ಬಾಹುಬಲಿ, ಬಾಹುಬಲಿ 2 ಸಿನಿಮಾಗಳಿಂದ ರಾಜಮೌಳಿ ಇಂಡಿಯನ್ ಸಿನಿಮಾ ಇಂಡಸ್ಟ್ರೀನ ಲೆವೆಲ್ನೇ ಹೆಚ್ಚಿಸಿಬಿಟ್ರು. ಒಳ್ಳೊಳ್ಳೆ ಕಥೆ ಇದ್ರೆ ಭಾಷೆ ಏನೇ ಇರಲಿ ಜನ ನೋಡ್ತಾರೆ ಅಂತ ತೋರಿಸಿಕೊಟ್ರು. ತೆಲುಗು ಸಿನಿಮಾ ಮಾರ್ಕೆಟ್ ನೂರು ಕೋಟಿ ಇಲ್ಲದ ಸಮಯದಲ್ಲಿ ಐನೂರು - ಆರುನೂರು ಕೋಟಿ ಬಜೆಟ್ ಸಿನಿಮಾ ಮಾಡೋದು ದೊಡ್ಡ ರಿಸ್ಕ್. ಬಾಹುಬಲಿ, ಬಾಹುಬಲಿ 2 ಸಿನಿಮಾಗಳನ್ನ ಮಾಡೋದು ಕತ್ತಿ ಮೇಲೆ ನಡಿಗೆ ತರ ಇತ್ತು. ಏನಾದ್ರೂ ತಪ್ಪಾದ್ರೆ ನೂರಾರು ಕೋಟಿ ನಷ್ಟ ಆಗ್ತಿತ್ತು. ತನ್ನ ಟ್ಯಾಲೆಂಟ್ ಮೇಲೆ ನಂಬಿಕೆ ಇಟ್ಟುಕೊಂಡು ರಾಜಮೌಳಿ ರಿಸ್ಕ್ ತಗೊಂಡ್ರು. ನಿರ್ಮಾಪಕರೂ ಸಪೋರ್ಟ್ ಮಾಡಿದ್ರು. ಬಾಹುಬಲಿ 2 ಇಂಡಿಯನ್ ಬಾಕ್ಸ್ ಆಫೀಸ್ನ ಧೂಳೆಬ್ಬಿಸಿಬಿಡ್ತು. ಇಂಡಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅನ್ನೋ ರೆಕಾರ್ಡ್ ಇನ್ನೂ ಬಾಹುಬಲಿ 2 ಹೆಸರಲ್ಲೇ ಇದೆ. ಆರ್ ಆರ್ ಆರ್ ಇಂದ ರಾಜಮೌಳಿ ಇನ್ನೂ ದೊಡ್ಡ ಲೆವೆಲ್ಗೆ ಹೋದ್ರು. ಜೇಮ್ಸ್ ಕ್ಯಾಮರೂನ್, ಸ್ಟೀವನ್ ಸ್ಪೀಲ್ಬರ್ಗ್ ತರ ದೊಡ್ಡ ಡೈರೆಕ್ಟರ್ಗಳೇ ರಾಜಮೌಳಿನ ಮೆಚ್ಚಿಕೊಂಡ್ರು.