ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ವರೆಗೆ XYZಭದ್ರತೆ ಪಡೆದ 7 ಸೆಲೆಬ್ರಿಟಿಗಳು!

Published : Oct 09, 2023, 05:38 PM IST

ಬಾಲಿವುಡ್‌ನ ಕಿಂಗ್‌ ಖಾನ್‌  ಶಾರುಖ್​ ಖಾನ್​  (Shah Rukh Khan) ಅವರಿಗೆ ಪಠಾಣ್​, ಜವಾನ್​ ಯಶಸ್ಸಿನ ಬೆನ್ನಲ್ಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದ್ದು, ಅವರ ದೂರಿನ ಮೇಲೆ ಅವರಿಗೆ ವೈ ಪ್ಲಸ್​ ಭದ್ರತೆ ನೀಡಲಾಗಿದೆ. ಈ ರೀತಿ ಸಿನಿಮಾ ನಟರಿಗೆ ಭದ್ರತೆ ನೀಡುತ್ತಿರವುದು ಇದೇ ಮೊದಲಲ್ಲ. ವಿವೇಕ್ ಅಗ್ನಿಹೋತ್ರಿಯಿಂದ ಕಂಗನಾ ರಣಾವತ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅನುಪಮ್ ಖೇರ್ ಮುಂತಾದ ನಟರು ಈ ಪಟ್ಟಿಯಲ್ಲಿ ಇದ್ದಾರೆ ಸರ್ಕಾರವು ಭದ್ರತೆಯನ್ನು ನೀಡಿರುವ ಬಾಲಿವುಡ್‌ ಸೆಲೆಬ್ರೆಟಿಗಳು ಇವರುಗಳು.  

PREV
17
ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ವರೆಗೆ XYZಭದ್ರತೆ ಪಡೆದ 7 ಸೆಲೆಬ್ರಿಟಿಗಳು!

ಅಮಿತಾಬ್ ಬಚ್ಚನ್ Y ಯಿಂದ  X ಭದ್ರತೆ:
ಮಿತಾಬ್ ಬಚ್ಚನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದ ನಂತರ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಅವರ ಭದ್ರತೆಯನ್ನು ವೈಯಿಂದ ಎಕ್ಸ್ ಕ್ಯಾಟಗರಿಗೆ ವರ್ಗಾಯಿಸಲಾಯಿತು.

  

27

ಕಂಗನಾ ರಣಾವತ್ Y+ ಭದ್ರತೆ:
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದಾಗ ಕಂಗನಾ ರಣಾವತ್ ಅವರಿಗೆ ಬೆದರಿಕೆಗಳು ಬಂದವು. ಅವರ ಹೇಳಿಕೆಯು ಶಿವಸೇನಾ ನಾಯಕರನ್ನು ಕೆರಳಿಸಿತು, ಆ ಸಮಯದಲ್ಲಿ ನಟಿಗೆ ವೈ ಪ್ಲಸ್‌ ಭದ್ರತೆಯನ್ನು ನೀಡಲಾಯಿತು.


 

37

ವಿವೇಕ್ ರಂಜನ್ ಅಗ್ನಿಹೋತ್ರಿ Y ಭದ್ರತೆ:
ಕಾಶ್ಮೀರ ಫೈಲ್ಸ್‌  ನಂತರ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಅನೇಕ ಕೊಲೆ ಬೆದರಿಕೆಗಳು ಬಂದವು ಮತ್ತು ಬೆದರಿಕೆಯಿಂದಾಗಿ ಅವರಿಗೆ Y ವರ್ಗದ ಭದ್ರತೆಯನ್ನು ನೀಡಲಾಯಿತು.
 

47

ಅನುಪಮ್ ಖೇರ್ X ಸೆಕ್ಯುರಿಟಿ:
ಕಾಶ್ಮೀರ್‌ ಫೈಲ್ಸ್‌  ಚಲನಚಿತ್ರ  ಬಿಡುಗಡೆ ನಂತರ ಬಂದ ಬೆದರಿಕೆಗಳ ಹಿನ್ನೆಲೆಯಲ್ಲಿ ನಟ ಅನುಪಮ್ ಖೇರ್ ಅವರಿಗೆ X ವರ್ಗದ ಭದ್ರತೆ ನೀಡಲಾಗಿದೆ.

57

ಅಕ್ಷಯ್ ಕುಮಾರ್  X ಸೆಕ್ಯುರಿಟಿ:
ಈ ಪಟ್ಟಿಯಲ್ಲಿರುವ ಇನ್ನೊಬ್ಬ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಅವರು. ಮಹಾರಾಷ್ಟ ಸರ್ಕಾರ ನಟ ಅಕ್ಷಯ್ ಕುಮಾರ್ X+ ಭದ್ರತೆ ನೀಡಿದೆ.

67

ಶಾರುಖ್ ಖಾನ್ Y+ ಭದ್ರತೆ:
ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸರ್ಕಾರವು ನಟನ ಭದ್ರತೆಯನ್ನು Y + ವರ್ಗಕ್ಕೆ ಬದಲಾಯಿಸಿದೆ.

77

ಸಲ್ಮಾನ್ ಖಾನ್ Y+ ಭದ್ರತೆ:
ಸಲ್ಮಾನ್ ಖಾನ್ ಅವರು ಈ ಹಿಂದೆ X ಭದ್ರತೆಯನ್ನು ಹೊಂದಿದ್ದರು. ಇತ್ತೀಚೆಗಷ್ಟೇ ಬಿಷೋನಿ ಗ್ಯಾಂಗ್‌ನಿಂದ ನಟನಿಗೆ ಹಲವಾರು ಕೊಲೆ ಬೆದರಿಕೆಗಳು ಬಂದಿದ್ದವು. ಅದರ ನಂತರ  ಮುಂಬೈ ಪೋಲೀಸರು ಅದನ್ನು Y+ ಗೆ ಅಪ್‌ಗ್ರೇಡ್ ಮಾಡಬೇಕೆಂದು ನಿರ್ಧರಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories