ಲವ್ ಯೂ ಲವ್ ಯೂ ಎಂದು ಮಾಧುರಿ ಹಿಂದೆ ಸುತ್ತುತ್ತಿದ್ದ ಸಂಜಯ್

Published : Aug 25, 2021, 02:11 PM ISTUpdated : Aug 25, 2021, 03:08 PM IST

ಕೆಜಿಎಫ್ ವಿಲನ್ ಲವ್ ಸ್ಟೋರಿ ಹೇಗಿತ್ತು ? ಸಂಜು ಸಿನಿಮಾದಲ್ಲಿ ರಿವೀಲ್ ಆಗದ ಮಾಧುರಿ-ಸಂಜಯ್ ಕಹಾನಿ ಮಾಧುರಿ. ಸಂಜಯ್ ಬಗ್ಗೆ ಕೇಳಿ ಬಂದಿತ್ತು ಪ್ರೀತಿಯ ಸದ್ದು

PREV
18
ಲವ್ ಯೂ ಲವ್ ಯೂ ಎಂದು ಮಾಧುರಿ ಹಿಂದೆ ಸುತ್ತುತ್ತಿದ್ದ ಸಂಜಯ್

ಸಂಜಯ್ ದತ್ ಜೀವನ ಪೂರ್ತಿ ಕಾಂಟ್ರವರ್ಸಿಗಳೇ.. ಅವರು ಸ್ವಲ್ಪ ಸಮಾಧಾನದಿಂದ ಬದುಕುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಅಷ್ಟೇ. ಸಿನಿಮಾದಲ್ಲಿ ಮೋಸ್ಟ್ ಟ್ಯಾಲೆಂಟೆಡ್ ನಟನಿಗೆ ಸಿನಿಮಾ ಹಿನ್ನೆಲೆ ಇದೆ.

28

ಸಂಜು ಸಿನಿಮಾ ನೋಡಿದರೆ ನಟನ ಲವ್ ಲೈಫ್, ಅಫೇರ್ಸ್, ವಿವಾಹ ಕುರಿತು ಐಡಿಯಾ ಸಿಗುತ್ತದೆ. ಬರೋಬ್ಬರಿ 308 ಯುವತಿಯರನ್ನು ಡೇಟ್ ಮಾಡಿದ್ದೇನೆ ಎಂದು ಸ್ವತಃ ಸಂಜಯ್ ಅವರೇ ಹೇಳಿದ್ದಾರೆ.

38

ನಟ ಮೂರು ಬಾರಿ ಮದುವೆಯಾಗಿದ್ದಾರೆ. ಸಂಜು ಸಿನಿಮಾ ನೋಡಿದ್ದರೆ ಇವುಗಳ ಸ್ಪಷ್ಟ ಚಿತ್ರಣ ಸಿಗುತ್ತದೆ. ಆದರೆ ಇಲ್ಲೆಲ್ಲೂ ಕಾಣ ಸಿಗದ ಒಂದು ವಿಚಾರವಿದೆ. ಹೌದು. ಸಂಜು ಬದುಕಿನ ಪುಸ್ತಕದಲ್ಲಿ ಮಾಧುರಿ ದೀಕ್ಷಿತ್ ಕೂಡಾ ಇದ್ದಾರೆ.

48

ಅವರಿಬ್ಬರ ಸಂಬಂಧದ ಬಗ್ಗೆ ಅಷ್ಟಾಗಿ ಸುದ್ದಿಯಾಗಿರದಿದ್ದರೂ ಅಂದಿನ ಸಮಯದಲ್ಲಿ ಅದು ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಂಜು-ಮಾಧುರಿ ಸಂಬಂಧ ಹಾಟೆಸ್ಟ್ ಟಾಪಿಕ್ ಆಗಿತ್ತು. 1991ರಲ್ಲಿ ಸಾಜನ್ ಸಿನಿಮಾ ಮಾಡುವಾಗ ಇಬ್ಬರೂ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ.

58
Sajay

ಐ ಲವ್ ಯೂ ಎಂದು ಪಿಸುಗುಟ್ಟುತ್ತಾ ಸಂಜಯ್ ಸೆಟ್‌ನ ತುಂಬಾ ಮಾಧುರಿಯ ಹಿಂದಿಂದೆ ಸುತ್ತುತ್ತಿದ್ದ ಎಂದು ಅವರ ಜೊತೆ ಕೆಲಸ ಮಾಡಿದ ನಿರ್ದೇಶಕರೊಬ್ಬರು ಹೇಳಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ನಟಿ ಮಾಧುರಿ ದೀಕ್ಷಿತ್ ಕೂಡಾ ಸೆಟ್‌ನಲ್ಲಿ ನನ್ನನ್ನು ತುಂಬಾ ಹೆಚ್ಚು ನಗಿಸುವ ವ್ಯಕ್ತಿ ಸಂಜಯ್ ಎಂದಿದ್ದರು.

68

ಆದರೆ ತಾವಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದೆವು ಎಂಬುದನ್ನು ಮಾಧುರಿ ತಳ್ಳಿ ಹಾಕಿದ್ದಾರೆ. ಆದರೆ ಇಬ್ಬರ ನಡುವಿನ ಸಂಬಂಧ ಸ್ವಲ್ಪ ಸಮಯದ ತನಕ ಭಾರೀ ಸುದ್ದಿಯಾಗಿತ್ತು

78

ನಾನು ಅವಳ ಸಹೋದ್ಯೋಗಿಯಾಗಿದ್ದೆ. ಅವಳೊಂದಿಗೆ ಸಾಕಷ್ಟು ಸಿನಿಮಾ ಮಾಡಿದ್ದೇನೆ. ನನ್ನ ಎಲ್ಲಾ ಸಹ ನಟರೊಂದಿಗೆ ನಾನು ಸರಿಯಾದ ಬಾಂಧವ್ಯ ಹೊಂದಿರಬೇಕು. ಅದು ಮಾಧುರಿ ಅಥವಾ ಶ್ರೀದೇವಿ ಆಗಿರಬಹುದು ಎಂದಿದ್ದಾರೆ ಸಂಜಯ್ ದತ್.

88

ಗುಮ್ರಾದ ಮೊದಲ ಕೆಲವು ದಿನಗಳಲ್ಲಿ ನಾನು ಆರಾಮವಾಗಿರಲಿಲ್ಲ. ಏಕೆಂದರೆ ಶ್ರೀದೇವಿ ಹೇಗೆಂದು ನಿಮಗೆ ತಿಳಿದಿದೆ. ಅವಳು ದೂರವಾಗಿರುತ್ತಾಳೆ. ನಾನು ಅವಳೊಂದಿಗೆ ಮಾತನಾಡಬೇಕಾಗಿತ್ತು. ಹಾಗಾಗಿ ಮಾಧುರಿ ಹೇಳಿದ್ದು ನನಗೆ ಹೆಚ್ಚೇನೂ ಅನಿಸಲಿಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories