ರಜನಿಕಾಂತ್ ಫಿಟ್‌ನೆಸ್ ರಹಸ್ಯ ಬಯಲು; ಈ ಆಹಾರ ಅಪ್ಪಿತಪ್ಪಿಯೂ ತಿನ್ನೋಲ್ಲ!

First Published | Dec 19, 2024, 11:55 AM IST

74 ವರ್ಷದಲ್ಲೂ ರಜನಿಕಾಂತ್ ಅವರ ದೇಹ ಮತ್ತು ಮನಸ್ಸು ಯುವಕರಂತೆ ಚಟುವಟಿಕೆಯಿಂದಿರಲು ಕಾರಣವೇನು? ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿ ಬಗ್ಗೆ ತಿಳಿಯೋಣ.

ಅಮೀರ್ ಜೊತೆ ರಜನಿ

ರಜನಿಕಾಂತ್ ಅಂದ್ರೆ ಸ್ಟೈಲ್. ಇತ್ತೀಚೆಗೆ 74ನೇ ಹುಟ್ಟುಹಬ್ಬ ಆಚರಿಸಿಕೊಂಡ ರಜನಿ, ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೈಪುರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಮೀರ್ ಖಾನ್ ಜೊತೆಗಿನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

'ಕೂಲಿ' ಚಿತ್ರದ ತಾರಾಗಣ

ನಾಗಾರ್ಜುನ, ಸೌಬಿನ್ ಷಹೀರ್, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್, ರೆಬಾ ಮೋನಿಕಾ ಜಾನ್, ಸುದೀಪ್ ಕಿಶನ್ ಮುಂತಾದ ತಾರೆಗಳು ಈ ಚಿತ್ರದಲ್ಲಿದ್ದಾರೆ. ಚಿನ್ನದ ಕಳ್ಳಸಾಗಣೆ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. 'ಸಿಕ್ಕಿಟ್ಟು' ಹಾಡಿನ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.

Tap to resize

ರಜನಿಯ ಮಸ್ತ್ ಡ್ಯಾನ್ಸ್

ಅನಿರುದ್ ಅವರ ಸಂಗೀತ ಎಂದಿನಂತೆ ಅದ್ಭುತ. ರಜನಿ 300 ನೃತ್ಯಗಾರರ ಜೊತೆ ಕರ್ಚೀಫ್ ಹಿಡಿದು ಕುಣಿದಿದ್ದು ಸೂಪರ್ ಆಗಿದೆ. ಕೂಲಿ ಸಿನಿಮಾದಲ್ಲಿನ ಹಾಡುಗಳು ಸದ್ದು ಮಾಡಲಿವೆ. ಹಾಡಿನಲ್ಲಿ ಯುವಕರನ್ನೇ ಮೀರಿಸುವಂತೆ ಸ್ಟೆಪ್ ಹಾಕಿದ್ದಾರೆ. 

ಯುವಕನಂತೆ ಕಾಣುವ ರಜನಿ

'ಕೂಲಿ' ಚಿತ್ರದಲ್ಲಿ ರಜನಿ ಡ್ಯಾನ್ಸ್ ನೋಡಿ, ಅವರಿಗೆ 74 ವರ್ಷ ಅಂತ ಯಾರು ನಂಬ್ತಾರೆ ಅಂತ ಅಶ್ಚರ್ಯಪಟ್ಟಿದ್ದಾರೆ. 45 ವರ್ಷಗಳ ನಂತರವೂ ಅದೇ ಚಟುವಟಿಕೆ ಕಾಯ್ದುಕೊಂಡಿದ್ದಾರೆ ಎಂದು ಬಾಲಿವುಡ್ ನಟರೇ ಅಚ್ಚರಿ ಪಟ್ಟಿದ್ದಾರೆ.
 

ರಜನಿಯ ಆರೋಗ್ಯ ರಹಸ್ಯ

ಈ ವಯಸ್ಸಿನಲ್ಲೂ ರಜನಿ ಚಟುವಟಿಕೆಯಿಂದಿರಲು ಕಾರಣ ಅವರ ಜೀವನಶೈಲಿ. ಧೂಮಪಾನ, ಮದ್ಯಪಾನ ತ್ಯಜಿಸಿ, ಯೋಗ, ವ್ಯಾಯಾಮ ಮಾಡ್ತಾರೆ. ತೋಟದಲ್ಲಿ ಸಮಯ ಕಳೆಯುವುದು ಇಷ್ಟ.

ರಜನಿ ತ್ಯಜಿಸಿರುವ ಆಹಾರ

ಫಾಸ್ಟ್ ಫುಡ್, ಚೀಸ್, ಮೇಯೊನೈಸ್, ಮಾಂಸದ ಕೊಬ್ಬು, ಸಕ್ಕರೆ, ಉಪ್ಪು, ಕೃತಕ ಸಿಹಿ ಪದಾರ್ಥಗಳನ್ನು ತ್ಯಜಿಸಿದ್ದಾರೆ. ಹಣ್ಣು, ತರಕಾರಿ, ಪ್ರೋಟೀನ್ ಸೇವಿಸುತ್ತಾರೆ. ಸರಿಯಾದ ನಿದ್ದೆ, ಧ್ಯಾನ ಮಾಡ್ತಾರೆ. 

Latest Videos

click me!