ಅಕ್ಕಿನೇನಿ ನಾಗ ಚೈತನ್ಯ ಶೀಘ್ರದಲ್ಲೇ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಈಗಾಗಲೇ ಮದುವೆ ಕಾರ್ಯಕ್ರಮಗಳು ಕೂಡ ಆರಂಭವಾಗಿವೆ. ಅರಿಶಿನ ಶಾಸ್ತ್ರ ಕೂಡ ನೆರವೇರಿದೆ. ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಇಬ್ಬರೂ ಹಿರಿಯರ ಒಪ್ಪಿಗೆಯೊಂದಿಗೆ ಮದುವೆಯಾಗಲಿದ್ದಾರೆ. ನಾಗ ಚೈತನ್ಯ ಅವರ ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಸಮಂತಾ ಜೊತೆಗಿನ ಪ್ರೇಮ ಸಂಬಂಧದಿಂದ ಹಿಡಿದು ಮದುವೆ, ವಿಚ್ಛೇದನದವರೆಗೂ ಚೈತನ್ಯ ಸುದ್ದಿಯಲ್ಲಿದ್ದಾರೆ.