ಯಂಗ್ ಹೀರೋ ನಿತಿನ್ ಕೆರಿಯರ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮಾರ್ಚ್ 28 ರಂದು ನಿತಿನ್ ನಟಿಸಿರುವ ರಾಬಿನ್ ಹುಡ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಭೀಷ್ಮಾ ನಂತರ ನಿತಿನ್ ವೆಂಕಿ ಕುಡುಮುಲ ಕಾಂಬಿನೇಷನ್‌ನಲ್ಲಿ ತೆರೆಗೆ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಬಿಡುಗಡೆಗೆ ವಾರವೂ ಇಲ್ಲ. ಹೀಗಾಗಿ ಚಿತ್ರತಂಡ ಸತತವಾಗಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ.