ನು ನೆಟ್ಟು ನೀರು ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Latest Videos

click me!