ದೇವರಕೊಂಡ ಜೊತೆ ಡೇಟಿಂಗ್: ಮೌನ ಮುರಿದ ರಶ್ಮಿಕಾ ಮಂದಣ್ಣ!

First Published | Feb 17, 2022, 5:12 PM IST

ಪುಷ್ಪ ದಿ ರೈಸ್ ಚಿತ್ರದ ಶ್ರೀವಲ್ಲಿ ಫೇಮ್‌ನ ನಟಿ ರಶ್ಮಿಕಾ ಮಂದಣ್ಣ (Rashmika Mandanna)  ಅವರ ಹೆಸರು ಅವರ ಸಹನಟ ವಿಜಯ್ ದೇವರಕೊಂಡ (Vijay Deverakonda) ಅವರ ಜೊತೆ ಗೀತ ಗೋವಿಂದಮ್‌ನಲ್ಲಿ ಒಟ್ಟಾಗಿ ನಟಿಸಿದಾಗಿನಿಂದಲೂ ಕೇಳಿಬರುತ್ತಿದೆ. ಇವರಿಬ್ಬರೂ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಈ ಕಾರಣದಿಂದಾಗಿ ಅವರ ಡೇಟಿಂಗ್ ಸುದ್ದಿ ಮಾಧ್ಯಮಗಳಲ್ಲಿ ಉಳಿಯುತ್ತದೆ. ಆದರೆ, ರಶ್ಮಿಕಾ ಮತ್ತು ವಿಜಯ್ ಒಬ್ಬರನ್ನೊಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿ ಮತ್ತು ಮದುವೆ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಮದುವೆ ಬಗ್ಗೆ ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಅವರು ಇನ್ನೂ ಸಿಂಗಲ್‌ ಆಗಿದ್ದಾರೆ ಮತ್ತು  ಮದುವೆಯ ಬಗ್ಗೆ ಯೋಚಿಸಿಯೇ ಇಲ್ವಂತೆ. ಸದ್ಯಕ್ಕೆ ನಾನು ಮದುವೆಗೆ ತುಂಬಾ ಚಿಕ್ಕವಳು, ಎಂದು ಎಂದು ಸಂದರ್ಶನದಲ್ಲಿ  ರಶ್ಮಿಕಾ ಹೇಳಿದ್ದಾರೆ. ಒಬ್ಬರನ್ನೊಬ್ಬರು ಗೌರವಿಸಿ, ಸಮಯ ನೀಡಿ ಮತ್ತು ಸೇಫ್‌ ಎನಿಸಿದಾಗ ನನಗೆ ಪ್ರೀತಿಯಾಗುತ್ತದೆ ಎಂದಿದ್ದಾರೆ ಕೊಡಗಿನ ಬೆಡಗಿ.

Tap to resize

ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ಅವರ ಪ್ರಕಾರ, ಪ್ರೀತಿಯನ್ನು ವಿವರಿಸುವುದು ಕಷ್ಟ, ಏಕೆಂದರೆ ಅದು ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಪ್ರೀತಿ ಎರಡೂ ಕಡೆಯಿಂದ ಇದ್ದಾಗ ಮಾತ್ರ ಉಳಿಯುತ್ತದೆ ಎಂದು ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದರ ಬಗ್ಗೆ ಏನು ಯೋಚಿಸಬೇಕೆಂದು ನನಗೆ ತಿಳಿದಿಲ್ಲ, ಏಕೆಂದರೆ ನಾನೀಗ ತುಂಬಾ ಚಿಕ್ಕವಳು. ಆದರೆ ಮದುವೆಯಾದ ನಂತರ, ನಿಮ್ಮನ್ನು ಇನ್ನೂ ಸರಳಗೊಳಿಸುವ ಯಾರಾದರೂ ಇರುತ್ತಾರೆ ಎಂದು ಮದುವೆಯ ಬಗ್ಗೆ ಮಾತನಾಡುತ್ತಾ ರಶ್ಮಿಕಾ ಮಂದಣ್ಣ ಹೇಳಿದರು.

ಜೂನ್ 2021 ರಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳೊಂದಿಗೆ Instagram ನಲ್ಲಿ 'ಆಸ್ಕ್ ಮಿ ಎನಿಥಿಂಗ್' ಸೆಷನ್ ಅನ್ನು ಆಯೋಜಿಸಿದ್ದರು. ರಶ್ಮಿಕಾ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಅವರ ಅಭಿಮಾನಿಯೊಬ್ಬರು ವಿಜಯ್ ದೇವರಕೊಂಡ ಅವರ ಜೊತೆ ನಟಿಯ ನೆಚ್ಚಿನ ಫೋಟೋವನ್ನು ಹಂಚಿಕೊಳ್ಳಲು ಕೇಳಿಕೊಂಡರು.

ಅಭಿಮಾನಿಗಳ ಮಾತನ್ನು ಗೌರವಿಸಿ, ವಿಜಯ್ ದೇವರಕೊಂಡ ಜೊತೆಗಿನ ಹಳೆಯ ಫೋಟೋವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ ಮತ್ತೊಬ್ಬ ಅಭಿಮಾನಿ (Fan) ವಿಜಯ್ ದೇವರಕೊಂಡ ನಿಮಗೆ ಎಷ್ಟು ವಿಶೇಷ ಎಂದು ಕೇಳಿದರು. ಇದರ ಮೇಲೆ ನಟಿ, ಹಗ್‌ ಬೂಮರಾಂಗ್ ಅನ್ನು ಹಂಚಿಕೊಂಡು ಬೆಸ್ಟ್ ಫ್ರೆಂಡ್ (Best Friend) ಎಂದು ಬರೆದಿದ್ದರು.

ರಶ್ಮಿಕಾ ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದರೂ,ಸ್ವತಃ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಜೋಸೆಫ್ ಅಂದರೆ ದಳಪತಿ ವಿಜಯ್ (Dalapathi Vijay) ಅವರ ಫ್ಯಾನ್‌ ಮತ್ತು ಅವರೊಂದಿಗೆ ಕೆಲಸ ಮಾಡುವ ಕನಸು (Dream) ಹೊಂದಿದ್ದಾರೆ. 

'ಮಾಸ್ಟರ್' ಚಿತ್ರದ ನಾಯಕ ವಿಜಯ್ (ತಲಪತಿ ವಿಜಯ್) ರಶ್ಮಿಕಾ ಮಂದಣ್ಣ ಅವರ ಕ್ರಶ್ (Crush) ಆಗಿದ್ದು, ಅವರ ಕನಸಿನ ಪಾತ್ರದಲ್ಲಿ ನಟಿಸಲು ಬಯಸುತ್ತಾರೆ. ಅಂದಹಾಗೆ, ರಶ್ಮಿಕಾ ಈ ವಿಷಯವನ್ನು ಒಂದಲ್ಲ, ಹಲವು ಸಂದರ್ಭಗಳಲ್ಲಿ ಈಗಾಗಲೇ ಹೇಳಿದ್ದಾರೆ. ‘ಭೀಷ್ಮ’ (Bheeshma) ಚಿತ್ರದ ಪ್ರಚಾರದ ವೇಳೆಯೂ ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದರು.

ಇದಲ್ಲದೆ, ರಶ್ಮಿಕಾ ಸಂದರ್ಶನವೊಂದರಲ್ಲಿ ತಮಿಳು (Tamil) ಸಂಸ್ಕೃತಿಯು (Culture) ತನ್ನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ ಮತ್ತು ತಾನು ತಮಿಳಿನ ಹುಡುಗನನ್ನು ಮದುವೆಯಾಗಲು ಬಯಸುತ್ತೇನೆ ಎಂದೂ ಹೇಳಿದ್ದರು. ರಶ್ಮಿಕಾ ಪ್ರಕಾರ, ತಮಿಳುನಾಡಿನ ಸಂಸ್ಕೃತಿ ಮತ್ತು ವಿಶೇಷವಾಗಿ ಅವರ ಆಹಾರದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ನಾನು ತಮಿಳು ಖಾದ್ಯವನ್ನು ಇಷ್ಟಪಡುತ್ತೇನೆ ಮತ್ತು ಇದು ತುಂಬಾ ಟೇಸ್ಟಿ ಎಂದಿದ್ದರು.

ನಾನು ತಮಿಳಿಗನನ್ನು ಮದುವೆಯಾಗುತ್ತೇನೆ ಮತ್ತು ತಮಿಳುನಾಡಿನ ಸೊಸೆಯಾಗುತ್ತೇನೆ ಎಂದು ರಶ್ಮಿಕಾ ಹೇಳಿದ್ದರು. ಸೌತ್ ಸೂಪರ್‌ಸ್ಟಾರ್ ಜೋಸೆಫ್ ವಿಜಯ್ ಕೂಡ ತಮಿಳಿಗರು. ಆದರೆ ಸಮಸ್ಯೆ ಎಂದರೆ ಅವರು ಈಗಾಗಲೇ ಮದುವೆಯಾಗಿದ್ದು, ಎರಡು ಮಕ್ಕಳ ತಂದೆ ಎಂದು ನೆಟ್ಟಿಗರು ಕಾಲೆಳೆದಿದ್ದರು.

Latest Videos

click me!