ತಂದೆ ಪರವಾಗಿ ನಿಂತು ಪರೋಕ್ಷವಾಗಿ ಚಿರಂಜೀವಿಯನ್ನು ದೂರಿದ ವಿಷ್ಣು ಮಂಚು

Suvarna News   | Asianet News
Published : Feb 17, 2022, 05:10 PM ISTUpdated : Feb 17, 2022, 05:11 PM IST

ಆಂಧ್ರ ಮುಖ್ಯಮಂತ್ರಿ ಜಗನ್‌ ಅವರನ್ನು ಭೇಟಿ ಮಾಡಿದ ಚಿತ್ರರಂಗದ ಬಗ್ಗೆ ಚರ್ಚೆ ಮಾಡಿದ MAA ಅಧ್ಯಕ್ಷ.   

PREV
18
ತಂದೆ ಪರವಾಗಿ ನಿಂತು ಪರೋಕ್ಷವಾಗಿ ಚಿರಂಜೀವಿಯನ್ನು ದೂರಿದ ವಿಷ್ಣು ಮಂಚು

MAA ಅಧ್ಯಕ್ಷ ವಿಷ್ಣು ಮಂಚು ಕೆಲವು ದಿನಗಳ ಹಿಂದೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ (Jagan Mohan Reddy) ಅವರನ್ನು ಭೇಟಿ ಮಾಡಿ, ಚಿತ್ರರಂಗದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿ

28

ಮುಖ್ಯಮಂತ್ರಿಗಳ (Chief Minister of Andhra Pradesh) ಜೊತೆ ಮಾತುಕಥೆ ನಡೆದ ಬಳಿಕ ಮಾಧ್ಯಮಗಳಲ್ಲಿ (Media) ಮಾತನಾಡಿದ್ದಾರೆ. ಈ ವೇಳೆ ಪರೋಕ್ಷವಾಗಿ ತನ್ನ ತಂದೆ ವಿರುದ್ಧ ನಿಂತಿರುವವರ ಬಗ್ಗೆ ಮಾತನಾಡಿದ್ದಾರೆ.

38

'ನಮ್ಮ ತೆಲುಗು ಚಿತ್ರರಂಗದಲ್ಲಿರುವ (Tollywood) ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿರುವೆ. ಇದರ ಬಗ್ಗೆ ನಾನು ಕೆಲವು ದಿನಗಳ ನಂತರ ಅಪ್ಡೇಟ್ ಮಾಡುವೆ,' ಎಂದು ವಿಷ್ಣು ಹೇಳಿದ್ದಾರೆ.

48

'ಆಂಧ್ರ ಪ್ರದೇಶ ಸರ್ಕಾರ ಇತ್ತೀಚಿಗೆ ನಡೆದ ಸಭೆಗೆ ನನ್ನ ತಂದೆಯನ್ನು ಅಹ್ವಾನಿಸಿದ್ದಾರೆ. ಆದರೆ ಕೆಲವು ಆ ಪತ್ರಿಕೆ ನಮಗೆ ತಲುಪದಂತೆ ನೋಡಿಕೊಂಡಿದ್ದಾರೆ,' ಎಂದು ವಿಷ್ಣು ಮಾತನಾಡಿದ್ದಾರೆ.

58

'ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕೆಲವೊಂದು ಕಾಣದ ಕೈಗಳ (Vested Interest) ಹೆಸರನ್ನು ಶೀಘ್ರದಲ್ಲಿಯೇ ರಿವೀಲ್ ಮಾಡುವೆ,' ಎಂದಿದ್ದಾರೆ.. 

68

'ನನಗೆ ಜಗನ್ ಅವರ ಸಪೋರ್ಟ್‌ ಎಂದಿಗೂ ಇರುತ್ತದೆ. ಅವರು ಮತ್ತು ಜನರ ಸಪೋರ್ಟ್‌ ಇಲ್ಲದೆ ನಾನು ಹೇಗೆ MAA ಅಧ್ಯಕ್ಷನಾಗಲು ಸಾಧ್ಯ? ನನ್ನ ವಿರುದ್ಧ ಮಾತನಾಡಿದವರ ಬಗ್ಗೆ ಹೇಳಿರುವ ನನ್ನ ಜೊತೆಗಿರುವವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ,' ಎಂದು ವಿಷ್ಣು ಹೇಳಿದ್ದಾರೆ.

78

ಅಧ್ಯಕ್ಷನಾದ ಬಳಿ ವಿಷ್ಣು ಮಾತನಾಡುವ ಶೈಲಿ ಬದಲಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಸಮ ನಿರ್ಧಾರ ತೆಗೆದುಕೊಳ್ಳಬೇಕಾದ ನಂತರ ಕುಟುಂಬದ ಬಗ್ಗೆ ಯೋಚಿಸಿ, ಪರೋಕ್ಷವಾಗಿ ಮಾತನಾಡಿ ದ್ವೇಷ ಕಟ್ಟಿ ಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ.

88

ಮಾಧ್ಯಮಗಳ ಜೊತೆ ವಿಷ್ಣು ಮಾತನಾಡಿದ ಬಳಿಕ ಬಹಳ ಸ್ಪಷ್ಟವಾಗಿ ಅವರು ಪ್ರಕಾಶ್ ರಾಜ್‌ (Prakash Raj) ಮತ್ತು ಮೆಗಾ ಸ್ಟಾರ್ ಚಿರಂಜೀವಿಯನ್ನು (Chireanjeevi) ಉದ್ದೇಶಿಸಿ ಮಾತನಾಡಿದ್ದರು, ಎಂದು ಎಲ್ಲರಿಗೂ ತಿಳಿದು ಬಂದಿದೆ.

Read more Photos on
click me!

Recommended Stories