‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿಗೆ ‘ಗರ್ಲ್‌ಫ್ರೆಂಡ್’ ಆಗಿ ರಶ್ಮಿಕಾ ಬಣ್ಣ ಹಚ್ತಿದ್ದಾರೆ. ‘ಅನಿಮಲ್’ ಸಿನಿಮಾ 500 ಕೋಟಿ ರೂ. ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ. ಬಾಲಿವುಡ್‌ನಲ್ಲಿ ಅದೃಷ್ಟ ಖುಲಾಯಿಸುತ್ತಿದ್ದಂತೆ ಗರ್ಲ್‌ಫ್ರೆಂಡ್ ಆಗೋಕೆ ಸಜ್ಜಾಗಿದ್ದಾರೆ.
ಗೀತಾ ಆರ್ಟ್ಸ್ ಬ್ಯಾನರ್‌ನ ರೂವಾರಿ ಅಲ್ಲು ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ ದಿ ಗರ್ಲ್‌ಫ್ರೆಂಡ್’ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ತಿದ್ದಾರೆ.
ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವಿಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾಗೆ ಹೀರೋ ಆಗಿ ದೀಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಮೊದಲ ದಿನದ ಶೂಟಿಂಗ್‌ನಲ್ಲಿ ರಶ್ಮಿಕಾ ಜೊತೆ ದೀಕ್ಷಿತ್ ಶೆಟ್ಟಿ ಕೂಡ ಭಾಗಿಯಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.
ರಶ್ಮಿಕಾ- ದೀಕ್ಷಿತ್ ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆ ಇದ್ದು, ಈ ಹೊಸ ಜೋಡಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದರ ಬಗ್ಗೆ ಈಗಾಗಲೇ ಕೌತುಕ ನಿರ್ಮಾಣ ಮಾಡಿದೆ. ರಶ್ಮಿಕಾ ಪಾತ್ರದ ಸುತ್ತ ಸುತ್ತುವ ಈ ಕಥೆಗಾಗಿ ನಟಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ.
ಚಿತ್ರದಲ್ಲಿ ಅವರಿಗೆ ಫೈಟಿಂಗ್ ಸೀನ್ಸ್ ಕೂಡ ಇದೆ. ಮೊದಲ 20 ದಿನದ ಶೂಟಿಂಗ್‌ನಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳ ಶೂಟ್ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರನ್ನ ಸಾಹಸ ದೃಶ್ಯಗಳಲ್ಲಿಯೂ ಕಣ್ತುಂಬಿಕೊಳ್ಳಬಹುದು. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.