ನಾನು ಪ್ರತಿದಿನ ರಾತ್ರಿ ಖಂಡಿತವಾಗಿಯೂ ಐಸ್ ಕ್ರೀಮ್ ತಿನ್ನುತ್ತೇನೆ. ಅದನ್ನು ತಿನ್ನದೆ ನಾನು ಮಲಗುವುದಿಲ್ಲ. ಅಷ್ಟೇ ಅಲ್ಲ ನಾಗಾರ್ಜುನ್ ಜೊತೆಗೆ ಅವರ ಮನೆಯಲ್ಲಿ ಅವರ ಕುಟುಂಬದವರಿಗೂ ಕೂಡ ಅಂತಹ ಫೇವರಿಟ್ ಫುಡ್ ಯಾವುದು ಎಂದರೆ ಐಸ್ ಕ್ರೀಮ್ ಎಂಬ ಉತ್ತರ ಬರುತ್ತದೆ. ಒಮ್ಮೆ ನಟ ಶರ್ವಾನಂದ್, ಅಖಿಲ್ ಜೊತೆಗೆ ಅಮಲ ಅವರನ್ನು ಸಂದರ್ಶಿಸಿದ್ದರು. ಈ ಸಂದರ್ಶನದಲ್ಲಿ ನಿಮಗೆ ಫೇವರಿಟ್ ಫುಡ್ ಯಾವುದು ಎಂದು ಕೇಳಿದಾಗ, ಅಖಿಲ್ ಜೊತೆಗೆ ಅಮಲ ಕೂಡ ಐಸ್ ಕ್ರೀಮ್ ಎಂದಿದ್ದರು. ಆಗ ಕುಟುಂಬ ಸಮೇತ ಎಲ್ಲರೂ ಐಸ್ ಕ್ರೀಮ್ ತಿಂದು ಬದುಕುತ್ತಿದ್ದಾರಾ ಎಂದು ಶರ್ವಾನಂದ್ ತಮಾಷೆ ಮಾಡಿದ್ದರು. ಈ ರೀತಿ ನಾಗಾರ್ಜುನ್ ಮನೆಯಲ್ಲಿ ಐಸ್ ಕ್ರೀಮ್‌ಗೆ ಅಷ್ಟೊಂದು ವಿಶೇಷತೆ ಇದೆ.