‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಿಸಿದ್ದ ಸಚಿನ್ ಅವರು ಇದೀಗ ಹೊಸ ಬಾಲಿವುಡ್ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರದ ಹೀರೋ ಟೈಗರ್ ಶ್ರಾಫ್.
25
ಬಾಲಿವುಡ್‌ನ ಖ್ಯಾತ ನಾಯಕ ನಟ ಟೈಗರ್ ಶ್ರಾಫ್ ಅವರು ಈ ಸಿನಿಮಾದ ಕತೆ ಕೇಳಿ ಥ್ರಿಲ್ ಆಗಿ ಬೇರೊಂದು ಸಿನಿಮಾವನ್ನು ಹೋಲ್ಡ್ ಮಾಡಿ ಈ ಸಿನಿಮಾ ಆರಂಭಿಸಲು ಸೂಚನೆ ನೀಡಿದ್ದಾರೆ.
35
ಹಾಗಾಗಿ ಸಚಿನ್ ನಿರ್ದೇಶನದ ಸಿನಿಮಾ ತಕ್ಷಣವೇ ಶುರುವಾಗಲಿದ್ದು, ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ‘ಅನಿಮಲ್’, ‘ಕಬೀರ್ ಸಿಂಗ್’ ಸಿನಿಮಾ ನಿರ್ಮಿಸಿದ್ದ ಮುರದ್ ಖೇತನಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಇದೊಂದು ಭಾವನಾತ್ಮಕ ಕತೆಯುಳ್ಳ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ತಾರಾಗಣ, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಇದೊಂದು ಹೈಬಜೆಟ್ ಸಿನಿಮಾ ಆಗಿದ್ದು, ಬಹುತೇಕ ಮುಂಬೈನಲ್ಲಿಯೇ ಚಿತ್ರೀಕರಣ ನಡೆಯಲಿದೆ.
55
ಸಚಿನ್ ಅವರು ಶಾಹೀದ್ ಕಪೂರ್ ನಟನೆಯ ‘ಅಶ್ವತ್ಥಾಮ’ ಸಿನಿಮಾ ನಿರ್ದೇಶಿಸಬೇಕಿತ್ತು. ಆ ಸಿನಿಮಾ ಮುಂದಕ್ಕೆ ಹೋಗಿರುವುದರಿಂದ ಸಚಿನ್ ಅವರು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.