ಶೂಟ್ ಮಧ್ಯೆ ಟೈಂ ಸಿಕ್ಕಿದ್ರೆ ಇದೇ ಮಾಡೋದಂತೆ ರಶ್ಮಿಕಾ

Published : Aug 18, 2021, 10:56 AM ISTUpdated : Aug 18, 2021, 02:41 PM IST

ಶೂಟಿಂಗ್ ಮಧ್ಯೆ ಸ್ವಲ್ಪ ಬಿಡುವು ಸಿಕ್ರೆ ರಶ್ಮಿಕಾ ಏನ್ ಮಾಡ್ತಾರೆ ಗೊತ್ತಾ ? ಅವ್ರೇ ಫೊಟೋ ಸಮೇತ ಹೇಳಿದ್ದಾರೆ ನೋಡಿ

PREV
16
ಶೂಟ್ ಮಧ್ಯೆ ಟೈಂ ಸಿಕ್ಕಿದ್ರೆ ಇದೇ ಮಾಡೋದಂತೆ ರಶ್ಮಿಕಾ
Rashmika

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕ್ಯೂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂ ಮೂಲಕ ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ತಲೆಯ ಮೇಲೆ ಮಲ್ಲಿಗೆ ಹೂವಿನ ದಂಡೆ ಇಟ್ಟು ಮುದ್ದು ರಾಜಕುಮಾರಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

26
Rashmika

ಕೂದಲು ಫ್ರಿಯಾಗಿ ಹರಡಿ ಬಿಟ್ಟು ಚಂದದ ಮಲ್ಲಿಗೆ ದಂಡೆಯನ್ನು ತಲೆಮೇಲಿಟ್ಟಿದ್ದಾರೆ. ಹಾಗೇ ಈ ತಮ್ಮ ಹೊಸ ಲುಕ್‌ನಿಂದ ಥ್ರಿಲ್ ಆಗಿ ಫುಲ್ ಸ್ಮೈಲ್‌ನಲ್ಲಿ ನಟಿ ಪೋಸ್ ಕೊಟ್ಟಿದ್ದಾರೆ.

36
Rashmika

ಮೆರೂನ್ ಬ್ಲೌಸ್, ಗ್ರೇ ಸೀರೆಗೆ ತಿಳಿ ಜರಿಯಂಚು ಇದ್ದು ಕೈತುಂಬಾ ಬಳೆಗಳನ್ನೂ ಹಾಕಿದ್ದಾರೆ. ಇದಕ್ಕೆ ಆಕ್ಸೈಡ್ ಜ್ಯುವೆಲ್ಲರಿಯನ್ನು ಧರಿಸಿ ಮ್ಯಾಚ್ ಮಾಡಿಕೊಂಡಿದ್ದಾರೆ. ಎಡಗೈಯಲ್ಲಿ ಕಪ್ಪು ಬಣ್ಣದ ದೃಷ್ಟಿ ಬ್ರೇಸ್‌ಲೆಟ್ ಕೂಡಾ ಇದೆ.

46
Rashmika

ನಿಮಗಿಷ್ಟವಾದದ್ದನ್ನು ಆರಿಸ್ಕೊಳ್ಳಿ. ಅಂದಹಾಗೆ ಶೂಟಿಂಗ್ ನಡುವೆ ಕೆಲಸವಿಲ್ಲದೇ ಇದ್ದಾಗ ನಾನು ಇದನ್ನೇ ಮಾಡುತ್ತೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಕಿರಿಕ್ ಚೆಲುವೆ. ಚಂದದ್ದೊಂದು ಚಿಕ್ಕ ಬಿಂದಿ ನಟಿಯ ಲುಕ್ ಕಂಪ್ಲೀಟ್ ಮಾಡಿದೆ.

56
Rashmika

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳ ಜೊತೆ ಟಚ್‌ನಲ್ಲಿರುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಗೀತಾ ಗೋವಿಂದಂ ನಟಿ 20 ಮಿಲಿಯನ್ ಫಾಲೋವರ್ಸ್‌ಗಳ ಗಡಿ ಮುಟ್ಟಿದ್ದಾರೆ.

66

ರಶ್ಮಿಕಾ ಪ್ರಸ್ತುತ ಶರ್ವಾನಂದ್ ಜೊತೆ ಆಡವಲ್ಲು ಮೀಕು ಜೋಹಾರ್ಲು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾ ಪುಷ್ಪದಲ್ಲಿ ಅವರು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳಲ್ಲದೆ, ಅವರು ಬಾಲಿವುಡ್‌ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories