ಹೀರೋ ಆಗೋ ಮುನ್ನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡ್ತಿದ್ದ ಅಮಿತಾಭ್

First Published | Aug 25, 2021, 12:17 PM IST
  • ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತಾಭ್
  • ಐಶ್ವರ್ಯಾ ರೈ ಮಾವನ ಕಷ್ಟದ ದಿನಗಳಿವು

ನಟ ಅಮಿತಾಬ್ ಬಚ್ಚನ್ ಮಂಗಳವಾರ ಕಾಲಾ ಪತ್ತರ್ ಸಿನಿಮಾ 42 ವರ್ಷಗಳನ್ನು ಪೂರೈಸಿದ್ದರಿಂದ ತಮ್ಮ ಪ್ರಯಾಣ ರಿಕಾಲ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಮಿತಾಬ್ ಅವರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದಾಗ ತಮ್ಮ ಮೊದಲ ಕೆಲಸವನ್ನು ನೆನಪಿಸಿಕೊಂಡಿದ್ದಾರೆ.

ಕಾಲಾ ಪತ್ತರ್‌ ಸಿನಿಮಾ ಕೊಲಾಜ್ ಅನ್ನು ಹಂಚಿಕೊಂಡ ಅಮಿತಾಬ್ ಬಚ್ಚನ್, ಕಾಲಾ ಪತ್ತರ್‌ಗೆ 42 ವರ್ಷ. ನಾನು ಕಲ್ಲಿದ್ದಲಿನಲ್ಲಿ ಕೆಲಸ ಮಾಡಿದಾಗ ನನ್ನ ವೈಯಕ್ತಿಕ ಅನುಭವದ ಚಿತ್ರದ ಹಲವು ಘಟನೆಗಳಿದ್ದವು.

Tap to resize

ನನ್ನ ಕೊಲ್ಕತ್ತಾ ಕಂಪನಿಯ ಇಲಾಖೆ. ಸಿನಿಮಾಗೆ ಸೇರುವ ಮೊದಲು ನನ್ನ ಮೊದಲ ಕೆಲಸ. ವಾಸ್ತವವಾಗಿ ಧನ್ಬಾದ್ ಮತ್ತು ಅಸನ್ಸೋಲ್ ನಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ

1979 ರಲ್ಲಿ ಬಿಡುಗಡೆಯಾದ ಕಾಲಾ ಪತ್ತಾರ್‌ನಲ್ಲಿ ಅಮಿತಾಬ್ ಹಿಂದಿನ ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಆಗಿ ನಟಿಸಿದರು. ಅವರು ತಮ್ಮ ಗತವನ್ನು ಮರೆಯಲು ಗಣಿಗಳಲ್ಲಿ ಕೆಲಸ ಮಾಡಿದರು.

ಈ ಚಿತ್ರದಲ್ಲಿ ಶಶಿ ಕಪೂರ್, ಶತ್ರುಘ್ನ ಸಿನ್ಹಾ, ಸಂಜೀವ್ ಕುಮಾರ್, ರಾಖೀ, ಪರ್ವೀನ್ ಬಾಬಿ, ನೀತು ಸಿಂಗ್, ಪ್ರೇಮ್ ಚೋಪ್ರಾ ಮುಂತಾದವರಿದ್ದರು. ಈ ಸಿನಿಮಾ ಯಶ್ ಚೋಪ್ರಾ ನಿರ್ದೇಶಿಸಿ, ನಿರ್ಮಿಸಿದ್ದಾರೆ.

ಚಿತ್ರಕಥೆಯನ್ನು ಸಲೀಂ – ಜಾವೇದ್ ಬರೆದಿದ್ದಾರೆ. ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ಆರಾಧನಾ ಸ್ಥಾನವನ್ನು ಪಡೆಯಿತು. ಹಿಂದಿ ಸಿನಿಮಾ ಪ್ರೇಮಿಗಳು ಇದನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ.

ಈ ಹಿಂದೆ 2016 ರಲ್ಲಿ ಅಮಿತಾನ್, 1962 ರಲ್ಲಿ ಕೋಲ್ಕತ್ತಾದಲ್ಲಿ 7-8 ವರ್ಷಗಳ ಕಾಲ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡಿದೆ ಎಂದು ಹಲವರಿಗೆ ತಿಳಿದಿಲ್ಲ. ನಗರದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಈಗ ಅನೇಕ ಫ್ಲೈಓವರ್‌ಗಳನ್ನು ಮಾಡಲಾಗಿದೆ. ವಿಕ್ಟೋರಿಯಾ ಸ್ಮಾರಕದ ಎದುರು ಪುಚ್ಚ ಪಾನಿ ತಿನ್ನುವುದು ನನಗೆ ತುಂಬಾ ಇಷ್ಟ ಎಂದಿದ್ದಾರೆ

Latest Videos

click me!