ಬರೀ ಸಲ್ಮಾನ್ ಖಾನ್ ಮಾತ್ರವಲ್ಲ, ಈ ಬಾಲಿವುಡ್ ನಟರೂ ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈ!

First Published | Aug 12, 2024, 5:09 PM IST

ಬಾಲಿವುಡ್ ಅಂಗಳದಲ್ಲಿ ಕಲಾವಿದರ ನಡುವೆ ಪ್ರೀತಿ ಹುಟ್ಟೋದು ಕಾಮನ್. ಆದ್ರೆ ಈ ಪ್ರೀತಿ ಕೆಲವರ ಬದುಕಿನಲ್ಲಿ ಮಾತ್ರ ಪ್ರೀತಿಯಾಗಿ ಮುಂದುವರಿಯುತ್ತದೆ. ಒಬ್ಬೊಬ್ಬ ನಟ ಅಥವಾ ನಟಿಯರ ಜೊತೆ ಹಲವರು ಹೆಸರು ಕೇಳಿ ಬರುತ್ತಿರುತ್ತದೆ.

ಅದರಲ್ಲಿಯೂ ಕೆಲವು ಬಾಲಿವುಡ್ ನಟರೊಂದಿಗೆ ಹಲವು ನಟಿಯರ ಹೆಸರು ಥಳಕು ಹಾಕಿಕೊಂಡಿರುತ್ತದೆ. ಇಬ್ಬರು ಕೈ ಕೈ ಹಿಡಿದು ಸುತ್ತಾಡಿರುತ್ತಾರೆ. ಅಂತಿಮವಾಗಿ ಯಾವುದೋ ಒಂದು ಕಾರಣಕ್ಕೆ ಜೋಡಿಗಳು ಬೇರೆಯಾಗಿರುತ್ತವೆ.

ಬಾಲಿವುಡ್‌ನಲ್ಲಿ ಫ್ಲರ್ಟ್ ಇಮೇಜ್ ಹೊಂದಿರುವ ನಟರನ್ನು ಕ್ಯಾಸನೋವಾ ಎಂದು ಕರೆಯಲಾಗುತ್ತದೆ. ಕ್ಯಾಸನೋವಾ ಅಂದ್ರೆ ಲವ್ವರ್ ಬಾಯ್ ಇಮೇಜ್ ಹೊಂದಿರುವ ನಟ. ಕ್ಯಾಸನೋವಾ ಪದಕ್ಕೆ ಮೋಸಗಾರ ಎಂಬ ಅರ್ಥವೂ ಸಿಗುತ್ತದೆ. ಹಾಗಾದ್ರೆ ಬಿಟೌನ್ ಟಾಪ್ 5 ಕ್ಯಾಸನೋವಾ ಹೀರೋಗಳ ಪಟ್ಟಿ ಇಲ್ಲಿದೆ.

Tap to resize

1.ಸಲ್ಮಾನ್ ಖಾನ್

ಬಾಲಿವುಡ್ ಭಾಯಿಜಾನ್ ಎಂದು ಕರೆಯಲ್ಪಡುವ ಸಲ್ಮಾನ್ ಖಾನ್ ಇಂದಿಗೂ ಮದುವೆಯಾಗದೇ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್ 1990-2010ರ ಅವಧಿಯಲ್ಲಿ ಲವರ್ ಬಾಯ್ ಇಮೇಜ್ ಹೊಂದಿದ್ದರು.

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಮದುವೆ ಆಗ್ತಾರೆ ಅಂತಾನೇ ಸುದ್ದಿಯಾಗಿತ್ತು. ಆದ್ರೆ ಹಾಗಾಗಿಲ್ಲ. ನಂತರ ಕತ್ರಿನಾ ಕೈಫ್, ಜರೀನಾ ಖಾನ್ ಜೊತೆಯಲ್ಲಿಯೂ ಸಲ್ಮಾನ್ ಖಾನ್ ಹೆಸರು ಕೇಳಿ ಬಂದಿತ್ತು. ಸಂಗೀತಾ ಬಿಜಲಾನಿ ಸಹ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಅಂತಾ ಕರೆಯಲಾಗುತ್ತದೆ.

2.ರಣ್‌ಬೀರ್ ಕಪೂರ್

ಮದುವೆಯಾದ್ರೂ ರಣ್‌ಬೀರ್ ಕಪೂರ್ ಲವ್ವರ್ ಬಾಯ್ ಅಂತಾನೇ ಗುರುತಿಸಿಕೊಳ್ಳುತ್ತಾರೆ. ನಟಿಯರು ಸೇರಿದಂತೆ ಹಲವರ ಜೊತೆ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆಲಿಯಾ ಭಟ್‌ ಮದುವೆಯಾಗಿ ಮುದ್ದು ಮಗಳಮ ತಂದೆಯಾಗಿ ಸೆಟಲ್ ಆಗಿದ್ದಾರೆ.

ಮದುವೆಗೂ ಮುನ್ನ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋನಮ್ ಕಪೂರ್ ಹಾಗೂ ಮಾಹಿರ್ ಖಾನ್ ಜೊತೆ ರಣ್‌ಬೀರ್ ಕಪೂರ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಬಿ ಟೌನ್ ಅಂಗಳ ಹೇಳುತ್ತದೆ. ಈ ನಟಿಯರು ಅಲ್ಲದೇ ಮಾಡೆಲ್‌ಗಳ ಜೊತೆಯಲ್ಲಿಯೂ ರಣ್‌ಬೀರ್ ಕಪೂರ್ ಸಂಬಬಂಧದಲ್ಲಿದ್ದರಂತೆ.

3.ರಣ್‌ವೀರ್ ಸಿಂಗ್

ಸಿನಿ ಅಂಗಳದಲ್ಲಿ ಸೆಕ್ಸಿ ಹೀರೋ ಅಂತ ಬಿಂಬಿತವಾಗಿರುವ ರಣ್‌ವೀರ್ ಸಿಂಗ್ ಹಲವು ನಟಿಯರ ಜೊತೆ ಡೇಟಿಂಗ್ ಅಂತ ಸುತ್ತಾಡಿದ ನಟ. ಬ್ಯಾಂಡ್ ಬಾಜಾ ಬಾರಾತ್ ಸಿನಿಮಾದ ವೇಳೆ ನಟಿ ಅನುಷ್ಕಾ ಶರ್ಮಾ ಜೊತೆ ರಣ್‌ವೀರ್ ಪ್ರೇಮಿಯಂತೆಯೇ ಸುತ್ತಾಡುತ್ತಿದ್ದರು. ಸೋನಾಕ್ಷಿ ಸಿನ್ಹಾ ಜೊತೆಯಲ್ಲಿಯೂ ರಣ್‌ವೀರ್ ಸಿಂಗ್ ಹೆಸರು ಕೇಳಿ ಬಂದಿತ್ತು. 

ಇಷ್ಟೆಲ್ಲಾ ಗಾಸಿಪ್ ಬಳಿಕ ದೀಪಿಕಾ ಪಡುಕೋಣೆಯನ್ನು ಮದುವೆಯಾಗಿರುವ ರಣ್‌ವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2018ರಂದು ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿದೇಶದಲ್ಲಿ ಮದುವೆಯಾಗಿದ್ದರು.

4.ಶಾಹಿದ್ ಕಪೂರ್

ಬಾಲಿವುಡ್ ಚಾಕ್ಲೇಟ್ ಹೀರೋ ಶಾಹಿದ್ ಕಪೂರ್ ಸಹ ಲವ್ವರ್ ಬಾಯ್ ಅಂತಾನೇ ಗಾಸಿಪ್‌ಗಳಿಗೆ ಆಹಾರವಾದವರು. ಶಾಹಿದ್‌ ಕಪೂರ್ ನಟಿಯರು ಮಾತ್ರವಲ್ಲದೇ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಕರೀನಾ ಕಪೂರ್, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ, ಅಮೃತ ರಾವ್, ಪ್ರಿಯಾಂಕಾ ಚೋಪ್ರಾ ಜೊತೆಯಲ್ಲಿಯೂ ಶಾಹಿದ್ ಕಪೂರ್ ರಿಲೇಶನ್ ಹೊಂದಿರುವ ಸುದ್ದಿಗಳು ಪ್ರಕಟವಾಗಿದ್ದವು. 2001ರಲ್ಲಿ ಮೀರಾ ರಜಪೂರ್ ಎಂಬವರನ್ನು ಶಾಹಿದ್‌ ಕಪೂರ್ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

5.ಅಕ್ಷಯ್ ಕುಮಾರ್

ಬಾಲಿವುಡ್ ಕಿಲಾಡಿ ಅಕ್ಕಿ ಅಕ್ಷಯ್ ಕುಮಾರ್ ಸಹ ಕೆಲವು ನಟಿಯರ ಜೊತೆ ಡೇಟ್ ಮಾಡಿದ್ದರು. ಟ್ವಿಂಕಲ್ ಖನ್ನಾ, ರವೀನಾ ಟಂಡನ್, ಪೂಜಾ ಬತ್ರಾ, ಆಯೇಷಾ ಜುಲ್ಕಾ ಜೊತೆ ಡೇಟ್ ಮಾಡಿದ್ದರು. ಕೊನೆಗೆ ಟ್ವಿಂಕಲ್ ಖನ್ನಾರನ್ನು ಮದುವೆಯಾಗಿದ್ದಾರೆ.

ಮದುವೆ ಬಳಿಕವೂ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಜೊತೆಯಲ್ಲಿಯೂ ಕೇಳಿ ಬಂದಿತ್ತು. ನಿಕ್ ಜೋನಸ್ ಜೊತೆಯಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದಾರೆ.

Latest Videos

click me!