ಕಳೆದ ಎರಡ್ಮೂರು ವರ್ಷಗಳಿಂದ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಜನರ ಸಂಖ್ಯೆ ಇಳಿಮುಖವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಒಟಿಟಿದು.
ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಕೆಲವೇ ದಿನಗಳಲ್ಲಿ ಒಟಿಟಿ ವೇದಿಕೆಯಲ್ಲಿಯೂ ರಿಲೀಸ್ ಆಗುತ್ತವೆ. ಅಮೆಜಾನ್, ಸೋನಿ ಲಿವ್, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ಹಲವು ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವೆ.
ಈ ವಾರವೂ ಸಹ ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಹಾಲಿವುಡ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಯಾವ ಒಟಿಟಿಯಲ್ಲಿ ಯಾವ ಸಿನಿಮಾ ರಿಲೀಸ್ ಆಗುತ್ತಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ದಿ ಸಿಕ್ಸ್ ಟ್ರಿಪಲ್ ಏಟ್ (The Six Triple Eight)
ದಿ ಸಿಕ್ಸ್ ಟ್ರಿಪಲ್ ಏಟ್ (The Six Triple Eight)
ಡಿಸೆಂಬರ್ 20ರಂದು ಅಮೆರಿಕನ್ ಡ್ರಾಮಾ ದಿ ಸಿಕ್ಸ್ ಟ್ರಿಪಲ್ ಏಟ್ ಬಿಡುಗಡೆಯಾಗಲಿದೆ. ಈ ಕಥೆ 855ರ ಮಹಿಳೆಯರ ಸುತ್ತ ಸುತ್ತುತ್ತದೆ. ತಾರತಮ್ಯ ವಿರುದ್ಧ ಈ ಕಥೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.