ಗಂಡು ಮಗುವಿಗೆ ಜನ್ಮ ನೀಡಿದ ನಟಿ: ಅಮ್ಮನಾದ TMC ಸಂಸದೆ ನುಸ್ರತ್

Published : Aug 26, 2021, 02:31 PM ISTUpdated : Aug 26, 2021, 02:44 PM IST

ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಸಂಸದೆ ಮೊದಲ ಮಗುವನ್ನು ಸ್ವಾಗತಿಸಿದ ನುಸ್ರತ್ ಜಹಾನ್

PREV
16
ಗಂಡು ಮಗುವಿಗೆ ಜನ್ಮ ನೀಡಿದ ನಟಿ: ಅಮ್ಮನಾದ TMC ಸಂಸದೆ ನುಸ್ರತ್

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಅವರು ಗುರುವಾರ (ಆಗಸ್ಟ್ 26) ಮಧ್ಯಾಹ್ನ ಕೋಲ್ಕತಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನುಸ್ರತ್ ಮತ್ತು ಆಕೆಯ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

26

ಬೆಂಗಾಲಿ ನಟಿ ನಟಿ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದ ಸುದ್ದಿ ಅವರ ಅಭಿಮಾನಿಗಳಿಗೆ ಸಂತಸ ಕೊಟ್ಟಿತ್ತು. ಎಲ್ಲರೂ ಮಗುವಿನ ನಿರೀಕ್ಷೆಯಲ್ಲಿದ್ದರು.

36

ನಟಿ ನುಸ್ರತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ತನ್ನ ಮೊದಲ ಮಗುವಿಗೆ ಜನ್ಮ ನೀಡಬಹುದು ಎಂದು ವರದಿಗಳು ಸೂಚಿಸಿದ್ದವು.

 

46

ನುಸ್ರತ್ ಜಹಾನ್ ಆಗಸ್ಟ್ 25 ರಂದು ಆಸ್ಪತ್ರೆಗೆ ದಾಖಲಾಗಿದ್ದು ಗುರುವಾರ ಡೆಲಿವರಿ ಆಗಬಹುದು. ನುಸ್ರತ್ ಜಹಾನ್ ಡ್ಯು ಡೇಟ್ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಎಂದಾಗಿತ್ತು. ನಟಿಯ ಅಭಿಮಾನಿಗಳು ಸಿಹಿ ಸುದ್ದಿ ಕೇಳಲು ಕಾಯುತ್ತಿದ್ದರು

56

ಮತ್ತೊಂದೆಡೆ, ನುಸ್ರತ್ ಜಹಾನ್ ನಟ ಯಶ್ ದಾಸ್‌ಗುಪ್ತಾ ಜೊತೆ ಡೇಟಿಂಗ್ ಮಾಡುವ ವಿಚಾರವೂ ಸುದ್ದಿಯಾಗಿತ್ತು. ಮಂಗಳವಾರ ಇಬ್ಬರೂ ಒಂದೇ ಇನ್‌ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದರು. ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋದರು ಎಂದೂ ಕೇಳಿಬಂದಿದೆ.

66

ಟಿಎಂಸಿ ಸಂಸದೆ ಈ ಹಿಂದೆ ಹೇಳಿಕೆಯಲ್ಲಿ ನಿಖಿಲ್ ಜೈನ್ ಜೊತೆಗಿನ ತನ್ನ ವಿವಾಹವು ಭಾರತದಲ್ಲಿ ಅಸಿಂಧುವಾಗಿದೆ. ಇಬ್ಬರೂ 2019 ರಲ್ಲಿ ಟರ್ಕಿಯ ಬೋಡ್ರಮ್‌ನಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್‌ನಲ್ಲಿ ಮದುವೆಯಾಗಿದ್ದರು ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories